ಚಿಕ್ಕೋಡಿ: ಜೈನರಿಗೆ ಪ್ರತ್ಯೇಕ ಆಯೋಗ ರಚನೆಯಾಗಲಿ-ಗುಣಧರನಂದಿಜಿ ಮಹಾರಾಜರು
Team Udayavani, Feb 10, 2024, 3:35 PM IST
ಉದಯವಾಣಿ ಸಮಾಚಾರ
ಚಿಕ್ಕೋಡಿ: ಶಾಂತಿ ,ಅಂಹಿಸೆ ಸಾರುವ ಜೈನ ಧರ್ಮ ಎಲ್ಲರಿಗೂ ಒಳ್ಳೆಯದನ್ನು ಬಯಸಿದೆ. ಸರಳ ಸಜ್ಜನಿಕೆಯ ಜೈನ ಸಮಾಜಕ್ಕಾಗಿ ಸರಕಾರವು ಪ್ರತ್ಯೇಕ ಜೈನ ನಿಗಮ ಸ್ಥಾಪಿಸಬೇಕು, ಮಹಾನಗರಗಳಲ್ಲಿ ಜೈನ ಹಾಸ್ಟೆಲ್‌ಗಳ ಸ್ಥಾಪನೆಯಾಗಬೇಕು, ಪ್ರತಿ ಜಿಲ್ಲೆಗಳಲ್ಲಿ ಬಡಜನರ ಉಚಿತ ಚಿಕಿತ್ಸೆಗಾಗಿ ಆಸ್ಪತ್ರೆಗಳ ಸ್ಥಾಪನೆಯಾಗಬೇಕು ಎಂದು ರಾಷ್ಟ್ರಸಂತ 108 ಆಚಾರ್ಯ ಶ್ರೀ ಗುಣಧರನಂದಿಜಿ ಮಹಾರಾಜರು ಒತ್ತಾಯಿಸಿದರು.
ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ 33 ನೇ ದೀಕ್ಷಾ ಜಯಂತಿ ಅಂಗವಾಗಿ ಆಯೋಜಿಸಿದ್ದ ಬೃಹತ್ ಜೈನ ಸಮ್ಮೇಳನದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಜೈನ ಮುನಿಗಳ ಸುರಕ್ಷತೆ ಆಗಬೇಕು.
ಜೈನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯವಸ್ಥೆಯಾಗಬೇಕು. ಪ್ರತಿ ಹಳ್ಳಿ ಹಳ್ಳಿಗಳಿಗೆ ಮುನಿ ನಿವಾಸಗಳು, ಮಂಗಲ
ಕಾರ್ಯಾಲಯಗಳು ನಿರ್ಮಾಣವಾಗಬೇಕು ಹಾಗೂ ಕರ್ನಾಟಕ ಜೈನ ಸಂಸ್ಕೃತಿಯ ಸಂರಕ್ಷಣೆ ಆಗಬೇಕು ಹಾಗೂ ಜೈನ ಸಮಾಜಕ್ಕೆ ಒಳ್ಳೆಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ನಾಂದಣಿಯ ಶ್ರೀ ಜಿನಸೇನ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ಜಿನಶಾಸನ ಉಳಿದು ಬೆಳೆಯಬೇಕು. ಜೈನ ಸಮಾಜ ಬಾಂಧವರು ಧರ್ಮ ಕ್ಷೇತ್ರಗಳನ್ನು ರಕ್ಷಿಸಲು ಒಗ್ಗೂಡಿ ಸರಕಾರದ ಮುಂದೆ ಬೇಡಿಕೆ ಇಡಬೇಕು, ವಿಹಾರದ ಸಮಯದಲ್ಲಿ ಜೈನ ಮುನಿಗಳಿಗೆ ಸರಕಾರ ರಕ್ಷಣೆ ನೀಡಬೇಕೆಂದರು.
ಕೊಲ್ಹಾಪುರದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಜೈನ ಸಮಾಜಕ್ಕೆ ಅಲ್ಪಸಂಖ್ಯಾತ ಆಯೋಗದಿಂದ ಏನು ಲಾಭವಾಗುತ್ತಿಲ್ಲ. ಅದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜೈನರಿಗೆ ಸ್ವತಂತ್ರ ಆಯೋಗ ಸ್ಥಾಪನೆ ಮಾಡಿ ಜೈನ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಆ ನಿಟ್ಟಿನಲ್ಲಿ ರಾಷ್ಟ್ರಸಂತ 108 ಆಚಾರ್ಯ ಶ್ರೀ ಗುಣಧರನಂದಿಜಿ ಮಹಾರಾಜರು ಒಳ್ಳೆಯ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜನೆ ಮಾಡಿದ್ದು ಜೈನ ಸಮಾಜಕ್ಕೆ ದಾರಿದೀಪವಾಗಿದೆ ಎಂದರು.
ಅಮ್ಮಿನಭಾವಿಯ ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಶ್ರೀ ಆಯಿಕಾರತ್ನ 105 ಪ್ರಜ್ಞೆಮತಿ ಮಾತಾಜಿ, ಜೈನ ಸಮಾಜದ ಮುಖಂಡರಾದ ಮಾಜಿ ಸಚಿವ ವೀರಕುಮಾರ ಪಾಟೀಲ, ಉತ್ತಮ ಪಾಟೀಲ, ಸುದರ್ಶನ ಪಾಟೀಲ, ಸಂಜಯ ನಾಡಗೌಡ, ಅರುಣ ಯಲಗುದ್ರಿ, ಧುಳಗೌಡ ಪಾಟೀಲ, ಡಾ| ಎನ್.ಎ.ಮಗದುಮ್ಮ, ದಾದಾಸಾಹೇಬ ಪಾಟೀಲ, ಬಾಳಾಸಾಹೇಬ ಪಾಟೀಲ, ಅಣ್ಣಾಸಾಹೇಬ ಹಾವಲೆ, ಅಣ್ಣಾಸಾಹೇಬ ಖೊತ ಮುಂತಾದವರು ಮಾತನಾಡಿದರು.
ವೇದಿಕೆ ಮೇಲೆ ಹಾಲಸಿದ್ಧನಾಥ ಕಾರ್ಖಾನೆ ಸಂಚಾಲಕ ಜಯಕುಮಾರ ಖೋತ, ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ, ಮುಂಬೈನ ಸಂಜಯ ಮುಂಡಾ, ಬಾಳಾಸಾಹೇಬ ಪಾಟೀಲ, ಡಾ ಪದ್ಮರಾಜ ಪಾಟೀಲ, ಪ್ರಕಾಶ ಪಾಟೀಲ, ಭರತೇಶ ಬನವಣೆ, ಚೇತನ ಪಾಟೀಲ, ಡಾ ಸಿ ಬಿ ಪಾಟೀಲ, ಜಿನ್ನಪ್ಪಾ ಅಸ್ಕಿ, ದೀಪಕ ಖೊತ, ಅಣ್ಣಾಸಾಹೇಬ
ಖೊತ, ಕುಮಾರ ಕುರುಚೆ, ಕುಮಾರ ಮಗದುಮ್ಮ, ಸೋಮನಖೊತ, ಆರ್.ಬಿ.ಖೋತ, ಆಣ್ಣಾಸಾಹೇಬ ಭೆಂಡವಾಡೆ, ಸಚೀನ ಖೊತ, ಜಿತೇಂದ್ರ ಖೊತ, ವಿಕಿ ಖೊತ, ಅಮ್ಮನ್ನವರ, ಹನಿಮನಾಳೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು,
ಸಮ್ಮೇಳನದಂಗವಾಗಿ ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ, ಕನ್ನಡ ಸಂಗೀತಗಾರ ರಾಜೇಶ ಕೃಷ್ಣನ್ ಇವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಲಕ್ಷಾಂತರ ಜೈನ ಸಮಾಜ ಬಾಂಧವರು, ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.