White Paper ಹೊರತರಲು ಕಾರಣವೇನು?; ಮತ್ತೆ ಕಾಂಗ್ರೆಸ್ ವಿರುದ್ಧ ನಿರ್ಮಲಾ ಕಿಡಿ
ಸಾಧಿಸಿದ್ದನ್ನೆಲ್ಲ ಹಾಳು ಮಾಡುವ ಸಾಮರ್ಥ್ಯ ಕಾಂಗ್ರೆಸ್‌ಗೆ ಇದೆ...
Team Udayavani, Feb 10, 2024, 4:30 PM IST
ಹೊಸದಿಲ್ಲಿ: ”ಸಾಧಿಸಿದ್ದನ್ನೆಲ್ಲ ಹಾಳು ಮಾಡುವ ಪಾಂಡಿತ್ಯ ಕಾಂಗ್ರೆಸ್‌ಗೆ ಇದೆ” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಲೋಕಸಭೆಯಲ್ಲಿ ಮತ್ತೆ ಕಿಡಿ ಕಾರಿದ್ದಾರೆ.
ರಾಜ್ಯಸಭಾ ಕಲಾಪದಲ್ಲಿ ‘ಭಾರತೀಯ ಆರ್ಥಿಕತೆಯ ಶ್ವೇತಪತ್ರ’ ಕುರಿತ ಅಲ್ಪಾವಧಿಯ ಚರ್ಚೆಗೆ ಉತ್ತರಿಸುತ್ತಾ,”10 ವರ್ಷಗಳ ಯುಪಿಎ ಆಡಳಿತದಲ್ಲಿ ಹಣದುಬ್ಬರವನ್ನು ನಿರ್ವಹಿಸುವಾಗ ಹಿಂದಿನ ಸರಕಾರದ ಸಾಧನೆಗಳನ್ನು ಹಾಳುಮಾಡುವ ಕಲೆಯನ್ನು ಹಳೆಯ ಪಕ್ಷವು ಕರಗತ ಮಾಡಿಕೊಂಡಿತ್ತು” ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 2004-2014ರ ಅವಧಿಯಲ್ಲಿ ಆರ್ಥಿಕತೆಯ ದುರುಪಯೋಗ ಮಾಡಿಕೊಳ್ಳಲಾಗಿತ್ತು. ಮೋದಿ ನೇತೃತ್ವದ ಸರಕಾರವು ಆರ್ಥಿಕತೆಯನ್ನು ಮರಳಿ ಹಳಿಗೆ ತರಲು 10 ವರ್ಷಗಳ ಕಾಲ ಶ್ರಮಿಸಿತು. ಭಾರತವನ್ನು ‘ಫ್ರೇಜಿಲ್ ಫೈವ್’ ನಿಂದ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಗೆ ತಂದಿತು. ಭಾರತವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಸರಕಾರದ ಕೊನೆಯ ವರ್ಷದಲ್ಲಿ ಹಣದುಬ್ಬರ ದರವು ಶೇಕಡಾ 4 ಕ್ಕಿಂತ ಕಡಿಮೆ ಇತ್ತು, ಆದರೆ 10 ವರ್ಷಗಳ ಯುಪಿಎ ಆಡಳಿತದಲ್ಲಿ ಇದು ಗಣನೀಯವಾಗಿ ಹೆಚ್ಚಿತ್ತು ಎಂದು ಮತ್ತೆ ಆರೋಪಿಸಿದರು.
ಶ್ವೇತಪತ್ರ ಹೊರತರಲು ಕಾರಣಗಳನ್ನು ನೀಡಿದ ಸಚಿವೆ ನಿರ್ಮಲಾ, ”ಈ ಹಿಂದೆ ಇದೇ ರೀತಿಯ ಕ್ರಮ ಕೈಗೊಂಡಿದ್ದರೆ ಸಂಸ್ಥೆಗಳು, ಹೂಡಿಕೆದಾರರು ಮತ್ತು ಜನರ ವಿಶ್ವಾಸದ ಮೇಲೆ ಪರಿಣಾಮ ಬೀರಬಹುದಿತ್ತು. ಚುನಾಯಿತ ಸರಕಾರವಾಗಿ, ಯುಪಿಎ ಆಡಳಿತದಲ್ಲಿ ಆರ್ಥಿಕತೆಯ ನೈಜ ಚಿತ್ರಣ, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮೋದಿ ಸರಕಾರ ಕೈಗೊಂಡ ಪ್ರಯತ್ನಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ಸಂಸತ್ತಿಗೆ ತಿಳಿಸುವುದು ಕಡ್ಡಾಯವಾಗಿತ್ತು” ಎಂದು ಹೇಳಿದರು.
ಭಾರತಕ್ಕೆ ಸ್ವಚ್ಛ ಮತ್ತು ಜವಾಬ್ದಾರಿಯುತ ಆಡಳಿತದ ಅಗತ್ಯವಿದೆಯೇ ಹೊರತು ಸಂವಿಧಾನೇತರ ಸಂಸ್ಥೆಯ ಮೂಲಕ ಆಡಳಿತವಲ್ಲ ಎಂದು ಸೋನಿಯಾ ಗಾಂಧಿ ನೇತೃತ್ವದ ಹಿಂದಿನ ರಾಷ್ಟ್ರೀಯ ಸಲಹಾ ಮಂಡಳಿಯ ಕುರಿತು ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.