Love ಮಾಡ್ಬೇಡಿ ಅನ್ನಲ್ಲ, ಮಾಡಿ ಅಂತ್ಲೂ ಹೇಳಲ್ಲ!: ಯೋಗರಾಜ್ ಭಟ್ ಚಿಟ್ ಚಾಟ್
Team Udayavani, Feb 11, 2024, 6:10 AM IST
ಈ ವರ್ಷದ “ಪ್ರೇಮಿಗಳ ದಿನಾಚರಣೆ’ ಕೊಂಚ ಸ್ವೀಟ್ ಮತ್ತು ಕೊಂಚ ಸಾಲ್ಟ್ ಆಗಿರಲಿ ಎನ್ನುವ ಉದ್ದೇಶದಿಂದ “ಕತ್ಲಲ್ಲಿ ಕರಡೀಗೆ ಜಾಮೂನು ತಿನ್ನಿಸುವ’ ಸಾಹಸ ಮಾಡಿದ, ಪಂಚ್‌ಲೈನ್‌ಗೆ ಹೆಸರಾಗಿರುವ ನಿರ್ದೇಶಕ ಯೋಗರಾಜ್ ಭಟ್ ಅವರನ್ನು ಚರ್ಚೆಗೆ ಎಳೆದೆವು. ವಿಶಿಷ್ಟ ಡೈಲಾಗ್‌ಗಳಿಗೆ ಹೆಸರಾಗಿರುವ ಭಟ್ಟರು ಉದಯವಾಣಿ ಸಾಪ್ತಾಹಿಕ ಸಂಪದದ ಪ್ರಶ್ನೆಗಳಿಗೆ ಉತ್ತರಿಸಿದ್ದು ಹೀಗೆ…
ಇದು ಟೆಕ್ನಾಲಜಿ ಯುಗ. ಮಾರ್ಕೆಟ್‌ಗೆ ಎಐ ಬಂದಿದೆ. ಪ್ರೀತಿಯಲ್ಲಿ ಗೆಲ್ಲೋದು ಹೇಗೆ ಅನ್ನೋದಕ್ಕೆ ಉತ್ತರ ಇನ್ನಾದರೂ ಸಿಗಬಹುದೇ?
ಪ್ರೀತಿಗೂ, ಆರ್ಟಿಫಿಶಿಯಲ್‌ಗೂ ಆಗಿಬರೊಲ್ಲ. ಪ್ರೀತಿ ಅನ್ನೋದು ತುಂಬಾ ಜೆನ್ಯುನ್ ಆದ ಫೀಲ….
ಲೈಫ್ನಲ್ಲಿ ಲವ್ ಇದೆಯೊ ಅಥವಾ ಲವ್‌ನಲ್ಲಿ ಲೈಫ್ ಇದೆಯೊ?
ಪ್ರೀತಿನೇ ಜೀವನ ಅಲ್ಲ; ಪ್ರೀತಿ ಬಿಟ್ಟರೆ ಜೀವನವೇ ಇಲ್ಲ.
ಪ್ರೀತಿ ಕುರುಡು ಅಂತಾರಲ್ಲ.. ಅದಕ್ಕೆ ಕನ್ನಡಕ, ಲೆನ್ಸ್ ಹಾಕಿದ್ರೆ ಕಾಣಿಸಬಹುದಾ?
ಪ್ರೀತಿ ಕುರುಡು ಹೌದೊ ಅಲ್ವೊ ಗೊತ್ತಿಲ್ಲ, ಆದರೆ ಕನ್ನಡಕ ಅಂತೂ ಯಾವತ್ತೂ ಕುರುಡೇ…
ಲವ್ ಮಾಡ್ತಿರುವಾಗ ನಿನಗೋಸ್ಕರ ಆಕಾಶದಲ್ಲಿರೊ ಚಂದ್ರನನ್ನೇ ತಂದುಕೊಡ್ತಿನಿ ಅಂತಿದ್ದ ಹುಡುಗರು, ಮದುವೆಯಾದ ಬಳಿಕ, ಮನೆಗೆ ತರಕಾರಿ ಅಥವಾ ದಿನಸಿ ತಂದುಕೊಡಿ ಅಂತ ಹೆಂಡತಿ ಕೇಳಿದ್ರೆ ಸಾಕು- ಯಾರಿಗ್ ಹೇಳ್ಳೋಣ ನಮ್ಮ ಪ್ರಾಬ್ಲಿಮ್ಮು? ಅಂತ ಹಾಡ್ತಾರಲ್ಲ ಏನ್ ಹೇಳ್ಳೋಣ ಸರ್ ಇಂತವ್ರಿಗೆ?
ಇದು ಫಸ್ಟ್ ಆಫ್ ಅಲ್ ತರಕಾರಿ, ದಿನಸಿ ತಂದ್ಕೊಡು ಅನ್ನೊವ್ರದ್ದೇ ಪ್ರಾಬ್ಲಿಮ್ಮು. ಯಾಕೆಂದ್ರೆ ಆ ಮುಂಡೆಮಗ ಅವಾಗ ಚಂದ್ರನನ್ನ ತಂದೊRಡ್ತಿನಿ ಅಂದಾಗಲೇ ಇವ್ರು ಕೇಳ್ಬೇಕಿತ್ತು; ಮೊದಲು ಚಂದ್ರನನ್ನ ತಂದ್ಕೊಡು ಆಮೇಲೆ ಹೇಳ್ತಿನಿ ಅಂತ.
‘ಲವ್ವಲ್ಲಿ ಕಣ್ಣೀರು ಕಂಪಲ್ಸರಿ’ ಅಂತ ಬರೆದಿದ್ರಿ, ಆದ್ರೂ ಜನ ಪ್ರೀತಿ ಮಾಡ್ತಾರಲ್ಲ ಯಾಕೆ?
ಲವ್ ಮಾಡ್ಬೇಡಿ ಅಂತ ನಾವು ಹೇಳಿಲ್ವಲ್ಲ; ಮಾಡಿ ಅಂತಲೂ ನಾವು ಹೇಳಲ್ಲ.
ಸಂದರ್ಶನ: ಮೇಘನಾ ಕಾನೇಟ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು
MUST WATCH
ಹೊಸ ಸೇರ್ಪಡೆ
Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.