Srinivas ವಿಶ್ವವಿದ್ಯಾನಿಲಯದ 6ನೇ ಘಟಿಕೋತ್ಸವ; “ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ’


Team Udayavani, Feb 11, 2024, 12:04 AM IST

Srinivas ವಿಶ್ವವಿದ್ಯಾನಿಲಯದ 6ನೇ ಘಟಿಕೋತ್ಸವ; “ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ’

ಸುರತ್ಕಲ್‌: ಶ್ರೀನಿವಾಸ ವಿಶ್ವವಿದ್ಯಾನಿಲಯದ ಆರನೇ ವಾರ್ಷಿಕ ಘಟಿಕೋತ್ಸವ ಶ್ರೀನಿವಾಸ ವಿಶ್ವವಿದ್ಯಾಲಯ ಮುಕ್ಕ ಕ್ಯಾಂಪಸ್‌ನಲ್ಲಿ ಶನಿವಾರ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಎಂಸಿಎಫ್‌ ವೈದ್ಯಕೀಯ ಸೇವೆಯ ಜಂಟಿ ಪ್ರಧಾನ ವ್ಯವಸ್ಥಾಪಕ ಡಾ| ಕೆ. ಯೋಗೀಶ ಮಾತನಾಡಿ, ವಿದ್ಯಾಭ್ಯಾಸದ ಬಳಿಕ ಸವಾಲಿನ ಜಗತ್ತಿಗೆ ತೆರಳುವ ಸಂದರ್ಭ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಿರಿ. ಉತ್ತಮ ಜೀವನ ರೂಪಿಸಿಕೊಡಲು ನೆರವಾದ ಪೋಷಕರು, ಶಿಕ್ಷಕರು, ಶಿಕ್ಷಣ ಸಂಸ್ಥೆಯನ್ನು ಸದಾ ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಹೊಸ ಹೊಸ ಅವಕಾಶಗಳು ಇಂದು ಹೆಚ್ಚಿದ್ದು, ಸ್ಟಾರ್ಟ್‌ ಅಪ್‌ನಂತಹ ಸ್ವಂತ ಯೋಜನೆ ಆರಂಭಿಸಲು ಅವಕಾಶವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿ.ವಿ. ಕುಲಾಧಿಪತಿ ಹಾಗೂ ಎ. ಶಾಮರಾವ್‌ ಪ್ರತಿಷ್ಠಾನದ ಅಧ್ಯಕ್ಷ ಡಾ| ಸಿಎ ಎ. ರಾಘವೇಂದ್ರ ರಾವ್‌ ಮಾತನಾಡಿ, ನಮ್ಮ ಪ್ರಪಂಚದ ಬೆಳವಣಿಗೆಗೆ ಪ್ರತಿಯೊಂದು ವೃತ್ತಿಯು ನಿರ್ಣಾಯಕವಾಗಿದೆ ಎಂದರು. ಸಮಾಜ ಮತ್ತು ಜನರ ಸೇವೆ ಮಾಡಲು ಪ್ರಯತ್ನಿಸುವುದು ಒಬ್ಬರು ಕೈಗೊಳ್ಳಬಹುದಾದ ದೊಡ್ಡ ಪ್ರಯತ್ನವಾಗಿದೆ. ಯಾವುದೇ ಕೆಲಸವು ಇರಲಿ, ಅದನ್ನು ಗೌರವಿಸಬೇಕು ಮತ್ತು ತಮ್ಮ ಕೆಲಸಕ್ಕೆ ಸಮರ್ಪಿಸಬೇಕು ಎಂದರು.

ಗೌರವ ಅತಿಥಿಯಾಗಿದ್ದ ಸಹ ಕುಲಾಧಿಪತಿ, ಎ. ಶಾಮರಾವ್‌ ಫೌಂಡೇಶನ್‌ ಉಪಾಧ್ಯಕ್ಷ ಡಾ| ಎ. ಶ್ರೀನಿವಾಸ್‌ ರಾವ್‌ ಶುಭ ಹಾರೈಸಿದರು. ಉಪಕುಲಪತಿ ಡಾ| ಸತ್ಯನಾರಾಯಣ ರೆಡ್ಡಿ ವರದಿ ಮಂಡಿಸಿದರು.

ಶ್ರೀನಿವಾಸ ವಿ.ವಿ. ಆಡಳಿತ ಮಂಡಳಿ ಸದಸ್ಯರಾದ ಪ್ರೊ| ಎ. ಮಿತ್ರ ಎಸ್‌. ರಾವ್‌, ಆಡಳಿತ ಮಂಡಳಿ ಟ್ರಸ್ಟಿ ಸದಸ್ಯರಾದ ಎ. ವಿಜಯಲಕ್ಷ್ಮೀ ಆರ್‌.ರಾವ್‌, ಪದ್ಮಿನಿ ಕುಮಾರ್‌, ಡಾ| ಉದಯ್‌ ಕುಮಾರ್‌ ಮಯ್ಯ, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ| ಅನಿಲ್‌ ಕುಮಾರ್‌, ಮೌಲ್ಯಮಾಪನ ಕುಲಸಚಿವ ಡಾ| ಶ್ರೀನಿವಾಸ್‌ ಮಯ್ಯ ಡಿ., ಅಭಿವೃದ್ಧಿ ರಿಜಿಸ್ಟ್ರಾರ್‌ ಡಾ| ಅಜಯ್‌ ಕುಮಾರ್‌, ಅಕಾಡೆಮಿಕ್‌ ರಿಜಿಸ್ಟ್ರಾರ್‌ ಡಾ| ಆದಿತ್ಯ ಕುಮಾರ್‌ ಮಯ್ಯ, ವಿವಿಧ ಸಂಸ್ಥೆಗಳ ಡೀನ್‌ಗಳು ಉಪಸ್ಥಿತರಿದ್ದರು.

ಘಟಿಕೋತ್ಸವದ ಸಮಯದಲ್ಲಿ, 1,257 ಪದವೀಧರರು (ಪಿಜಿ – 358, ಯುಜಿ – 881) ತಮ್ಮ ಪ್ರಮಾಣಪತ್ರಗಳನ್ನು ಪಡೆದರು. ವಿ.ವಿ.ಯು 144 ರ್‍ಯಾಂಕ್‌ ಪ್ರಕಟಿಸಿದ್ದು, ಒಟ್ಟು 38 ಪದವೀಧರರು ಕುಲಪತಿಗಳ ಚಿನ್ನದ ಪದಕ ಪಡೆದರು.

ಹೆಚ್ಚುವರಿಯಾಗಿ, 1 ಡಿಎಸ್‌ಸಿ ಮತ್ತು 17 ಪಿಎಚ್‌ಡಿಯನ್ನು ನೀಡಲಾಯಿತು. ಕುಲಸಚಿವ ಡಾ| ಅನಿಲ್‌ ಕುಮಾರ್‌ ಸ್ವಾಗತಿಸಿ, ಅಭಿವೃದ್ಧಿ ಕುಲಸಚಿವ ಡಾ| ಅಜಯ್‌ ಕುಮಾರ್‌ ವಂದಿಸಿದರು. ಡಾ| ಅಂಬಿಕಾ ಮಲ್ಯ, ಡಾ| ವಿಜಯಲಕ್ಷ್ಮೀ ನಾಯಕ್‌, ಪ್ರೊ| ರೋಹನ್‌ ಫೆರ್ನಾಂಡಿಸ್‌ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

1

Ullal: ಸೋಮೇಶ್ವರ ಬೀಚ್‌; ಮೂಲಸೌಕರ್ಯ ಕಣ್ಮರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.