Skin Health: ಚರ್ಮದ ಆರೋಗ್ಯಕ್ಕೆ ಅತ್ಯಂತ ಆವಶ್ಯಕ ಅಂಶ ಕೊಲಾಜೆನ್‌


Team Udayavani, Feb 11, 2024, 10:41 AM IST

3-health-1

ನಮ್ಮ ದೇಹದಲ್ಲಿ ಅತ್ಯಂತ ಪ್ರಮುಖವಾಗಿರುವ ಪ್ರೊಟೀನ್‌ ಎಂದರೆ ಅದು ಕೊಲಾಜೆನ್‌. ಇದು ಲಿಗ್ಮೆಂಟ್‌ಗಳು, ಕೊಬ್ಬು, ಟೆಂಡನ್‌ ಮತ್ತಿತರ ಭಾಗಗಳಲ್ಲಿ ಕಂಡುಬರುತ್ತದೆ. ನಮ್ಮ ದೇಹದ ಎಲುಬುಗಳ ಸಂರಚನೆಯ ಸಮಗ್ರತೆಗೆ ಇದು ಅತ್ಯವಶ್ಯಕವಾಗಿದೆಯಲ್ಲದೆ ನಮ್ಮ ದೇಹದ ವಿವಿಧ ಅಂಗಾಂಗಗಳ ಜೋಡಣೆಗೆ ನೆರವಾಗುತ್ತದೆ. ನಮ್ಮ ದೇಹದಲ್ಲಿ ಕೊಲಾಜೆನ್‌ ಪ್ರಮಾಣ ಚೆನ್ನಾಗಿದ್ದಲ್ಲಿ ಕೊಲಾಜೆನ್‌ ಹೊಂದಿರುವ ಜೀವಕೋಶಗಳು ಸದೃಢವಾಗಿರುತ್ತವೆ. ನಮ್ಮ ಚರ್ಮ ಆರೋಗ್ಯಯುತವಾಗಿರಬೇಕಾದರೆ ನಮ್ಮ ದೇಹದಲ್ಲಿ ಕೊಲಾಜೆನ್‌ ಉತ್ಪಾದನೆಯಾಗಬೇಕಾದ್ದು ಅಗತ್ಯ. ಅಲೊವೆರಾ ಬಳಕೆಯಿಂದ ಅಥವಾ ಕೆಲವು ನಿರ್ದಿಷ್ಟ ಆಹಾರವಸ್ತುಗಳನ್ನು ಸೇವಿಸುವ ಮೂಲಕ ನಮ್ಮ ದೇಹದಲ್ಲಿ ಕೊಲಾಜೆನ್‌ ಉತ್ಪಾದನೆ ಹೆಚ್ಚುವಂತೆ ಮಾಡಬಹುದಾಗಿದೆ. ಪ್ರಚೋದನೆಗೆ ಒಳಗಾದಾಗ ಕೊಲಾಜೆನ್‌ ಆರೋಹಣ ಕ್ರಮದಲ್ಲಿ ವೃದ್ಧಿಸುತ್ತ ಹೋಗುತ್ತದೆ. ದೇಹದಲ್ಲಿ ಕೊಲಾಜೆನ್‌ ಹೆಚ್ಚು ಇದ್ದಷ್ಟು ದೇಹದ ಅದರ ಉತ್ಪಾದನೆ ಮತ್ತು ಶೇಖರಣೆಯನ್ನು ಹೆಚ್ಚಿಸುತ್ತದೆ.

ಅಲೊವೆರಾ

ನಮ್ಮಲ್ಲಿ ಬಹಳ ಹಿಂದಿನಿಂದಲೂ ಗಾಯಗಳನ್ನು ಗುಣಪಡಿಸುವುದಕ್ಕೆ ಅಲೊವೆರಾ ಉಪಯೋಗಿಸುತ್ತಿದ್ದರು. ಚರ್ಮದ ಮೇಲೆ ಹಚ್ಚಿದಾಗ ಅಥವಾ ಹೊಟ್ಟೆಗೆ ಸೇವಿಸಿದಾಗ ಅಲೊವೆರಾ ಕೊಲಾಜೆನ್‌ ರೂಪುಗೊಳ್ಳುವುದಕ್ಕೆ ನೆರವಾಗುತ್ತದೆ. ಇದರಿಂದಾಗಿಯೇ ಅಲೋವೆರಾ ಉಪಯೋಗಿಸಿದಾಗ ಗಾಯಗಳು, ಸುಟ್ಟಗಾಯಗಳು ಬೇಗನೆ ಗುಣ ಹೊಂದುವುದು. ಜೀವಕೋಶಗಳ ಆರೋಗ್ಯಕ್ಕೆ ಪೂರಕವಾಗಿರುವ ಅಲೊವೆರಾದ ಈ ಗುಣವು ನಮ್ಮ ಚರ್ಮವು ಹೆಚ್ಚು ಕೊಲಾಜೆನ್‌ ಉತ್ಪಾದಿಸುವಂತೆ ಮಾಡುತ್ತದೆ. ಅಲೊವೆರಾವನ್ನು ಶುದ್ಧ ಸ್ವರೂಪದಲ್ಲಿ ಚರ್ಮದ ಮೇಲೆ ಹಚ್ಚಬಹುದು ಅಥವಾ ಹೊಟ್ಟೆಗೂ ಸೇವಿಸಬಹುದು.

ವಿಟಮಿನ್‌ ಸಿ

ಹ್ಯಾಲುರಾನಿಕ್‌ ಆಮ್ಲದ ಉತ್ಪಾದನೆಗೆ ವಿಟಮಿನ್‌ ಅತ್ಯಗತ್ಯ. ನಾವು ವಿಟಮಿನ್‌ ಸಿಯನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸದೆ ಇದ್ದರೆ ಹ್ಯಾಲುರಾನಿಕ್‌ ಆಮ್ಲ ಹೊಂದಿರುವ ಆಹಾರಗಳನ್ನು ಸೇವಿಸಿದರೂ ಹೆಚ್ಚು ಪ್ರಯೋಜನ ವಾಗದು. ದೇಹದಲ್ಲಿ ಕೊಲಾಜೆನ್‌ ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹ್ಯಾಲುರಾನಿಕ್‌ ಆಮ್ಲ ಹೊಂದಿದೆ. ನಮ್ಮ ದೇಹದಲ್ಲಿ ಹ್ಯಾಲುರಾನಿಕ್‌ ಆಮ್ಲ ಸಹಜವಾಗಿ ಇರುತ್ತದೆ; ಆದರೆ ವಯಸ್ಸಾಗುತ್ತಿದ್ದಂತೆ ಅದರ ಪ್ರಮಾಣ ಕಡಿಮೆಯಾಗುತ್ತದೆ.

ಕೊಲಾಜೆನ್‌ ಮತ್ತು ಹ್ಯಾಲುರಾನಿಕ್‌ ಆಮ್ಲ – ಇವೆರಡೂ ಚರ್ಮದ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಅಂಶಗಳಾಗಿದ್ದು, ವಿಟಮಿನ್‌ ಸಿ ಮತ್ತು ಅಮೈನೊ ಆಮ್ಲಗಳು ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಈ ಎರಡು ಅಂಶಗಳ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ಕಿತ್ತಳೆ, ಕೆಂಪು ದೊಣ್ಣೆ ಮೆಣಸು, ಕಾಲೆ, ಬ್ರಾಕೊಲಿ, ಬ್ರಸೆಲ್ಸ್‌ ಮೊಳಕೆ ಮತ್ತು ಸ್ಟ್ರಾಬೆರಿಗಳಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿರುತ್ತದೆ.

ಜಿನ್‌ಸೆಂಗ್‌

ಪನಾಕ್ಸ್‌ ಜಿನ್‌ಸೆಂಗ್‌ ಸಸ್ಯವು ಮುಪ್ಪಾಗುವಿಕೆಯನ್ನು ತಡೆಯುವ ಗುಣ ಹೊಂದಿರುವುದು ಶ್ರುತಪಟ್ಟಿದೆ. ಚರ್ಮವು ತನ್ನ ಸಹಜ ಸ್ವರೂಪವನ್ನು ಉಳಿಸಿಕೊಳ್ಳಲು ಜಿನ್‌ಸೆಂಗ್‌ ಸಹಾಯ ಮಾಡುತ್ತದೆ ಮತ್ತು ಅನೇಕ ರಾಸಾಯನಿಕ ಔಷಧಗಳಂತೆ ಋಣಾತ್ಮಕ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ಚರ್ಮಕ್ಕೆ ಹೀರಿಕೆಯಾಗುತ್ತದೆ. ಸೂರ್ಯನ ಅತಿನೇರಳೆ ಕಿರಣಗಳಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಡೆಯುವ ಸಾಮರ್ಥ್ಯ ಜಿನ್‌ ಸೆಂಗ್‌ಗೆ ಇದೆ. ಇದು ಕೊಲಾಜೆನ್‌ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ ಎಂಬುದಾಗಿಯೂ ತಿಳಿದುಬಂದಿದೆ. ಜಿನ್‌ಸೆಂಗ್‌ ಚಹಾ ಕುಡಿದಾಗ ಅಥವಾ ಸಪ್ಲಿಮೆಂಟ್‌ ಆಗಿ ಸೇವಿಸಿದಾಗ ರಕ್ತ ಪ್ರವಾಹಕ್ಕೆ ಬಿಡುಗಡೆಯಾ ಗುವ ಆ್ಯಂಟಿ ಓಕ್ಸಿಡೆಂಟ್‌ ಗಳು ಆರೋಗ್ಯ ಪೂರ್ಣ ಜೀವಕೋಶಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತವೆ ಮತ್ತು ಚರ್ಮ ಹೊಳೆಯಲು ಸಹಾಯ ಮಾಡುತ್ತವೆ.

ಕೊತ್ತಂಬರಿಸೊಪ್ಪು

ನಾವು ಅಡುಗೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಕೊತ್ತಂಬರಿ ಸೊಪ್ಪು ಒಂದು ಉತ್ತಮ ಮೂಲಿಕೆಯೂ ಆಗಿದೆ. ಇದರಲ್ಲಿ ಕೊಲಾಜೆನ್‌ ಸಂಯೋಜನೆಯನ್ನು ವೃದ್ಧಿಸುವ ವಿಟಮಿನ್‌ ಸಿ ಇದೆ. ಕೊತ್ತಂಬರಿ ಸೊಪ್ಪಿನಲ್ಲಿ ಇರುವ ಲಿನೊಲೆನಿಕ್‌ ಆಮ್ಲವು ಚರ್ಮ ನೆರಿಗೆಗಟ್ಟುವುದನ್ನು ತಡೆಯುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ರಕ್ತಪ್ರವಾಹದಲ್ಲಿ ಸೇರಿಕೊಂಡು ಚರ್ಮದ ಆರೋಗ್ಯಪೂರ್ಣ ಜೀವಕೋಶಗಳಿಗೆ ಹಾನಿ ಉಂಟು ಮಾಡುವ ಫ್ರೀ ರ್ಯಾಡಿಕಲ್‌ಗ‌ಳನ್ನು ಇದರಲ್ಲಿ ಇರುವ ಆ್ಯಂಟಿಓಕ್ಸಿಡೆಂಟ್‌ಗಳು ನಿವಾರಿಸುತ್ತವೆ. ಕೊತ್ತಂಬರಿ ಸೊಪ್ಪಿನ ಸಾರ ಮಾರುಕಟ್ಟೆಯಲ್ಲಿ ಸಿಗುತ್ತಿದ್ದು, ಇದನ್ನು ಸೇವಿಸುವ ಮೂಲಕ ದೇಹದಿಂದ ವಿಷಾಂಶ ನಿವಾರಣೆಗೆ ನೆರವಾಗಬಹುದು.

ಪಾಚಿಸಾರ

ಸೌಂದರ್ಯವರ್ಧಕ ಸಾಮಗ್ರಿ ಗಳಲ್ಲಿ ಈಗ ಸಮುದ್ರ ಸಸ್ಯಗಳಿಂದ ಪಡೆದ ಅಂಶಗಳನ್ನು ಹೆಚ್ಚುಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. “ಆಕ್ಸಿಡೇಶನ್‌’ ಅಥವಾ ಮಾಲಿನ್ಯದಂತಹ ಬಾಹ್ಯ ಅಂಶಗಳಿಗೆ ಚರ್ಮವು ತೆರೆದುಕೊಳ್ಳುವುದರಿಂದ ಜೀವಕೋಶ ಬೆಳವಣಿಗೆಗೆ ಅಡಚಣೆ ಉಂಟಾಗಬಹುದಾಗಿದ್ದು, ಇದು ಚರ್ಮಕ್ಕೆ ಹಾನಿ ಉಂಟಾಗಲು ಪ್ರಮುಖ ಕಾರಣವಾಗಿರುತ್ತದೆ. ಪಾಚಿಸಾರವು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಆಕ್ಸಿಡೇಶನ್‌ನಿಂದ ಕೊಲಾಜೆನ್‌ ನಾಶಗೊಳ್ಳುವುದನ್ನು ತಪ್ಪಿಸುತ್ತದೆ. ಬಹುತೇಕ ಎಲ್ಲ ಪ್ರಮುಖ ಆರೋಗ್ಯ ಆಹಾರ ಮಳಿಗೆಗಳಲ್ಲಿ ಬಾಯಿಯ ಮೂಲಕ ಸೇವಿಸಬಹುದಾದ ಸಪ್ಲಿಮೆಂಟ್‌ ಆಗಿ ಪಾಚಿಸಾರ ಲಭ್ಯವಿರುತ್ತದೆ.

ಏನು ಮಾಡಬಾರದು?

ಚರ್ಮವು ಯೌವ್ವನಪೂರ್ಣ ಮತ್ತು ಆರೋಗ್ಯಯುತವಾಗಿ ಇರಬೇಕಾಗಿದ್ದರೆ ಬಿರುಬಿಸಿಲಿಗೆ ಒಡ್ಡಿಕೊಳ್ಳಬೇಡಿ. ಧೂಮಪಾನವು ಚರ್ಮದ ಆರೋಗ್ಯಕ್ಕೆ ಒಳಿತಲ್ಲ, ಬೇಗನೆ ನೆರಿಗೆಗಟ್ಟುವಂತೆ ಮಾಡುತ್ತದೆ. ಹೊರಾಂಗಣದಲ್ಲಿ ಇರುವ ವೇಳೆ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಕೊಲಾಜೆನ್‌ ಸಪ್ಲಿಮೆಂಟ್‌ಗಳಿಂದ ಕೆಲವು ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ. ಅಲರ್ಜಿ ಉಂಟಾಗುವುದು, ಸಂಧಿ ನೋವು ಮತ್ತು ಕ್ಯಾಲ್ಸಿಯಂ ಹೆಚ್ಚು ಉತ್ಪಾದನೆಯಾಗುವುದು ಇಂಥ ಅಡ್ಡ ಪರಿಣಾಮಗಳಲ್ಲಿ ಕೆಲವು. ಸಮುದ್ರ ಆಹಾರ ಅಥವಾ ಮಾಂಸದ ಉತ್ಪನ್ನಗಳನ್ನು ಉಪಯೋಗಿಸಿದಾಗ ನಿಮಗೆ ಅಡ್ಡ ಪರಿಣಾಮಗಳು ಉಂಟಾಗಿದ್ದರೆ ಯಾವುದೇ ಬಗೆಯ ಕೊಲಾಜೆನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳುವಾಗ ಅತ್ಯಂತ ಎಚ್ಚರಿಕೆ ವಹಿಸಿ.

-ಡಾ| ವಿನಾಯಕ್‌ ಎನ್‌. ಅಂಚನ್‌,

ಅಸಿಸ್ಟೆಂಟ್‌ ಪ್ರೊಫೆಸರ್‌,

ಡರ್ಮಟಾಲಜಿ, ವೆನರಾಲಜಿ ಮತ್ತು ಲೆಪ್ರಸಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಡರ್ಮಟಾಲಜಿ, ವೆನರಾಲಜಿ ಮತ್ತು ಲೆಪ್ರಸಿ ವಿಭಾಗ, ಕೆಎಂಸಿ , ಮಂಗಳೂರು)

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.