Nagugala Hoovina Mele Review: ಹೂಗಳ ನಡುವೆ ಪ್ರೇಮದ ಹುಡುಕಾಟ
Team Udayavani, Feb 11, 2024, 10:33 AM IST
ಅವನು ಇಂಜಿನಿಯರ್ ಹುಡುಗ. ಅವಳು ಮೆಡಿಕಲ್ ಓದುತ್ತಿರುವ ಹುಡುಗಿ. ಇಬ್ಬರೂ ಅನಿರೀಕ್ಷಿತವಾಗಿ ಭೇಟಿಯಾಗುತ್ತಾರೆ. ಆ ಭೇಟಿ ಅವರಿ ಬ್ಬರ ಪರಿಚಯಕ್ಕೆ ಕಾರಣವಾಗುತ್ತದೆ. ಆ ಪರಿಚಯ ನಿಧಾನವಾಗಿ ಸ್ನೇಹವಾಗುತ್ತದೆ. ಕೆಲ ಸಮಯದಲ್ಲೇ ಆ ಸ್ನೇಹ ಪ್ರೇಮಕ್ಕೆ ತಿರುಗುತ್ತದೆ. ಮೊದಲಿಗೆ ಹುಡುಗನೇ ಆ ಹುಡುಗಿಗೆ ಪ್ರೇಮ ನಿವೇದನೆ ಮಾಡಿ ಕೊಳ್ಳುತ್ತಾನೆ. ಹುಡುಗಿಯೂ ಸಹ ಅವನ ಪ್ರೇಮ ನಿವೇದನೆಯನ್ನು ಒಪ್ಪುತ್ತಾಳೆ. ಆದರೆ ಒಂದಷ್ಟು ಷರತ್ತುಗಳನ್ನು ಮುಂದಿಟ್ಟು! ಏನು ಆ ಷರತ್ತು ಎಂಬ ಕುತೂಹಲವಿದ್ದರೆ ಸಿನಿಮಾ ನೋಡಬಹುದು.
“ನಗುವಿನ ಹೂಗಳ ಮೇಲೆ’ ಇದೊಂದು ಲವ್‌ಸ್ಟೋರಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರೀತಿ, ಪ್ರೇಮ, ಹುಡುಕಾಟದ ನಡುವೆ “ನಗುವಿನ ಹೂಗಳ ಮೇಲೆ’ ಸಿನಿಮಾ ವನ್ನು ತೆರೆಮೇಲೆ ತಂದಿದ್ದಾರೆ ನಿರ್ದೇಶಕ ವೆಂಕಟ್ ಭಾರದ್ವಾಜ್. ಚಿತ್ರದ ಕಥೆಯ ಎಳೆ ಚೆನ್ನಾಗಿದ್ದು, ಅದಕ್ಕೇ ಅಷ್ಟೇ ಚೆನ್ನಾಗಿರುವ ಚಿತ್ರಕಥೆ, ನಿರೂಪಣೆಯೂ ಜೊತೆಯಾಗಿದ್ದರೆ, “ನಗುವಿನ ಹೂಗಳ ಮೇಲೆ’ ಇನ್ನಷ್ಟು ನವಿರಾಗಿ ತೆರೆಮೇಲೆ ಬರುವ ಸಾಧ್ಯತೆಗಳಿದ್ದವು.
ಇನ್ನು ಕಿರುತೆರೆ ನಟ ಅಭಿ ದಾಸ್ ಈ ಸಿನಿಮಾದ ಮೂಲಕ ನಾಯಕರಾಗಿದ್ದಾರೆ. ಮೊದಲ ಚಿತ್ರದಲ್ಲೇ ಹಲವು ಆಯಾಮಗಳಿರುವ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ನಾಯಕಿ ಶರಣ್ಯಾ ಶೆಟ್ಟಿ ಕೂಡ ತಮ್ಮ ಅಂದಕ್ಕೆ ಒಪ್ಪುವಂಥ ಅಭಿನಯ ನೀಡಿದ್ದಾರೆ. ಪೋಷಕ ಪಾತ್ರದಲ್ಲಿ ಬಲ ರಾಜವಾಡಿ ಇಷ್ಟವಾಗುತ್ತಾರೆ. ಛಾಯಾಗ್ರಹಣ ಚಿತ್ರದ ಅಂದ ಹೆಚ್ಚಿಸಿದೆ. ಉಳಿದಂತೆ ಹಾಡುಗಳು, ಸಂಕಲನದ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಲವ್ ಸ್ಟೋರಿಯನ್ನು ಇಷ್ಟಪಡುವವರು “ನಗುವಿನ ಹೂಗಳ ಮೇಲೆ’ ಚಿತ್ರವನ್ನು ನೋಡಬಹುದು
ಕಾರ್ತಿಕ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.