ಸಾಮಾಜಿಕ ಜಾಗೃತಿ ಮೂಡಿಸಿದ ಮಣಿಪಾಲ್ ಮ್ಯಾರಥಾನ್
Team Udayavani, Feb 11, 2024, 11:40 PM IST
ಮಣಿಪಾಲ: ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳ ಉಪಶಾಮಕ ಆರೈಕೆ (ಹಾಸ್ಪೈಸ್ ಪೆಲಿಟೀವ್ ಕೇರ್) ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಧ್ಯೇಯದೊಂದಿಗೆ ಮಾಹೆ ವಿ.ವಿ. ಹಾಗೂ ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಮಣಿಪಾಲ ಮ್ಯಾರಥಾನ್ 6ನೇ ಆವೃತ್ತಿ ರವಿವಾರ ವರ್ಣರಂಜಿತವಾಗಿ ನಡೆಯಿತು.
ಹಬ್ಬದ ವಾತಾವರಣ
ಮಣಿಪಾಲ ಗ್ರೀನ್ಸ್‌ನಲ್ಲಿ ಮುಂಜಾನೆ 4 ಗಂಟೆ ಯಿಂದಲೇ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಆರಂಭ ದಲ್ಲಿ ಪೂರ್ಣ ಮ್ಯಾರಥಾನ್(42 ಕಿ.ಮೀ.) ಓಟಕ್ಕೆ ಐಸಿಐಸಿಐ ಬ್ಯಾಂಕ್‌ನ ಕರ್ನಾಟಕದ ಮುಖ್ಯಸ್ಥ ಅತುಲ್ ಜೈನ್, ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್, ಕುಲಪತಿ ಲೆ|ಜ| ಡಾ| ಎಂ.ಡಿ.ವೆಂಕಟೇಶ್, ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ| ಕೆಂಪರಾಜು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಹಾಫ್ ಮ್ಯಾರಥಾನ್‌ಗೆ (21 ಕಿ.ಮೀ.) ಎಸ್‌ಬಿಐ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಕೃಷ್ಣ ಶರ್ಮ ಚಾಲನೆ ನೀಡಿದರು. 10 ಕಿ.ಮೀ., 5 ಕಿ.ಮೀ ಮತ್ತು 3 ಕಿ.ಮೀ. ಓಟ (ಫನ್ ರನ್) ಹೀಗೆ ಒಂದರ ಹಿಂದೆ ಒಂದರಂತೆ ಚಾಲನೆ ನೀಡಲಾಯಿತು. ಅಂತಿಮವಾಗಿ ಅಂಧರ ಹಾಗೂ ವಿಕಲ ಚೇತನರ (ವೀಲ್‌ಚೈರ್ ರೈನ್) ಓಟ ನಡೆಯಿತು. ಪುಟಾಣಿಗಳಿಂದ ಹಿರಿಯರವರೆಗೂ ವಯೋಮಾನ ಭೇದವಿಲ್ಲದೆ 15,000ಕ್ಕೂ ಅಧಿಕ ಮಂದಿ ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದರು. ನೃತ್ಯ, ಜುಂಬಾ ಸೆಷನ್, ಸೆಲ್ಫಿ ಪಾಯಿಂಟ್ ಪ್ರಮುಖ ಆಕರ್ಷಣೆಯಾಗಿತ್ತು.
ಬಹುಮಾನ ವಿತರಣೆ
ಮಣಿಪಾಲ ಹೆಲ್ತ್ ಎಂಟ್ರಪ್ರೈಸಸ್ ಪ್ರೈ.ಲಿ. ಚೆರ್‌ಮನ್ ಡಾ| ಸುದರ್ಶನ್ ಬಲ್ಲಾಳ್, ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಪೌರಾಯುಕ್ತ ರಾಯಾಪ್ಪ, ಕರ್ಣಾಟಕ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ ಸಾಮಗ, ಪ್ರಾದೇಶಿಕ ಮುಖ್ಯಸ್ಥ ಬಿ.ರಾಜಗೋಪಾಲ್, ಮುಂಬಯಿನ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ವಿಭಾಗದ ಉಪ ವ್ಯವಸ್ಥಾಪಕ ನಿರ್ದೇಶಕ ರವೀಂದರ್ ರೈ, ಫೆಡರಲ್ ಬ್ಯಾಂಕ್‌ನ ಉಪಾಧ್ಯಕ್ಷ ರಾಜೀವ್ ವಿ.ಸಿ., ಮಾಹೆ ಸಹ ಕುಲಪತಿ ಡಾ| ಶರತ್ ಕೆ. ರಾವ್, ಡಾ|ಎನ್.ಎನ್. ಶರ್ಮಾ, ಡಾ| ನಾರಾಯಣ ಸಭಾಹಿತ್, ಡಾ| ದಿಲೀಪ್ ಜಿ. ನಾಯಕ್, ಮಾಹೆ ಸಿಒಒ ಸಿ.ಜಿ.ಮುತ್ತಣ್ಣ, ಕುಲಸಚಿವ ಡಾ| ಗಿರಿಧರ್ ಕಿಣಿ, ಪ್ರಮುಖರಾದ ಡಾ| ನವೀನ್ ಸಾಲಿನ್ಸ್ ಮೊದಲಾದ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.
ಮಾಹೆ ಕ್ರೀಡಾ ಕೌನ್ಸಿಲ್ ಕಾರ್ಯದರ್ಶಿ ಡಾ| ವಿನೋದ್ ನಾಯಕ್ ವಂದಿಸಿ, ಸಂಶೋಧನಾರ್ಥಿ ಕೋಮಲ್ ಡಿ’ಸೋಜಾ ನಿರೂಪಿಸಿದರು.
ಫಲಿತಾಂಶ ವಿವರ
ಪೂರ್ಣ ಮ್ಯಾರಥಾನ್
ಪುರುಷರ ವಿಭಾಗ
ಪ್ರಥಮ: ಎಂ. ನಂಜುಂಡಪ್ಪ
ದ್ವಿತೀಯ: ಸಚಿನ್ ಪೂಜಾರಿ
ತೃತೀಯ: ಚೆತ್ರಮ್ ಕುಮಾರ್
ಮಹಿಳೆಯರ ವಿಭಾಗ
ಪ್ರಥಮ: ಚೈತ್ರ ದೇವಾಡಿಗ
ದ್ವಿತೀಯ: ಜಸ್ಮಿತಾ ಕೊಂಡಕಿರಿ
21 ಕಿ.ಮೀ.
ಪುರುಷರ ವಿಭಾಗ
ಪ್ರಥಮ:ವೈಭವ್ ಪಾಟೀಲ್
ದ್ವಿತೀಯ : ರಘುವರನ್ ಸಿ.
ತೃತೀಯ: ಮೋನು ಸಿಂಗ್
ಮಹಿಳೆಯರ ವಿಭಾಗ
ಪ್ರಥಮ: ಅರ್ಚನಾ ಕೆ.ಎಂ.
ದ್ವಿತೀಯ: ನಂದಿನಿ ಜಿ.
ತೃತೀಯ: ಸ್ಪಂದನಾ
10 ಕಿ.ಮೀ.
ಪರುಷರ ವಿಭಾಗ
ಪ್ರಥಮ: ಮಣಿಕಂಠ ಪಿ.
ದ್ವಿತೀಯ : ಶ್ರೀ
ತೃತೀಯ: ಘೂರಾ ಚೌಹಾನ್
ಮಹಿಳೆಯರ ವಿಭಾಗ
ಪ್ರಥಮ: ರೂಪಶ್ರೀ ಎನ್.
ದ್ವಿತೀಯ : ರೇಖಾ ಬಸಪ್ಪ ಪಿರೋಜಿ
5 ಕಿ.ಮೀ.
ಪುರುಷರ ವಿಭಾಗ
ಪ್ರಥಮ: ನಾಗರಾಜ ದಿವಟೆ
ದ್ವಿತೀಯ: ರಾಹುಲ್
ತೃತೀಯ: ವಿಲಾಸ್ ಪುರಾಣಿಕ್
ಮಹಿಳೆಯರ ವಿಭಾಗ
ಪ್ರಥಮ: ಉಷಾ ಆರ್.
ದ್ವಿತೀಯ : ಪ್ರಣಮ್ಯ
ತೃತೀಯ : ಮಾನ್ಯಾ ಕೆ.
ಉತ್ತಮ ಜೀವನ ಶೈಲಿಯಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ. ಮ್ಯಾರಥಾನ್‌ನಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಖುಷಿ ಕೊಟ್ಟಿದೆ. ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳು ಮಾಹೆ ವಿ.ವಿ.ಯಿಂದ ಮುಂದುವರಿಯಲಿದೆ.
-ಡಾ| ಎಚ್.ಎಸ್. ಬಲ್ಲಾಳ್, ಸಹ ಕುಲಾಧಿಪತಿ, ಮಾಹೆ
ಉತ್ಕೃಷ್ಟ ಧ್ಯೇಯದೊಂದಿಗೆ ಈ ಬಾರಿಯ ಮ್ಯಾರಥಾನ್ ಅರ್ಥಪೂರ್ಣವಾಗಿ ನಡೆದಿದೆ. ಎಲ್ಲ ವಯೋಮಾನದವರು ಭಾಗವಹಿಸಿದ್ದಾರೆ.
– ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಕುಲಪತಿ ಮಾಹೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ಯೋಧಾಸ್‌ಗೆ ತಲೈವಾಸ್ ಆಘಾತ
Hockey: ಇಂದಿನಿಂದ ಜೂ. ಏಷ್ಯಾ ಕಪ್ ಹಾಕಿ; ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.