NDA ಬಹುತೇಕ “ವಿಶ್ವಾಸ” ಗೆಲ್ಲುವ ಸಾಧ್ಯತೆ- ಬಿಹಾರದಲ್ಲಿಂದು ನಿತೀಶ್ ವಿಶ್ವಾಸ ಮತಯಾಚನೆ
Team Udayavani, Feb 12, 2024, 12:36 AM IST
ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.
ಕಳೆದ ತಿಂಗಳು ವಿಪಕ್ಷ ಇಂಡಿಯಾ ಒಕ್ಕೂಟದಿಂದ ಹೊರಬಂದ ಜೆಡಿಯು, ಎನ್‌ಡಿಎ ಜತೆ ಕೈಜೋಡಿಸಿದ್ದು, 9ನೇ ಬಾರಿ ಮುಖ್ಯಮಂತ್ರಿಯಾಗಿ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಸೋಮವಾರ ನಿತೀಶ್ ಬಹುಮತ ಸಾಬೀತುಪಡಿಸಬೇಕಾಗಿದ್ದು, ಪ್ರತಿಯೊಬ್ಬರು ಸದನದಲ್ಲಿ ಹಾಜರಿರುವಂತೆ ತನ್ನ ಶಾಸಕರಿಗೆ ಜೆಡಿಯು ವಿಪ್ ಜಾರಿಗೊಳಿಸಿದೆ. ಇದೇ ವೇಳೆ ಎನ್‌ಡಿಎ ಮೈತ್ರಿಕೂಟದ ಪರ ಮತ ಹಾಕುವಂತೆ ಸೂಚಿಸಿ ತನ್ನ ನಾಲ್ವರು ಶಾಸಕರಿಗೆ ಹಿಂದೂಸ್ಥಾನಿ ಅವಾಮಿ ಮೋರ್ಚಾ(ಎಚ್‌ಎಎಂ) ಸಂಸ್ಥಾಪಕ ಜಿತಿನ್ ರಾಮ್ ಮಾಂಝಿ ಕೂಡ ವಿಪ್ ಜಾರಿಗೊಳಿಸಿದ್ದಾರೆ.
ಇನ್ನೊಂದೆಡೆ, ನೂತನವಾಗಿ ರಚನೆಗೊಂಡಿರುವ ಎನ್‌ಡಿಎ ಮೈತ್ರಿಕೂಟವು ಬಿಹಾರ ವಿಧಾನಸಭೆ ಸ್ಪೀಕರ್ ಅವಾಧ್ ಬಿಹಾರಿ ಚೌಧರಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಆದರೆ ಫೆ. 12ರ ಬಜೆಟ್ ಕಲಾಪ ಆರಂಭವಾಗುವ ಮೊದಲು ತಾವು ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಚೌಧರಿ ಹೇಳಿದ್ದಾರೆ. “ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಚೌಧರಿ ಅವರಿಗೆ ಕಲಾಪ ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ಡೆಪ್ಯೂಟಿ ಸ್ಪೀಕರ್ ಮಹೇಶ್ವರ ಹಜಾರಿ ತಿಳಿಸಿದ್ದಾರೆ.
ಇತ್ತ ತೆಲಂಗಾಣದಲ್ಲಿ ಬೀಡುಬಿಟ್ಟಿದ್ದ ಬಿಹಾರದ ಕಾಂಗ್ರೆಸ್ ಶಾಸಕರು ಪಟ್ನಾಗೆ ಮರಳಿ, ತೇಜಸ್ವಿ ಯಾದವ್ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.