![UDP-DC](https://www.udayavani.com/wp-content/uploads/2024/12/UDP-DC-415x249.jpg)
Kenya: ವಿಶ್ವದಾಖಲೆಯ ಮ್ಯಾರಥಾನ್ ಓಟಗಾರ ಕೆಲ್ವಿನ್ ಕಿಪ್ಟಮ್ ಅಪಘಾತದಲ್ಲಿ ಸಾವು
24ರ ಹರೆಯದಲ್ಲಿ ಇಹದ ಓಟ ಮುಗಿಸಿದ ಕಿಪ್ಟಮ್
Team Udayavani, Feb 12, 2024, 2:48 PM IST
![Marathon world record holder Kelvin Kiptum passed away](https://www.udayavani.com/wp-content/uploads/2024/02/unnamed-file-620x342.jpg)
ನೈರೋಬಿ: ಭಾನುವಾರ ನೈರೋಬಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೀನ್ಯಾದ ವಿಶ್ವ ದಾಖಲೆಯ ಮ್ಯಾರಥಾನ್ ರನ್ನರ್ ಕೆಲ್ವಿನ್ ಕಿಪ್ಟಮ್ ಮತ್ತು ಅವರ ಕೋಚ್ ಸಾವನ್ನಪ್ಪಿದ್ದಾರೆ. ವಿಶ್ವದಾಖಲೆ ಮುರಿದು ಐದು ತಿಂಗಳು ಕಳೆಯುವಷ್ಟರಲ್ಲಿ ಕೆಲ್ವಿನ್ ಕಿಪ್ಟಮ್ ಇಹಲೋಕ ತ್ಯಜಿಸಿದ್ದಾರೆ.
ಕೇವಲ 24 ವರ್ಷ ವಯಸ್ಸಿನಲ್ಲಿ, ಕೆಲ್ವಿನ್ ಕಿಪ್ಟಮ್ ಅವರು ಈಗಾಗಲೇ ಕ್ರೀಡೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದರು. ಅಕ್ಟೋಬರ್ 8, 2023 ರಂದು ಚಿಕಾಗೊ ಮ್ಯಾರಥಾನ್ ನಲ್ಲಿ 2:00:35 ರ ಸಮಯದೊಂದಿಗೆ ಮ್ಯಾರಥಾನ್ ವಿಶ್ವ ದಾಖಲೆಯನ್ನು ಛಿದ್ರಗೊಳಿಸಿ ಹೊಸ ದಾಖಲೆ ಬರೆದಿದ್ದರು. ಅವರ ಅಕಾಲಿಕ ಮರಣದ ಒಂದು ವಾರದ ಮೊದಲು ಈ ಅದ್ಭುತ ಸಾಧನೆಯನ್ನು ವಿಶ್ವ ಅಥ್ಲೆಟಿಕ್ಸ್ ಅನುಮೋದಿಸಿತ್ತು.
ಕೆಲ್ವಿನ್ ಕಿಪ್ಟಮ್ ಅವರ ರಸ್ತೆ ಅಪಘಾತವು ಎಲ್ಡೋರೆಟ್ ನ ರಿಫ್ಟ್ ವ್ಯಾಲಿ ಪಟ್ಟಣದ ಬಳಿ ತಡರಾತ್ರಿ ಸಂಭವಿಸಿದೆ. ಈ ಪ್ರದೇಶವು ವಿಶ್ವದ ಕೆಲವು ಅತ್ಯುತ್ತಮ ದೂರದ ಓಟಗಾರರನ್ನು ಪರಿಚಯಿಸಿದ ಕಾರಣದಿಂದ ಹೆಸರುವಾಸಿಯಾಗಿದೆ.
ಅವರು ಟೊಯೊಟಾ ಪ್ರೀಮಿಯೊವನ್ನು ಚಲಾಯಿಸುತ್ತಿದ್ದಾಗ ವಾಹನದ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯಿಂದ ಆಚೆಗೆ ತಿರುಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಿಪ್ಟಮ್ ಜತೆಗೆ ಅವರ ರುವಾಂಡನ್ ತರಬೇತುದಾರ ಗೆರ್ವೈಸ್ ಹಕಿಝಿಮಾನ ಕೂಡಾ ಮೃತಪಟ್ಟಿದ್ದಾರೆ. ಶರೋನ್ ಕೊಸ್ಗೆ ಎಂಬ ಮಹಿಳಾ ಪ್ರಯಾಣಿಕರು ಅಪಘಾತದಲ್ಲಿ ಬದುಕುಳಿದರು ಆದರೆ ಗಂಭೀರವಾದ ಗಾಯಗಳಿಗೆ ಒಳಗಾಗಿದ್ದಾರೆ.
ಟಾಪ್ ನ್ಯೂಸ್
![UDP-DC](https://www.udayavani.com/wp-content/uploads/2024/12/UDP-DC-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-prathvi](https://www.udayavani.com/wp-content/uploads/2024/12/1-prathvi-150x104.jpg)
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
![Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್](https://www.udayavani.com/wp-content/uploads/2024/12/5-34-150x90.jpg)
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
![1-crick](https://www.udayavani.com/wp-content/uploads/2024/12/1-crick-150x84.jpg)
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
![1-eqeeqwe](https://www.udayavani.com/wp-content/uploads/2024/12/1-eqeeqwe-150x89.jpg)
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
![KLR](https://www.udayavani.com/wp-content/uploads/2024/12/KLR-150x90.jpg)
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.