![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 13, 2024, 6:30 AM IST
ವಾಷಿಂಗ್ಟನ್: ಅಮೆರಿಕ ಸರಕಾರಕ್ಕೂ ತಂತ್ರಜ್ಞಾನ ದುರುಪಯೋಗದ ಬಿಸಿ ತಟ್ಟಿದೆ. ಖುದ್ದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ “ನನಗೆ ಮತ ಹಾಕುವುದು ಬೇಡ’ ಎಂಬಂತೆ ಹೇಳಿದ್ದ ಧ್ವನಿ ವೈರಲ್ ಆಗಿದ್ದರಿಂದ ಎಚ್ಚೆತ್ತುಕೊಂಡಿರುವ ಅಲ್ಲಿನ ಸರಕಾರ, ಕೃತಕ ಬುದ್ಧಿಮತ್ತೆ (ಎ.ಐ.) ಆಧಾರಿತ ರೋಬೊ ಕರೆಗಳಿಗೆ ನಿಷೇಧ ಹೇರಿದೆ.
ಕೆಲವು ದಿನಗಳ ಹಿಂದೆ ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ಪ್ರೈಮರಿಯಲ್ಲಿ ಕೆಲವು ಕಿಡಿಗೇಡಿಗಳು ಎ.ಐ. ಆಧಾರಿತ ವಾಯ್ಸ ರೋಬೋ ಕಾಲ್‌ಗಳ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ನಕಲಿ ಧ್ವನಿಯನ್ನು ಬಿತ್ತರಿಸಿದ್ದರು.
ಈ ಹಿನ್ನೆಲೆಯಲ್ಲಿ ರೋಬೊ ಕರೆಗಳಿಗೆ ನಿಷೇಧ ಹೇರಿ ಅಮೆರಿಕ ಸರಕಾರ ಆದೇಶ ಹೊರಡಿಸಿದೆ. “ಜನರನ್ನು ಸುಲಿಗೆ ಮಾಡಲು, ಸೆಲೆಬ್ರೆಟಿಗಳನ್ನು ಅನುಕರಿಸಲು, ಮತದಾರರಿಗೆ ತಪ್ಪು ಮಾಹಿತಿ ನೀಡಲು ಎಐ ಆಧಾರಿತ ವಾಯ್ಸ ರೋಬೊಕಾಲ್‌ಗಳನ್ನು ವಂಚಕರು ಬಳಸುತ್ತಿದ್ದಾರೆ. ಹೀಗಾಗಿ ಎಐ ಆಧಾರಿತ ವಾಯ್ಸ ರೋಬೊಕಾಲ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾ ಗಿದೆ’ ಎಂದು ಅಮೆರಿಕ ಸರಕಾರದ ಸಂವಹನ ಆಯೋಗ ಆದೇಶ ಹೊರಡಿಸಿದೆ.
ರೋಬೊ ಕಾಲ್ ಎಂದರೇನು?
ಸಾಮಾನ್ಯವಾಗಿ ರಾಜಕೀಯ ಪಕ್ಷ ಅಥವಾ ಟೆಲಿಮಾರ್ಕೆಟಿಂಗ್ ಕಂಪೆ ನಿಯ ಪರವಾಗಿ ರೆಕಾರ್ಡ್ ಮಾಡಿದ ಸಂದೇಶವನ್ನು ತಲುಪಿಸುವ ಸ್ವಯಂ ಚಾಲಿತ ದೂರವಾಣಿ ಕರೆ ಇದಾಗಿದೆ. ಎಐ ತಂತ್ರಜ್ಞಾನ ಆಧರಿಸಿ ಸಲೆಬ್ರೆಟಿ ಗಳ ನಕಲಿ ಧ್ವನಿಯಲ್ಲಿ ರೆಕಾರ್ಡ್ ಮಾಡಿದ ಸಂದೇಶವನ್ನು ಸ್ವಯಂ ಚಾಲಿತವಾಗಿ ನಿಗದಿತ ವ್ಯಕ್ತಿಗಳಿಗೆ ದೂರವಾಣಿ ಕರೆ ಮಾಡಲಾಗುತ್ತದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.