ಹಗಲಿನಲ್ಲಿ ಅಲ್ಜಜೀರಾ ಪತ್ರಕರ್ತ, ರಾತ್ರಿ ವೇಳೆ ಹಮಾಸ್ ಕಮಾಂಡರ್!
ಖ್ಯಾತ ವರದಿಗಾರನ ವಿರುದ್ಧ ಇಸ್ರೇಲ್ ಗಂಭೀರ ಆರೋಪ, ಫೋಟೋ ಬಿಡುಗಡೆ
Team Udayavani, Feb 13, 2024, 6:30 AM IST
ಹೊಸದಿಲ್ಲಿ: ಕತಾರ್ ಮೂಲದ ಅಲ್ಜಜೀರಾ ಸುದ್ದಿವಾಹಿನಿಯ ಖ್ಯಾತ ಪತ್ರಕರ್ತರೊಬ್ಬರು ಹಮಾಸ್ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಮಿಲಿಟರಿ ಉಪಕರಣಗಳ ತಯಾರಿಕೆಗೆ ನೆರವು ನೀಡಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. “ಈತ ಹಗಲು ಪತ್ರಕರ್ತನಾಗಿದ್ದರೆ, ರಾತ್ರಿ ಹಮಾಸ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ’ ಎಂಬ ಗಂಭೀರ ಆರೋಪವನ್ನೂ ಮಾಡಿದೆ.
ಹಿರಿಯ ವರದಿಗಾರ ಮೊಹಮ್ಮದ್ ವಾಷಾಹ್ ಹಮಾಸ್ನ ಹಿರಿಯ ಕಮಾಂಡರ್ ಆಗಿ ಮೂನ್ಲೈಟಿಂಗ್(ನಿಯಮಿತ ಉದ್ಯೋಗದ ಜತೆಗೆ ರಹಸ್ಯವಾಗಿ ಇನ್ನೊಂದು ಉದ್ಯೋಗ ಮಾಡುವುದು) ಮಾಡುತ್ತಿದ್ದು, ಡ್ರೋನ್, ಗ್ರೆನೇಡ್ ಸೇರಿ ಹಲವು ಸೇನಾ ಉಪಕರಣಗಳ ತಯಾರಿಕೆಗೆ ನೆರವು ನೀಡಿದ್ದಾರೆ. ಅವರಿಂದ ವಶಪಡಿಸಿಕೊಳ್ಳಲಾದ ಲ್ಯಾಪ್ಟಾಪ್ನಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ತರಬೇತಿ ಸೇರಿ ಯುದ್ಧೋಪಕರಣಗಳ ತಯಾರಿಕೆಯಲ್ಲಿ ತೊಡಗಿರುವ ಫೋಟೋಗಳು ದೊರೆತಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಇಬ್ಬರು ಒತ್ತೆಯಾಳುಗಳ ರಕ್ಷಣೆ
ಗಾಜಾ ಪಟ್ಟಿಯಲ್ಲಿ ಉಗ್ರರ ಒತ್ತೆಯಲ್ಲಿದ್ದ ಇಬ್ಬರನ್ನು ಇಸ್ರೇಲ್ ಸೇನೆ ಸೋಮವಾರ ರಕ್ಷಿಸಿದೆ. ಈ ಕಾರ್ಯಾಚರಣೆ ವೇಳೆ ನಡೆಸಿದ ವೈಮಾನಿಕ ದಾಳಿಯಲ್ಲಿ 50 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಇನ್ನೂ 100ರಷ್ಟು ಇಸ್ರೇಲಿಯರು ಉಗ್ರರ ಒತ್ತೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.