ಆನ್‌ಲೈನ್ ಗೇಮ್ ಬಿಡಿ, ಮೈದಾನಕ್ಕಿಳಿದು ಆಟ ಆಡಿ-ರಾಜ್ಯಸಭಾ ಸದಸ್ಯ ಈರಣ್ಣ
Team Udayavani, Feb 13, 2024, 2:45 PM IST
ಉದಯವಾಣಿ ಸಮಾಚಾರ
ಬೆಳಗಾವಿ: ಇಂದಿನ ಆಧುನಿಕ ಯುಗದಲ್ಲಿ ವ್ಯಾಯಾಮ ಶಾಲೆ, ಗರಡಿ ಮನೆಗಳು ಮಾಯವಾಗುತ್ತಿವೆ. ಮೊಬೈಲ್, ಆನ್‌ಲೈನ್
ಗೇಮ್‌ಗಳಿಗಿಂತಲೂ ಮೈದಾನಕ್ಕಿಳಿದು ದೇಹ ಸದೃಢಗೊಳ್ಳುವ ಆಟಗಳನ್ನು ಆಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ಅತಿವಾಡ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಸಂಸದೆ ಮಂಗಲಾ ಅಂಗಡಿ ಅವರ ತಲಾ 5 ಲಕ್ಷ ರೂ. ನಂತೆ ಒಟ್ಟು 10 ಲಕ್ಷ ರೂ. ಅನುದಾನದಲ್ಲಿ ಅತ್ಯಾಧುನಿಕ ಶಿವಪ್ರತಿಷ್ಠಾನ ಹಿಂದೂಸ್ಥಾನ ವ್ಯಾಯಾಮ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಮೊಬೆ„ಲ್, ಆನ್‌ಲೈನ್ ಗೇಮ್ ಗಳನ್ನು ಆಡುವ ಮೂಲಕ ತಮ್ಮ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಗರಡಿಮನೆಗಳಿಗೆ ಹೋಗಿ ಕುಸ್ತಿ ಆಡುವ ಪರಿಪಾಠವಿತ್ತು. ಮೈದಾನಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಯುವಕರು ದೇಹವನ್ನು ಕಟುಮಸ್ತಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಈಗಿನ ದಿನಮಾನದಲ್ಲಿ ಅದು ಮಾಯವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಅತಿವಾಡ ಗ್ರಾಮದಲ್ಲಿ ನಿರ್ಮಾಣಗೊಂಡ ಈ ವ್ಯಾಯಾಮ ಶಾಲೆಯ ಉಪಯೋಗವಾಗಬೇಕು. ಯುವಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ಸಂಸದೆ ಮಂಗಲಾ ಅಂಗಡಿ ಮಾತನಾಡಿ, ಯುವಕರು ದುಶ್ಚಟಗಳ ದಾಸರಾಗದೇ ಆರೋಗ್ಯವೇ ಭಾಗ್ಯ ಎಂದು ಹೆಚ್ಚಿನ ಶ್ರಮ
ವಹಿಸಬೇಕು. ನಿತ್ಯವೂ ವ್ಯಾಯಾಮ ಮಾಡಿ ಸದೃಢರಾಗಬೇಕು ಎಂದ ಅವರು, ಅತಿವಾಡ ಗ್ರಾಮದಲ್ಲಿ ಧನಂಜಯ ಜಾಧವ ಹಾಗೂ ಯತೇಶ್ ಹೆಬ್ಟಾಳಕರ ಅವರು ಅತಿ ಕಡಿಮೆ ಸಮಯದಲ್ಲಿ ಸಂಸದರ ಅನುದಾನವನ್ನು ಸರಿಯಾಗಿ ಬಳಸಿ ಇಂತಹ ಭವ್ಯವಾದ ವ್ಯಾಯಾಮ ಶಾಲೆ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಅತಿವಾಡ ಗ್ರಾಮದಲ್ಲಿ ಯುವಕರ ಇಚ್ಛಾಶಕ್ತಿಯಿಂದ ಈ ವ್ಯಾಯಾಮ ಶಾಲೆ ನಿರ್ಮಾಣವಾಗಿದೆ. ಗ್ರಾಮಕ್ಕೆ ಏನು ಬೇಕು ಎಂಬುದರ ಬಗ್ಗೆ ಯುವಕರೇ ಯೋಚಿಸಿ ಇಂಥ ಅತ್ಯಾಧುನಿಕ ವ್ಯಾಯಾಮ ಶಾಲೆ ನಿರ್ಮಿಸಿಕೊಂಡಿದ್ದಾರೆ ಎಂದರು.
ಅಂತಾರಾಷ್ಟ್ರೀಯ ದೇಹದಾಡ್ಯì ಪಟುಗಳಾದ ಪ್ರಶಾಂತ ಖಾನೂಕರ್, ಪ್ರತಾಪ ಕಾಲಕುಂದ್ರಿಕರ, ಪ್ರಸಾದ ಬಾಚಿಕರ ಅವರು ದೇಹದಾರ್ಢ್ಯದ ಬಗ್ಗೆ ಮಾತನಾಡಿದರು.
ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ ವತಿಯಿಂದ ಗಣ್ಯರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಗ್ರಾಪಂ ಅಧ್ಯಕ್ಷ ಸಾಯಿ ಛಬ್ಬುಬಾಯಿ ಕಾಂಬಳೆ, ಉಪಾಧ್ಯಕ್ಷೆ ಯೋಗೀಶ ಹೇಳ್ಕರ, ಮುಖಂಡರಾದ ಯತೇಶ ಹೆಬ್ಟಾಳಕರ, ಸಚಿನ ನಾಚಣಕರ, ಲಖನ್ ಗುರೂಜಿ, ಸತೀಶ ನಿಲಜಕರ, ಪ್ರದೀಪ ಪಾಟೀಲ, ಪಾಲಿಕೆ ಸದಸ್ಯರಾದ ರಾಜು ಭಾತಖಾಂಡೆ, ಶಂಕರ ಪಾಟೀಲ, ಮುಖಂಡರಾದ ರಾಮಲಿಂಗ ಪಾಟೀಲ, ದಯಾನಂದ ಭೋಗನ್, ಅಜಿತ ಜಾಧವ, ನಾಗನಾಥ ಜಾಧವ, ಗವಡು ಪಾಟೀಲ, ಆನಂದ ಬೆಳಗಾಂವ ಪಾಟೀಲ, ಯಲ್ಲಪ್ಪ ಪಾಟೀಲ, ಮಾರುತಿ ಹೆಬ್ಬಾಳಕರ, ಗೋಪಾಲ ಕಾಮೆವಾಡಿ, ಹನುಮಂತ ಪಾಟೀಲ, ಸುರೇಶ ಪಾಟೀಲ, ಅನಿಲ್ ಪಾಟೀಲ, ಅರ್ಜುನ ಬೆಳಗಾಂವಕರ, ಪಿಡಿಒ ಸ್ಮಿತಾ ಚಂದರಗಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.