SA V/s NZ: ಹ್ಯಾಮಿಲ್ಟನ್ ಟೆಸ್ಟ್ ನ್ಯೂಜಿಲ್ಯಾಂಡ್ ಮೇಲುಗೈ
Team Udayavani, Feb 13, 2024, 11:20 PM IST
ಹ್ಯಾಮಿಲ್ಟನ್: ದ್ವಿತೀಯ ದರ್ಜೆಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ಮಂಗಳವಾರ ಆರಂಭಗೊಂಡ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹರಿಣಗಳ ಪಡೆ 6 ವಿಕೆಟಿಗೆ 220 ರನ್ ಗಳಿಸಿದೆ.
ಈ 6 ವಿಕೆಟ್ 150 ರನ್ನಿಗೇ ಉರುಳಿತ್ತು. ಆದರೆ 7ನೇ ವಿಕೆಟಿಗೆ ಜತೆಗೂಡಿದ ರುವಾನ್ ಡ ಸ್ವಾರ್ಟ್ ಮತ್ತು ಟೆಸ್ಟ್ ಪದಾರ್ಪಣೆಗೈದ ಶಾನ್ ವನ್ ಬರ್ಗ್ ಸೇರಿಕೊಂಡು ತಂಡದ ರಕ್ಷಣೆಗೆ ನಿಂತರು. ಇವರಿಬ್ಬರು ಈಗಾಗಲೇ 70 ರನ್ ಜತೆಯಾಟ ನಿಭಾಯಿಸಿದ್ದಾರೆ. ಡ ಸ್ವಾರ್ಟ್ 55 ಮತ್ತು ವನ್ ಬರ್ಗ್ 34 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನಾಯಕ ನೀಲ್ ಬ್ರ್ಯಾಂಡ್ 25, ರೆನಾರ್ಡ್ ವಾನ್ ಟಂಡರ್ 32, ಜುಬೇರ್ ಹಮ್ಜ 20, ಡೇವಿಡ್ ಬೇಡಿಂಗ್‌ಹ್ಯಾಮ್ 39 ರನ್ ಮಾಡಿ ಔಟಾದರು. ಕೀಗನ್ ಪೀಟರ್‌ಸನ್ 2 ರನ್ ಮಾಡಿದರೆ, ಆರಂಭಕಾರ ಕ್ಲೈಡ್ ಫೋರ್ಟೀನ್ ಖಾತೆ ತೆರೆಯಲು ವಿಫಲರಾದರು. ರಚಿನ್ ರವೀಂದ್ರ 3 ವಿಕೆಟ್ ಉರುಳಿಸಿ ಪ್ರವಾಸಿಗರನ್ನು ಕಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.