ಪರುಶುರಾಮ ಥೀಂ ಪಾರ್ಕ್ ಪ್ರಕರಣ: ಸರಕಾರ ಕಳ್ಳರನ್ನು ಹಿಡಿಯುವ ಕೆಲಸಕ್ಕೆ ಇಳಿದಿದೆ: ತಂಗಡಗಿ
Team Udayavani, Feb 13, 2024, 11:33 PM IST
ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲೂರು ಉಮಿಕಲ್ ಬೆಟ್ಟದಲ್ಲಿ ಪರುಶುರಾಮ ಥೀಂ ಪಾರ್ಕ್ ನಿರ್ಮಾಣ ಕಾಮಗಾರಿಯ ಅವ್ಯವಹಾರದಲ್ಲಿ ಪಾಲ್ಗೊಂಡಿರುವ ನಿಜವಾದ ಕಳ್ಳರನ್ನು ಕಂಡು ಹಿಡಿ ಯುವ ಕೆಲಸಕ್ಕೆ ಸರಕಾರ ಹೊರಟಿದೆ. ಈಗಾಗಲೇ ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಐಡಿಗೆ ವಹಿಸಲು ಮುಂದಾಗಿದ್ದಾರೆ. ದೇವರ ಹೆಸರು ಹೇಳಿಕೊಂಡು ಕಳ್ಳತನ ಮಾಡಿದವರ ವಿರುದ್ಧ ಸರಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ವಿಧಾನಪರಿಷತ್‌ನಲ್ಲಿ ಹೇಳಿದರು.
ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ದೇವರನ್ನು ಹೊತ್ತುಕೊಂಡವರಿಂದ ದುಡ್ಡು ಹೊಡೆಯುವ ಕೆಲಸ ಆಗಿದೆ. ಇದು ಹಿಂದಿನ ಸರಕಾರದ ಅವಧಿಯಲ್ಲಿ ನಡೆದ ಕೆಲಸ. ಆದರೆ ಸ್ಥಳೀಯರು ಈ ಬಗ್ಗೆ ಸರಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ನಮ್ಮ ಸರಕಾರ ಅದನ್ನು ಹೊರಗೆಳೆಯುವ ಕೆಲಸಕ್ಕೆ ಮುಂದಾಗಿದೆ. ದೇವರ ಹೆಸರು ಹೇಳಿಕೊಂಡು ಹಣ ಮಾಡುವ ಕೆಲಸಕ್ಕಿಳಿದರವನ್ನು ಸರಕಾರ ಪತ್ತೆ ಹಚ್ಚಲಿದೆ ಎಂದರು.
ದೇವರು ಹೊತ್ತುಕೊಂಡವರಿಂದ ದುಡ್ಡು ಹೊಡೆಯುವ ಕೆಲಸ ನಡೆದಿದೆ ಎಂಬ ಸಚಿವರ ಮಾತು ಬಿಜೆಪಿಯ ಭಾರತಿ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್, ಗೋವಿಂದರಾಜು ಅವರನ್ನು ಕೆರಳುವಂತೆ ಮಾಡಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭಾರತಿ ಶೆಟ್ಟಿ, ಉಡುಪಿ, ಮಂಗಳೂರಿನ ಜನರು ದೇವರ ಆರಾಧಕರು. ನಾವೆಲ್ಲರೂ ದೇವರನ್ನು ಹೊತ್ತುಕೊಳ್ಳುತ್ತೇವೆ. ಆರಾಧನೆ ಮಾಡುತ್ತೇವೆ. ಆದರೆ ನೀವು ದೇವರು ಹೊತ್ತುಕೊಂಡವರಿಂದ ದುಡ್ಡು ಹೊಡೆಯುವ ಕೆಲಸ ನಡೆದಿದೆ ಎಂದು ಹೇಳಿದ ಮಾತು ಸರಿಯಿಲ್ಲ ಎಂದು ಸಚಿವ ಶಿವರಾಜ ತಂಗಡಿ ವಿರುದ್ಧ ಮುಗಿಬಿದ್ದರು. ಪರುಶುರಾಮನ ವಿಗ್ರಹ ಅವಶೇಷಗಳನ್ನು ತೆರವುಗೊಳಿಸಿ ಸಮುದ್ರಕ್ಕೆ ಹಾಕಿದ ಸಂಬಂಧ ತನಿಖೆ ನಡೆಸಿ ಎಂದು ಆಗ್ರಹಿಸಿದರು.
ಬಿಜೆಪಿಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಸರರ ತನಿಖೆ ನಡೆಸದೇ ಆರೋಪ ಮಾಡುವುದು ಸರಿಯಲ್ಲ. ತನಿಖೆಯ ಅಂತರ ಸತ್ಯಾಂಶ ಹೊರಬರಲಿದೆ. ಸರರ ಯಾವ ರೀತಿಯ ತನಿಖೆಯಾದರೂ ನಡೆಸಲಿ ಎಂದರು.
ಮಧ್ಯಪ್ರವೇಶ ಮಾಡಿದ ಸಭಾಪತಿ ಸತ್ಯಾಸತ್ಯತೆ ಅರಿಯಲು ಸರರ ತನಿಖೆ ನಡೆಸಲಿ ಎಂದರು. ಕೆಲವು ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆಯುತ್ತೇನೆ. ಯಾರೇ ತಪ್ಪು ಮಾಡಲಿ ಕಠಿನಕ್ರಮ ನಿಶ್ಚಿತ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.