Award: ಇಂದಿರಾ ಗಾಂಧಿ,ನರ್ಗೀಸ್ ಪ್ರಶಸ್ತಿಗಳ ಹೆಸರು ಬದಲು
ಕೇಂದ್ರ ಸರ್ಕಾರದ ಸಮಿತಿ ಶಿಫಾರಸಿನಂತೆ ಕ್ರಮ
Team Udayavani, Feb 14, 2024, 12:20 AM IST
ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಭಾಗದಲ್ಲಿ ನೀಡುತ್ತಿದ್ದ “ಇಂದಿರಾ ಗಾಂಧಿ ಅತ್ಯುತ್ತಮ ಚೊಚ್ಚಲ ಚಲನಚಿತ್ರ’ ಪ್ರಶಸ್ತಿ ಮತ್ತು “ರಾಷ್ಟ್ರೀಯ ಭಾವೈಕ್ಯತೆಯ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್’ ಪ್ರಶಸ್ತಿಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಈ ಪ್ರಶಸ್ತಿಗಳಿಂದ ಇಂದಿರಾ ಗಾಂಧಿ ಮತ್ತು ನರ್ಗೀಸ್ ದತ್ ಹೆಸರುಗಳನ್ನು ಕೈಬಿಡಲಾಗಿದೆ.
ಕೇಂದ್ರ ಸರ್ಕಾರದ ಸಮಿತಿಯ ಶಿಫಾರಸ್ಸುಗಳ ಆಧಾರದಲ್ಲಿ ಬದಲಾವಣೆ ತಂದು “70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ನಿಯಮಗಳು 2022′ ಅನ್ನು ರೂಪಿಸಲಾಗಿದೆ. “ಇಂದಿರಾ ಗಾಂಧಿ ಅತ್ಯುತ್ತಮ ಚೊಚ್ಚಲ ಚಲನಚಿತ್ರ’ ಪ್ರಶಸ್ತಿಯು “ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ’ ಆಗಿ ಬದಲಾಗಲಿದೆ. ಅಲ್ಲದೇ ಈ ಪ್ರಶಸ್ತಿಗೆ ಈ ಹಿಂದೆ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಪ್ರಶಸ್ತಿ ಮೊತ್ತವನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಇನ್ನೂ ಮುಂದೆ ಈ ಮೊತ್ತವು ನಿರ್ದೇಶಕರಿಗೆ ಮಾತ್ರ ನೀಡಲಾಗುತ್ತದೆ. “ರಾಷ್ಟ್ರೀಯ ಭಾವೈಕ್ಯತೆಯ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್’ ಪ್ರಶಸ್ತಿಯು “ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ’ ಆಗಿ ಬದಲಾಗಲಿದೆ.
ಫಾಲ್ಕೆ ಪ್ರಶಸ್ತಿ ಮೊತ್ತ 15 ಲಕ್ಷ ರೂ.ಗಳಿಗೆ ಏರಿಕೆ
ಫಾಲ್ಕೆ ಪ್ರಶಸ್ತಿ ಮೊತ್ತವನ್ನು 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗೆ ಏರಿಸ ಲಾಗಿದೆ. ಇದೇ ರೀತಿ ಹಲವು ಪ್ರಶಸ್ತಿ ಗಳ ಮೊತ್ತವನ್ನು ಏರಿಸಲಾಗಿದೆ. ಸ್ವರ್ಣ ಕಮಲ ಪ್ರಸ್ತಿ ಮೊತ್ತವನ್ನು 3 ಲಕ್ಷ ರೂ.ಗಳಿಗೆ ಏರಿಸಿ, ರಜತ ಕಮ ಲ ಪ್ರಶಸ್ತಿ ವಿಜೇತ ರಿಗೆ ನೀಡುವ ಮೊತ್ತ 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.