ರಮೇಶ್ ಅರವಿಂದ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಖ್ಯಾತ ನಿರ್ದೇಶಕ ಶವವಾಗಿ ಪತ್ತೆ
Team Udayavani, Feb 14, 2024, 3:18 PM IST
ಕೊಚ್ಚಿ: ಮಾಲಿವುಡ್ ಸಿನಿಮಾರಂಗದ ನಿರ್ದೇಶಕರೊಬ್ಬರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
‘ಮಿಜಿಯಿತ್ತಲಿಲ್ ಕಣ್ಣೀರುಮಾಯಿ’ ಚಿತ್ರದ ಮೂಲಕ ಖ್ಯಾತಿ ಪಡೆದ ಮಲಯಾಳಂ ನಿರ್ದೇಶಕ ಪ್ರಕಾಶ್ ಕೋಲೇರಿ(65) ಕೇರಳದ ವಯನಾಡ್ ಜಿಲ್ಲೆಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಮೃತದೇಹ ಮಂಗಳವಾರ(ಫೆ.13 ರಂದು) ಪತ್ತೆಯಾಗಿದೆ.
ಪ್ರಕಾಶ್ ಅವರು ವಯನಾಡ್‌ನಲ್ಲಿರುವ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಎರಡು ದಿನಗಳಿಂದ ಮನೆಯಿಂದ ಹೊರಬಾರದ ಕಾರಣ ನೆರೆಹೊರೆಯವರು ಅನುಮಾನದಿಂದ ಮನೆ ಪಕ್ಕ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನೋಡಿದ್ದಾರೆ.
1987 ರಲ್ಲಿ ಪ್ರಕಾಶ್ ಅವರು ʼ’ಮಿಜಿಯಿತ್ತಲಿಲ್ ಕಣ್ಣೀರುಮಾಯಿ’ ಸಿನಿಮಾದ ಮೂಲಕ ನಿರ್ದೇಶಕ್ಕಿಳಿದಿದ್ದರು. ಆ ಬಳಿಕ 1993 ರಲ್ಲಿ ‘ಅವನ್ ಅನಂತಪದ್ಮನಾಭನ್’ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದಲ್ಲಿ ಕನ್ನಡದ ರಮೇಶ್ ಅರವಿಂದ್, ಸುಧಾ ಚಂದ್ರನ್, ಎಂ.ಜಿ.ಸೋಮನ್, ಮಾತ್ತು, ರಾಜನ್ ಪಿ ದೇವ್ ಮತ್ತು ಟಿ.ಜಿ.ರವಿ ಸೇರಿದಂತೆ ಇತರರಿದ್ದರು.
1999 ರಲ್ಲಿ ‘ವರುಣ್ ವರತಿರಿಕ್ಕಿಲ್ಲ’ ಬಿಡುಗಡೆಯಾದ ನಂತರ ಅವರು ಚಿತ್ರರಂಗದಿಂದ ಒಂದಷ್ಟು ಕಾಲ ಬ್ರೇಕ್ ಪಡೆದಿದ್ದರು.14 ವರ್ಷಗಳ ವಿರಾಮದ ನಂತರ ಅವರು ‘ಪಾಟ್ಟುಪುಸ್ತಕಂ’ ಮೂಲಕ ನಿರ್ದೇಶನಕ್ಕೆ ಮರಳಿದರು. ಇದು ಚಲನಚಿತ್ರ ನಿರ್ದೇಶಕರಾಗಿ ಅವರ ಕೊನೆಯ ಚಿತ್ರವೂ ಆಗಿತ್ತು.
ನಿರ್ದೇಶನದ ಹೊರತಾಗಿ ಅವರು, ಚಿತ್ರಕಥೆಗಳನ್ನು ಬರೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
ಜೀವನ ಪರ್ಯಂತ ವೀಲ್ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ
ʼಅಮರನ್’ ಫೋನ್ ನಂಬರ್ ಸೀನ್; ಸಾಯಿಪಲ್ಲವಿ ನಂಬರ್ ಎಂದು ವಿದ್ಯಾರ್ಥಿಗೆ ನೂರಾರು ಕಾಲ್ಸ್
Kamal Haasan: ʼಥಗ್ ಲೈಫ್ʼ ರಿಲೀಸ್ ಡೇಟ್ ಅನೌನ್ಸ್; ಬರ್ತ್ ಡೇಗೆ ಟೀಸರ್ ಗಿಫ್ಟ್
Nivin Pauly: ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್ ಪೌಲಿಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.