Agri: ಕೃಷಿ ಇಲಾಖೆ ಅಧಿಕಾರಿಗಳ ಬರ!- ನೇರ ನೇಮಕಾತಿಯಲ್ಲಿ ಹುದ್ದೆ ಭರ್ತಿಗೆ ಕ್ರಮ
ಸದನದಲ್ಲಿ ಪ್ರಶ್ನಿಸಿದ ಎಂಎಲ್‌ಸಿ ಹರೀಶ್ ಕುಮಾರ್
Team Udayavani, Feb 14, 2024, 10:50 PM IST
ಬೆಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಗಳ ರೈತರು ಹಾಗೂ ಬೆಳೆಗಾರರ ತರಬೇತಿ ಸಲುವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಸ್ಥಾಪಿಸಲಾದ ಏಕೈಕ ಕೃಷಿ ತರಬೇತಿ ಕೇಂದ್ರವು ಸಿಬಂದಿ ಕೊರತೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿಂದಾಗಿ ನಿಸ್ತೇಜಗೊಂಡಿರುವ ಕುರಿತು ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅವರು ಸದನದಲ್ಲಿ ಗಮನ ಸೆಳೆದಿದ್ದಾರೆ.
ರೈತರು, ಬೆಳೆಗಾರರ ತರಬೇತಿಗೆಂದೇ ಬೆಳ್ತಂಗಡಿ ತಾಲೂಕಿನಲ್ಲಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಏಕೈಕ ರೈತ ತರಬೇತಿ ಕೇಂದ್ರದ ವಿಚಾರವಾಗ ಜ. 4ರಂದು ಉದಯವಾಣಿಯಲ್ಲಿ “ನಿಸ್ತೇಜ ಸ್ಥಿತಿಗೆ ಜಿಲ್ಲೆಯ ಏಕೈಕ ಕೃಷಿ ತರಬೆತಿ ಕೇಂದ್ರ ಕರಾವಳಿ ಭಾಗದ ಕೃಷಿ ಇಲಾಖೆಗಳಿಗೇಕೆ ಅಧಿಕಾರಿಗಳ ಬರ!” ಎಂಬ ಶೀರ್ಷಿಕೆಯಲ್ಲಿ ವರದಿ ಬಿತ್ತರಿಸಲಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರದ ಮುಂದಿನ ಅಗತ್ಯತೆಗಳ ಬಗ್ಗೆ ಯಾವ ಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಸಚಿವರಾದ ಎನ್. ಚಲುವರಾಯ ಸ್ವಾಮಿ ಅವರಲ್ಲಿ ಹರೀಶ್ ಕುಮಾರ್ ಪ್ರಶ್ನೆ ಎತ್ತಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬೆಳ್ತಂಗಡಿ ಕಚೇರಿಗೆ ಒಟ್ಟು 14 ವಿವಿಧ ಹುದ್ದೆಗಳು ಮಂಜೂರಾಗಿದ್ದು, 11 ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಈ ತರಬೇತಿ ಕೇಂದ್ರದಲ್ಲಿ ಒಬ್ಬ ಸಹಾಯಕ ಕೃಷಿ ನಿರ್ದೇಶಕರು, ಒಬ್ಬ ಅಧೀಕ್ಷಕರು ಹಾಗೂ ಒಬ್ಬ ಪ್ರಥಮ ದರ್ಜ ಸಹಾಯಕರ ಹುದ್ದೆಗಳು ಮಾತ್ರ ಭರ್ತಿಯಾಗಿದೆ. ಅದಾಗ್ಯೂ ಅಧಿಕಾರಿಗಳನ್ನು ಹೆಚ್ಚಿನ ಪ್ರಭಾರದಲ್ಲಿರಿಸಿ ತರಬೇತಿ ಕಾರ್ಯಗಳಿಗೆ ಅಡಚಣೆಯಾಗದಂತೆ ಕ್ರಮ ವಹಿಸಲಾಗಿದೆ. ಮುಂದುವರೆದು, 100 ಕೃಷಿ ಅಧಿಕಾರಿ ಮತ್ತು 650 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆಯ ಸಮ್ಮತಿ ದೊರೆತಿದ್ದು, ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ತುಂಬಲು ಕ್ರಮ ವಹಿಸಲಾಗುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.