ರಾಜ್‌ಕೋಟ್‌: ಭಾರತಕ್ಕೆ ಮಧ್ಯಮ ಕ್ರಮಾಂಕದ್ದೇ ಡೌಟ್‌ ; ಸರ್ಫ‌ರಾಜ್‌ ಟೆಸ್ಟ್‌ ಪದಾರ್ಪಣೆ ಖಚಿತ

ರೇಸ್‌ನಲ್ಲಿದ್ದಾರೆ ಪಡಿಕ್ಕಲ್‌, ಜುರೆಲ್‌

Team Udayavani, Feb 15, 2024, 6:10 AM IST

1-wqwqw

ರಾಜ್‌ಕೋಟ್‌: ಹೈದರಾಬಾದ್‌ನಲ್ಲಿ ಸೋತು, ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್‌ಗೆ ಸೋಲಿನ ಬಿಸಿ ಮುಟ್ಟಿಸಿದ ಭಾರತವೀಗ ರಾಜ್‌ಕೋಟ್‌ನಲ್ಲಿ ರಾಜನೆನಿಸಿಕೊಳ್ಳುವ ಗುರಿ ಯೊಂದಿಗೆ 3ನೇ ಟೆಸ್ಟ್‌ ಆಡಲಿಳಿಯಲಿದೆ. 1-1 ಸಮಬಲದಲ್ಲಿ ನೆಲೆಸಿರುವ ಸರಣಿ, ದೊಡ್ಡ ದೊಂದು ಬ್ರೇಕ್‌ ಬಳಿಕ ಗುರುವಾರ ಪುನರಾ ರಂಭಗೊಳ್ಳಲಿದೆ.

ರೋಹಿತ್‌ ಶರ್ಮ ಬಳಗವೀಗ ಗೆಲುವಿನ ಉತ್ಸಾಹದಲ್ಲಿದ್ದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಹೊಂದಾಣಿಕೆಯ ಚಿಂತೆಯಲ್ಲಿದೆ. ವಿರಾಟ್‌ ಕೊಹ್ಲಿ ಸೇರಿದಂತೆ ಒಂದೆರಡು ವರ್ಷಗಳಿಂದೀಚೆ ತಂಡದ ಬೆನ್ನೆಲುಬಾಗಿದ್ದ ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ ಮೊದಲಾದ ಟೆಸ್ಟ್‌ ಸ್ಪೆಷಲಿಸ್ಟ್‌ಗಳಿಂದ ಟೀಮ್‌ ಇಂಡಿಯಾ ವಂಚಿತವಾಗಿದೆ. ಸ್ಥಿರ ಪ್ರದರ್ಶನ ನೀಡುತ್ತಿದ್ದ ಕೆ.ಎಲ್‌. ರಾಹುಲ್‌ ಕೂಡ 3ನೇ ಟೆಸ್ಟ್‌ನಿಂದ ಬೇರ್ಪಟ್ಟಿದ್ದಾರೆ. ಅಷ್ಟೇನೂ ಪರಿಣಾಮ ಬೀರದ ಶ್ರೇಯಸ್‌ ಅಯ್ಯರ್‌ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಮಿಡ್ಲ್ ಆರ್ಡರ್‌ನಲ್ಲಿ ಅನನುಭವಿಗಳೇ ಭಾರತಕ್ಕೆ ಅನಿವಾರ್ಯರಾಗಿದ್ದಾರೆ.

ಅನನುಭವಿ ಮಿಡ್ಲ್ ಆರ್ಡರ್‌
ರೋಹಿತ್‌ ಶರ್ಮ, ಯಶಸ್ವಿ ಜೈಸ್ವಾಲ್‌ ಮತ್ತು ಶುಭಮನ್‌ ಗಿಲ್‌ ಮೊದಲ 3 ಸ್ಥಾನ ತುಂಬಿದ ಬಳಿಕ ಭಾರತದ ಬ್ಯಾಟಿಂಗ್‌ ಸರದಿ ದುರ್ಬಲವಾಗಿ ಗೋಚರಿಸುತ್ತಿದೆ. ರಜತ್‌ ಪಾಟಿದಾರ್‌ ಕೇವಲ ಒಂದು ಟೆಸ್ಟ್‌ ಪಂದ್ಯದ ಅನುಭವಿ. ಸಫ‌ìರಾಜ್‌ ಖಾನ್‌ ಇನ್ನಷ್ಟೇ ಟೆಸ್ಟ್‌ ಕ್ಯಾಪ್‌ ಧರಿಸಬೇಕಿದೆ. ರಾಹುಲ್‌ ಬದಲಿಗೆ ಬಂದ ದೇವದತ್ತ ಪಡಿಕ್ಕಲ್‌ ಕೂಡ ಟೆಸ್ಟ್‌ ಆಡಿದವರಲ್ಲ. ಟೀಮ್‌ ಇಂಡಿಯಾದ ಮಿಡ್ಲ್ ಆರ್ಡರ್‌ ಯಾವತ್ತೂ ಇಷ್ಟು ಅನನುಭವಿಗಳಿಂದ ಕೂಡಿರಲಿಲ್ಲ.

ಅಂದಮಾತ್ರಕ್ಕೆ ಇದೇನೂ ದುರ್ಬಲವೆಂದಲ್ಲ. ಸರ್ಫ‌ರಾಜ್‌ ದೇಶೀಯ ಕ್ರಿಕೆಟ್‌ನಲ್ಲಿ ರನ್‌ ಪ್ರವಾಹವನ್ನೇ ಹರಿಸುತ್ತ ಬಂದಿದ್ದಾರೆ. ಇವರಿಗೆ ಎಂದೋ ಟೆಸ್ಟ್‌ ತಂಡದಲ್ಲಿ ಸ್ಥಾನ ಸಿಗಬೇಕಿತ್ತು. ಆದರೀಗ ಪದಾರ್ಪಣೆಯ ಟೆಸ್ಟ್‌ನಲ್ಲೇ ಸರ್ಫ‌ರಾಜ್‌ ಮಧ್ಯಮ ಕ್ರಮಾಂಕದ ಬಹು ದೊಡ್ಡ ಭಾರವನ್ನು ಹೊರಬೇಕಾಗಿರುವುದು ವಿಪರ್ಯಾಸ.ಇದನ್ನು ಇಂಗ್ಲೆಂಡ್‌ನ‌ ಮಧ್ಯಮ ಕ್ರಮಾಂಕ ದೊಂದಿಗೆ ಹೋಲಿಸಿ ನೋಡೋಣ. ಜೋ ರೂಟ್‌, ಜಾನಿ ಬೇರ್‌ಸ್ಟೊ ಮತ್ತು ಬೆನ್‌ ಸ್ಟೋಕ್ಸ್‌ ಅವರದು ಒಟ್ಟು 333 ಟೆಸ್ಟ್‌ಗಳ ಧಾರಾಳ ಅನುಭವ!

ಜಡೇಜ ಓಕೆ; ಭರತ್‌ ಬೇಕೇ?
ಆಲ್‌ರೌಂಡರ್‌ ರವೀಂದ್ರ ಜಡೇಜ ಚೇತರಿಸಿ ಕೊಂಡ ಸುದ್ದಿ ಬಂದಿದೆ. ಇವರು ಆಡುವುದು ಬಹುತೇಕ ಖಚಿತ. ತವರಿನಂಗಳದಲ್ಲಿ ಇವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು. ಕಳೆದ ಸಲ ಇಂಗ್ಲೆಂಡ್‌ ವಿರುದ್ಧ ಇಲ್ಲಿ ಆಡಿದಾಗ ಜಡೇಜ ಶತಕ ಬಾರಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಇನ್ನು ವಿಕೆಟ್‌ ಕೀಪರ್‌ ವಿಷಯ. ಕೆ.ಎಸ್‌. ಭರತ್‌ ಅವರದು ಇಲ್ಲಿಯ ತನಕ ಲೆಕ್ಕದ ಭರ್ತಿಯ ಪಾತ್ರ. ಕೀಪಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗ ಗಳೆರಡರಲ್ಲೂ ಇವರದು ನೀರಸ ಪ್ರದರ್ಶನ. ಈ ಸ್ಥಾನಕ್ಕೆ ಉತ್ತರಪ್ರದೇಶದ 23 ವರ್ಷದ ಕ್ರಿಕೆಟಿಗ ಧ್ರುವ ಜುರೆಲ್‌ ಹೊಂಚುಹಾಕಿ ಕುಳಿತಿದ್ದಾರೆ. ಇವರದು ಒಂಥರ ಆಕ್ರಮಣಕಾರಿ ಆಟ. 15 ಪ್ರಥಮ ದರ್ಜೆ ಪಂದ್ಯಗಳಿಂದ 46.47ರ ಸರಾಸರಿಯಲ್ಲಿ ರನ್‌ ಪೇರಿಸಿದ್ದಾರೆ. ಆದರೆ ಟೆಸ್ಟ್‌ ಕ್ರಿಕೆಟ್‌ ಎಂಬುದು ಡಿಫ‌ರೆಂಟ್‌ ಬಾಲ್‌ ಗೇಮ್‌. ಇಶಾನ್‌ ಕಿಶನ್‌ ಎಡವಟ್ಟು ಮಾಡಿಕೊಂಡಿದ್ದರಿಂದ ಜುರೆಲ್‌ ಮುನ್ನೆಲೆಗೆ ಬಂದರೆಂಬುದು ಗುಟ್ಟೇನಲ್ಲ.

ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದ ಪ್ರಮುಖನೆಂದರೆ ಯಶಸ್ವಿ ಜೈಸ್ವಾಲ್‌. ಒಂದು ದ್ವಿಶತಕ ಸೇರಿದಂತೆ 321 ರನ್‌ ಪೇರಿಸಿದ್ದಾರೆ. ಸೆಹವಾಗ್‌ ಅವರಂತೆ ಡ್ಯಾಶಿಂಗ್‌ ಓಪನರ್‌ ಆಗಿದ್ದು, ನಿಂತು ಆಡುವಲ್ಲೂ ಯಶಸ್ಸು ಕಾಣುತ್ತಿದ್ದಾರೆ. ಹಾಗೆಯೇ ಶುಭಮನ್‌ ಗಿಲ್‌. ಇವರು ಗುಜರಾತ್‌ ಟೈಟಾನ್ಸ್‌ ಪರ ಆಡಲಷ್ಟೇ ಲಾಯಕ್ಕು ಎನ್ನುವಾಗಲೇ ಶತಕವೊಂದನ್ನು ಬಾರಿಸಿ ರನ್‌ ಬರಗಾಲ ನೀಗಿಸಿಕೊಂಡಿದ್ದಾರೆ.

ರೋಹಿತ್‌ ಆಟ ಸಾಲದು
ಆದರೆ ನಾಯಕನಾಗಿ ರೋಹಿತ್‌ ಶರ್ಮ ಆಟ ಮಾತ್ರ ಏನೇನೂ ಸಾಲದು. 4 ಇನ್ನಿಂಗ್ಸ್‌ಗಳಲ್ಲಿ ಇವರ ಗಳಿಕೆ 24, 39, 14, 13 ರನ್‌ ಮಾತ್ರ. ಕ್ಯಾಪ್ಟನ್‌ನ ಕಳಪೆ ಆಟ ಮುಂದುವರಿದರೆ ಇದರಿಂದ ಅನನುಭವಿ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚುವುದು ಖಚಿತ.

ರಾಜ್‌ಕೋಟ್‌ನದ್ದು ಟರ್ನಿಂಗ್‌ ಟ್ರ್ಯಾಕ್‌ ಅಲ್ಲ, ಸ್ಪಿನ್ನರ್‌ಗಳಿಗೆ ಭಾರೀ ಪ್ರಮಾಣದಲ್ಲೇನೂ ನೆರವಾಗಲಿಕ್ಕಿಲ್ಲ ಎಂದು ಭಾವಿಸಲಾಗಿದೆ. ಇದು ಬ್ಯಾಟರ್‌ಗಳಿಗೆ ಹೆಚ್ಚು ಸಹಕಾರಿ ಎನ್ನಲಾಗಿದೆ. ಬೌಲಿಂಗ್‌ನಲ್ಲಿ ಮಿಶ್ರಫ‌ಲ ಲಭಿಸೀತು. ಅಂದರೆ ಆರಂಭದಲ್ಲಿ ವೇಗಿಗಳಿಗೆ, ಬಳಿಕ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ.

ಭಾರತ ಸಂಭಾವ್ಯ ತಂಡ
ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ರಜತ್‌ ಪಾಟಿ ದಾರ್‌, ಸಫ‌ìರಾಜ್‌ ಖಾನ್‌, ರವೀಂದ್ರ ಜಡೇಜ, ಧ್ರುವ ಜುರೆಲ್‌/ಕೆ.ಎಸ್‌. ಭರತ್‌, ಆರ್‌. ಅಶ್ವಿ‌ನ್‌, ಕುಲದೀಪ್‌ ಯಾದವ್‌, ಜಸಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌.

ಆಡುವ ಬಳಗಕ್ಕೆ ವುಡ್‌
ಇಂಗ್ಲೆಂಡ್‌ ತಂಡ ಒಂದು ದಿನ ಮೊದಲೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ದ್ವಿತೀಯ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ವೇಗಿ ಮಾರ್ಕ ವುಡ್‌ ವಾಪಸಾಗಿದ್ದಾರೆ. ವುಡ್‌ ಅವರಿಗಾಗಿ ಸ್ಪಿನ್ನರ್‌ ಶೋಯಿಬ್‌ ಬಶೀರ್‌ ಅವರನ್ನು ಕೈಬಿಡಲಾಗಿದೆ.

ಇಂಗ್ಲೆಂಡ್‌ ಇಲೆವೆನ್‌: ಜಾಕ್‌ ಕ್ರಾಲಿ, ಬೆನ್‌ ಡಕೆಟ್‌, ಓಲೀ ಪೋಪ್‌, ಜೋ ರೂಟ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌ (ನಾಯಕ), ಬೆನ್‌ ಫೋಕ್ಸ್‌, ರೆಹಾನ್‌ ಅಹ್ಮದ್‌, ಟಾಮ್‌ ಹಾರ್ಟ್ಲಿ , ಮಾರ್ಕ್‌ ವುಡ್‌, ಜೇಮ್ಸ್‌ ಆ್ಯಂಡರ್ಸನ್‌.

ಟಿ20 ವಿಶ್ವಕಪ್‌:ರೋಹಿತ್‌ ನಾಯಕ
ಮುಂಬರುವ ಟಿ20 ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮ ಅವರೇ ಭಾರತ ತಂಡದ ನಾಯಕರಾಗಿರುವರು ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದರು. ರಾಜ್‌ಕೋಟ್‌ ಕ್ರೀಡಾಂಗಣಕ್ಕೆ “ನಿರಂಜನ್‌ ಶಾ ಸ್ಟೇಡಿಯಂ’ ಎಂದು ನಾಮಕರಣಗೊಳಿಸುವ ಸಂದರ್ಭದಲ್ಲಿ ಮಾತಾಡಿದ ಅವರು, “ಏಕದಿನ ವಿಶ್ವಕಪ್‌ ಸೋಲು ದೊಡ್ಡ ಹಾರ್ಟ್‌ ಬ್ರೇಕ್‌. ಆದರೆ ರೋಹಿತ್‌ ನಾಯಕತ್ವದಲ್ಲಿ ಭಾರತ ಖಂಡಿತವಾಗಿಯೂ ಟಿ20 ವಿಶ್ವಕಪ್‌ ಗೆಲ್ಲಲಿದೆ’ ಎಂದು ಶಾ ಹೇಳಿದರು.

500 ವಿಕೆಟ್‌ಗಳತ್ತ ಅಶ್ವಿ‌ನ್‌
ರಾಜ್‌ಕೋಟ್‌ ಟೆಸ್ಟ್‌ ಪಂದ್ಯದಲ್ಲಿ ಭಾರತದ ಹಿರಿಯ ಸ್ಪಿನ್ನರ್‌ ಆರ್‌. ಆಶ್ವಿ‌ನ್‌, ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌, ವೇಗಿ ಜೇಮ್ಸ್‌ ಆ್ಯಂಡರ್ಸನ್‌ ನೂತನ ಮೈಲುಗಲ್ಲು ನೆಡಲು ಸಜ್ಜಾಗಿ ನಿಂತಿದ್ದಾರೆ. ಅಶ್ವಿ‌ನ್‌ 500 ವಿಕೆಟ್‌ಗಳ ಕ್ಲಬ್‌ಗ ಸೇರ್ಪಡೆ ಗೊಳ್ಳುವ ಕ್ಷಣಗಣನೆಯಲ್ಲಿದ್ದಾರೆ. ಇದಕ್ಕೆ ಬೇಕಿರುವುದು ಒಂದು ವಿಕೆಟ್‌ ಮಾತ್ರ!
ಇದು ಅಶ್ವಿ‌ನ್‌ ಅವರ 98ನೇ ಟೆಸ್ಟ್‌ ಪಂದ್ಯ ವಾಗಿದ್ದು, ಈವರೆಗೆ 499 ವಿಕೆಟ್‌ ಗಳನ್ನು ಬೇಟೆಯಾಡಿದ್ದಾರೆ. ಇನ್ನೊಂದು ವಿಕೆಟ್‌ ಕೆಡವಿದರೆ 500 ವಿಕೆಟ್‌ ಉರುಳಿಸಿದ ವಿಶ್ವದ 9ನೇ ಹಾಗೂ ಭಾರತದ 2ನೇ ಬೌಲರ್‌ ಆಗುವರು. ಭಾರತದ ಮೊದಲಿಗನೆಂದರೆ ಅನಿಲ್‌ ಕುಂಬ್ಳೆ (619 ವಿಕೆಟ್‌).

ಆ್ಯಂಡರ್ಸನ್‌ 700…
ವೇಗಿ ಜೇಮ್ಸ್‌ ಆ್ಯಂಡರ್ಸನ್‌ 700 ವಿಕೆಟ್‌ಗಳ ಗಡಿಯನ್ನು ಸಮೀಪಿಸಿದ್ದಾರೆ. ಇದಕ್ಕೆ 5 ವಿಕೆಟ್‌ ಅಗತ್ಯವಿದೆ. ಆಗ ಈ ಸಾಧನೆಗೈದ 3ನೇ ಬೌಲರ್‌ ಹಾಗೂ ಮೊದಲ ವೇಗಿ ಎನಿಸಲಿದ್ದಾರೆ.

ಸ್ಟೋಕ್ಸ್‌ 100ನೇ ಟೆಸ್ಟ್‌
ಬೆನ್‌ ಸ್ಟೋಕ್ಸ್‌ ಅವರಿಗೆ ಇದು 100ನೇ ಟೆಸ್ಟ್‌ ಆಗಿದೆ. ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್‌ ತಂಡದ ನಾಯಕರಾಗಿರುವುದು ವಿಶೇಷ. ಇದು ಸ್ಟೋಕ್ಸ್‌ ಪಾಲಿಗೆ ಸ್ಮರಣೀಯ ವಾದೀತೇ ಎಂಬುದೊಂದು ಕುತೂಹಲ.

 ಆರಂಭ: 9.30
 ಪ್ರಸಾರ: ಸ್ಪೋರ್ಟ್ಸ್ 18

ಟಾಪ್ ನ್ಯೂಸ್

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.