Farmers: ಗ್ರಾಮೀಣ ಭಾರತ ಬಂದ್- ದಿಲ್ಲಿ ಚಲೋ ಪ್ರತಿಭಟನೆಗೆ ಗ್ರಾಮ್ಯ ರೈತರ ಬೆಂಬಲ
ಕೃಷಿ ಚಟುವಟಿಕೆಗೆ ಇಂದು ಬ್ರೇಕ್
Team Udayavani, Feb 16, 2024, 12:41 AM IST
ಹೊಸದಿಲ್ಲಿ: “ದಿಲ್ಲಿ ಚಲೋ’ ರೈತ ಪ್ರತಿಭಟನೆ ಮೂರನೇ ದಿನ ಪೂರೈಸಿದ ಬೆನ್ನಲ್ಲೇ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿ ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಯೂನಿಯನ್ (ಬಿಕೆಯು) ಸೇರಿದಂತೆ ದೇಶದ ಹಲವಾರು ರೈತ ಸಂಘಟನೆಗಳು ಶುಕ್ರವಾರ “ಗ್ರಾಮೀಣ ಭಾರತ್ ಬಂದ್’ ನಡೆಸಲಿವೆ.
ಈ ಕುರಿತಂತೆ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಮಾಹಿತಿ ನೀಡಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 4ರ ವರೆಗೆ ದೇಶಾದ್ಯಂತ ಯಾವುದೇ ಗ್ರಾಮಗಳಲ್ಲೂ ಕೃಷಿ ಚಟುವಟಿಕೆ ಗಳನ್ನು ನಡೆಸದಂತೆ ಕರೆ ನೀಡಿದ್ದೇವೆ. ರೈತರೆಲ್ಲರೂ ಸಂಪೂರ್ಣವಾಗಿ ಕೃಷಿ ಚಟುವಟಿ ಕೆ ಸ್ಥಗಿತಗೊಳಿಸಲಿದ್ದಾರೆ. ರೈತರಾಗಲಿ, ಕೃಷಿ ಕಾರ್ಮಿಕರಾಗಲಿ ಕಾರ್ಯನಿರ್ವಹಿಸುವುದಿಲ್ಲ ಎಂದಿದ್ದಾರೆ. ಪ್ರತಿಭಟನೆ ಭಾಗವಾಗಿ ರಸ್ತೆ ತಡೆ ಇರುತ್ತಾದರೂ ಹೆದ್ದಾರಿಗಳ ತಡೆ ಇರುವುದಿಲ್ಲ, ವ್ಯಾಪಾರ ಒಕ್ಕೂಟಗಳೂ ಬಂದ್ಗೆ ಬೆಂಬಲ ಸೂಚಿಸಲಿವೆ ಎಂದೂ ತಿಳಿಸಿದ್ದಾರೆ.
ರೈಲು ರೋಕೋ ಪ್ರತಿಭಟನೆ: ದಿಲ್ಲಿ ಚಲೋ ಬೆಂಬಲಿಸಿ ಪಂಜಾಬ್ನಲ್ಲಿ ಗುರುವಾರ ರೈತರು ರೈಲು ತಡೆ ನಡೆಸಿದ್ದು, ಇದರಿಂದ 6 ರೈಲುಗಳ ಮಾರ್ಗ ಬದಲಿಸುವಂತಾಗಿದೆ. ಚಂಡೀಗಢ ಮಾರ್ಗವಾಗಿ ರೈಲು ಸಂಚರಿಸಿವೆ.ಟೋಲ್ಗಳಲ್ಲೂ ರೈತರು ಪ್ರತಿಭಟಿಸಿದ್ದಾರೆ.
ನಾಳೆಯವರೆಗೆ ಅಂಜರ್ತಾಲ ಸ್ಥಗಿತ: ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹರಿಯಾಣ ಸರಕಾರವು ಈಗಾಗಲೇ ರಾಜ್ಯದ 7 ಜಿಲ್ಲೆಗಳಲ್ಲಿ ವಿಧಿಸಿರುವ ಅಂತರ್ಜಾಲ ಸ್ಥಗಿತವನ್ನು ಮತ್ತೆ ಫೆ.17ರವರೆಗೂ ವಿಸ್ತರಿಸಿದೆ. ಇತ್ತ ಪಂಜಾಬ್ನಲ್ಲೂ 16ರ ವರೆಗೆ ಪಟಿಯಾಲಾ, ಸಂಗ್ರೂರ್, ಫತೇಹ್ಗಢ ಸಾಹಿಬ್ ಜಿಲ್ಲೆಗಳಲ್ಲಿ 16ರ ವರೆಗೆ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ.
ವಿಶ್ವಸಂಸ್ಥೆ ಮಧ್ಯಸ್ಥಿಕೆ ಕೋರಿದ ಅರ್ಜಿದಾರನಿಗೆ ಹೈ ತರಾಟೆ
ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಸರಕಾರ ರಸ್ತೆ ತಡೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿ ದ್ದ ಅರ್ಜಿಯಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಬೇಕು ಎಂದು ಕೋರಿರುವ ಅರ್ಜಿದಾರನನ್ನು ಪಂಜಾಬ್- ಹರಿಯಾಣ ಹೈ ಕೋರ್ಟ್ ತರಾಟೆ ತೆಗೆದುಕೊಂಡಿದೆ. ಮುಖ್ಯ ನ್ಯಾ| ಜಿ.ಎಸ್.ಸಂಧವಾಲಿಯಾ ಅವರ ನ್ಯಾಯಪೀಠ ನ್ಯಾಯಾಲಯದ ವ್ಯಾಪ್ತಿಗೆ ಪ್ರಕರಣ ತಂದ ಬಳಿಕವೂ ಹೇಗೆ ಮಧ್ಯಸ್ಥಿಕೆ ಕೋರುತ್ತೀರಿ ಎಂದು ಪ್ರಶ್ನಿಸಿದೆ.
ಮೋದಿ ವರ್ಚಸ್ಸಿಗೆ ಧಕ್ಕೆ ತರೋಣ: ಹೇಳಿಕೆ ವೈರಲ್
“ರಾಮ ಮಂದಿರದಿಂದಾಗಿ ಪ್ರಧಾನಿ ಮೋದಿ ಅವರ ವರ್ಚಸ್ಸು ಹೆಚ್ಚಿದೆ. ನಾವು ಆ ವರ್ಚಸ್ಸನ್ನು ಕೆಳಗಿಳಿಸಬೇಕು’. ಹೀಗೆಂದು ರೈತ ನಾಯಕ ಜಗಜಿತ್ಸಿಂಗ್ ದಲ್ಲೇವಾಲ್ ನೀಡಿರುವ ಹೇಳಿಕೆ ಯು ಭಾರೀ ವೈರಲ್ ಆಗಿದೆ. ಐಟಿ ಸಚಿವಾಲಯದ ಸಲಹೆಗಾರ ಕಂಚನ್ ಗುಪ್ತಾ ಈ ವೀಡಿಯೋ ಹಂಚಿಕೊಂಡು ರೈತ ಪ್ರತಿಭಟನೆಯ ಹೆಸರಿನ ಹಿಂದಿನ ನಿಜವಾದ ಉದ್ದೇಶ ಇದೇ ಎಂದಿದ್ದಾರೆ.
ರೈತರು ಪ್ರತಿಭಟನೆ ಮಾಡುತ್ತಿ ದ್ದಾರೆ, ದೇಶ ಹೊತ್ತಿ ಉರಿಯುತ್ತಿದೆ ಆದರೆ, ಬಿಜೆಪಿಗೆ ಈ ಬಗ್ಗೆ ಚಿಂತೆಯೇ ಇಲ್ಲ. ಇದು ಎಲ್ಲ ಲಕ್ಷ್ಮಣ ರೇಖೆಗಳನ್ನು ದಾಟಿದ ರಾವಣ ಸರಕಾರ.
ಮಮತಾ, ಪ.ಬಂಗಾಲ ಸಿಎಂ
ರೈತರು ಸೇನೆಗಳಂತೆ ನುಗ್ಗುತ್ತಾ, ರಾಜಕೀಯ ಹೇಳಿಕೆ ನೀಡುತ್ತಿ ದ್ದಾರೆ. ಎಲ್ಲರಿಗೂ ದಿಲ್ಲಿ ಪ್ರವೇಶಿಸುವ ಹಕ್ಕಿದೆ. ಆದರೆ, ರೈತರು ಅನುಸರಿಸು ತ್ತಿರುವ ರೀತಿ ಪ್ರಶ್ನಿಸುವಂತಿದೆ.
ಮನೋಹರ್ , ಹರಿಯಾಣ ಸಿಎಂ
ಪಿಎಂ ಮಾತಾಡಲಿ: ಆಗ್ರಹ
ರೈತ ಪ್ರತಿಭಟನೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸಚಿವರ ನಿಯೋಗದ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಮಾತುಕತೆ ನಡೆಸಬೇಕು ಎಂದು ಕಿಸಾನ್ ಮಜದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಾಂದೇರ್ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.