INDvsENG; 90 ವರ್ಷಗಳ ಭಾರತೀಯ ಇತಿಹಾಸದಲ್ಲಿ ದಾಖಲೆ ಬರೆದ ಧ್ರುವ್ ಜುರೆಲ್
Team Udayavani, Feb 16, 2024, 2:32 PM IST
ರಾಜ್ ಕೋಟ್: ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಯುವ ಕ್ರಿಕೆಟಿಗ ಧ್ರುವ್ ಜುರೆಲ್ ಅವರು ಪದಾರ್ಪಣೆ ಮಾಡಿದರು. 23 ವರ್ಷದ ಯುವ ವಿಕೆಟ್ ಕೀಪರ್ ಬ್ಯಾಟರ್ ಜುರೆಲ್ ಶುಕ್ರವಾರ ದಾಖಲೆಯೊಂದನ್ನು ಬರೆದರು.
ಜುರೆಲ್ ಚೊಚ್ಚಲ ಅರ್ಧಶತಕದ ಅವಕಾಶವನ್ನು ಕಳೆದುಕೊಂಡರು, ಆದರೆ ಯುವ ವಿಕೆಟ್‌ಕೀಪರ್ ಅವರು ಹಿರಿಯ ರಾಷ್ಟ್ರೀಯ ತಂಡಕ್ಕಾಗಿ ಟೆಸ್ಟ್ ನ ಅವರ ಮೊದಲ ಆಟದಲ್ಲಿ ಭಾರತೀಯ ಕ್ರಿಕೆಟ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದರು.
ಧ್ರುವ್ ಜುರೆಲ್ ಅವರು ಇಂದು ಗಳಿಸಿದ 46 ರನ್, ಕಳೆದ 90 ವರ್ಷಗಳಲ್ಲಿ ಟೆಸ್ಟ್ ಪದಾರ್ಪಣೆಯಲ್ಲಿ ಭಾರತೀಯ ವಿಕೆಟ್ ಕೀಪರ್ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ.
ಕೇವಲ ಒಬ್ಬ ಭಾರತೀಯ ವಿಕೆಟ್ ಕೀಪರ್ ತನ್ನ ಚೊಚ್ಚಲ ಟೆಸ್ಟ್ ನಲ್ಲಿ ಅರ್ಧಶತಕ ಬಾರಿಸಿದ್ದಾರೆ. 1934 ರಲ್ಲಿ ದಿಲಾವರ್ ಹುಸೇನ್ ಇಂಗ್ಲೆಂಡ್ ವಿರುದ್ಧ ಕೋಲ್ಕತ್ತಾದಲ್ಲಿ ತಮ್ಮ ಚೊಚ್ಚಲ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದರು.
Dhruv Jurel has the highest individual score as a Wicket-keeper in this Test series.
– Jurel has arrived…!!!! 🇮🇳 pic.twitter.com/dEObZAnaDD
— Johns. (@CricCrazyJohns) February 16, 2024
ಭಾರತೀಯ ಇನ್ನಿಂಗ್ಸ್‌ನ 124 ನೇ ಓವರ್‌ನಲ್ಲಿ ಲೇಟ್ ಕಟ್ ಮಾಡಲು ಪ್ರಯತ್ನಿಸಿದ ಜುರೆಲ್ ಔಟಾದರು. 46 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಜುರೆಲ್ ರೆಹಾನ್ ಅಹ್ಮದ್ ಎಸೆತದಲ್ಲಿ ವಿಕೆಟ್ ಕೀಪರ್ ಬೆನ್ ಫೋಕ್ಸ್ ಗೆ ಕ್ಯಾಚ್ ನೀಡಿ ಔಟಾದರು.
ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ 131 ರನ್, ರವೀಂದ್ರ ಜಡೇಜಾ 112 ರನ್ ಗಳ ಕೊಡುಗೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.