Mangaluru ಧರ್ಮ ಅವಹೇಳನ ಘಟನೆ; ಶಿಕ್ಷಕಿ ವಿರುದ್ದ ಎಫ್ ಐಆರ್ ಗೆ ಪೋಷಕರ ಒತ್ತಾಯ
Team Udayavani, Feb 16, 2024, 2:37 PM IST
ಮಂಗಳೂರು: ತರಗತಿಯಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿದ ನಗರದ ಶಾಲೆಯೊಂದರ ಶಿಕ್ಷಕಿಯ ವಿರುದ್ದ ಇನ್ನೂ ಕೂಡ ಎಫ್ಐಆರ್ ದಾಖಲಿಸದಿರುವ ಬಗ್ಗೆ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೋಷಕರು, ದೂರು ನೀಡಿ ವಾರವಾದರೂ ಎಫ್ಐಆರ್ ದಾಖಲಾಗಿಲ್ಲ. ಈ ಬಗ್ಗೆ ಕಮಿಷನರ್ ಅವರಲ್ಲಿ ಮಾತನಾಡಿದ್ದೇವೆ. ಸತ್ಯ ಏನೆಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಶೀಘ್ರ ತನಿಖೆ ನಡೆಸಿ ಸತ್ಯವನ್ನು ಪೊಲೀಸರು ಬಹಿರಂಗ ಪಡಿಸಬೇಕು. ಶಾಸಕರು, ಹಿಂದೂ ಸಂಘಟನೆ ಮುಖಂಡರ ವಿರುದ್ದ ದಾಖಲಾಗಿರುವ ಎಫ್ಐಆರ್ ನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಕಾಮತ್ ಪ್ರತಿಭಟನಾ ಸ್ಥಳದಲ್ಲಿದ್ದು ಪೋಷಕರ ಪರವಾಗಿ ಮಾತನಾಡಿದ್ದರು. ಅವರ ವಿರುದ್ದ ಎಫ್ಐಆರ್ ದಾಖಲಿಸಿರುವುದು ಸರಿಯಲ್ಲ. ಇನ್ನೋರ್ವ ಶಾಸಕ ಭರತ್ ಶೆಟ್ಟಿ, ವಿಎಚ್ ಪಿಯ ಶರಣ್ ಪಂಪ್ ವೆಲ್ ಸ್ಥಳದಲ್ಲಿರಲಿಲ್ಲ. ಅವರ ವಿರುದ್ದವೂ ಎಫ್ಐಆರ್ ದಾಖಲಿಸಲಾಗಿದೆ. ಇದು ಕೂಡ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಂತರ ಬಿಜೆಪಿ, ವಿಎಚ್ ಪಿ ಮುಖಂಡರು ಕೂಡ ಕಮಿಷನರ್ ಅವರನ್ನು ಭೇಟಿಯಾಗಿ ಅಸಮಧಾನ ಹೊರ ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.