Katapadi: ಶ್ರೀ ವಿಶ್ವನಾಥ ಕ್ಷೇತ್ರ ವರ್ಷಾವಧಿ ಮಹೋತ್ಸವ ಸಂಪನ್ನ
Team Udayavani, Feb 16, 2024, 11:23 PM IST
ಕಟಪಾಡಿ: ಬಿಲ್ಲವರ ಶಕ್ತಿ ಕೇಂದ್ರವಾದ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವರ್ಷಾವಧಿ ಮಹೋತ್ಸವದ ಹಗಲು ಉತ್ಸವ-ರಥೋತ್ಸವವು ಸಾವಿ ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ಸಂಪನ್ನ ಗೊಂಡಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪರವೂರು ರಾಕೇಶ ತಂತ್ರಿ ಅವರ ನೇತೃತ್ವ, ಪ್ರಧಾನ ಅರ್ಚಕ ದೇವದಾಸ ಶಾಂತಿ ಅವರ ಪೌರೋಹಿತ್ಯದಲ್ಲಿ ಫೆ. 9ರಿಂದ 17ರ ವರೆಗೆ ಶ್ರೀ ವಿಶ್ವನಾಥ ದೇವರು, ಶ್ರೀ ಅನ್ನಪೂಣೇಶ್ವರೀ ದೇವಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಕೃಷ್ಣ, ಶ್ರೀ ಅಯ್ಯಪ್ಪ, ಶ್ರೀ ನಾಗ ದೇವರು, ಶ್ರೀ ಕಲ್ಕುಡ ದೈವದ ಸನ್ನಿಧಿಯಲ್ಲಿ ಕಾರ್ಯಕ್ರಮಗಳು ನೆರವೇರಿದವು.
ಹಗಲು ರಥೋತ್ಸವದ ಸಂದರ್ಭ ಮಧ್ಯಾಹ್ನ ನಡೆದ ಮಹಾ ಅನ್ನ ಸಂತರ್ಪಣೆಯಲ್ಲಿ 2 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಪ್ರಧಾನ ಕೋಶಾಧಿಕಾರಿ ವೀರೇಶ್ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಯು. ಶಿವಾನಂದ, ಉಪಾಧ್ಯಕ್ಷರಾದ ಶ್ರೀಕರ ಅಂಚನ್, ಆನಂದ ಮಾಬಿಯಾನ್, ಜತೆ ಕಾರ್ಯದರ್ಶಿಗಳಾದ ಎನ್.ಜಿ. ಸುಕುಮಾರ್, ಪ್ರಮೋದ್ ಸುವರ್ಣ, ಜತೆ ಕೋಶಾಧಿಕಾರಿ ಆರ್.ಜಿ. ಕೋಟ್ಯಾನ್, ಆಂತರಿಕ ಲೆಕ್ಕ ಪರಿಶೋಧಕ ಆನಂದ ಜತ್ತನ್ನ, ಸೇವಾದಳಪತಿ ಹರೀಶ್ ಕುಂದರ್, ಮಹಿಳಾ ಬಳಗದ ಸಂಚಾಲಕಿ ಶಿಲ್ಪಾ ಜಿ. ಸುವರ್ಣ, ಆಡಳಿತ ಮಂಡಳಿಯ ಸದಸ್ಯರಾದ ಕೃಷ್ಣ ಸನಿಲ್ ಕಂಕಣಬೆಟ್ಟು, ಪ್ರತಾಪ್ ಕುಮಾರ್ ಉದ್ಯಾವರ, ಪ್ರಭಾಕರ ಪಾಲನ್, ಕಾಮ್‌ರಾಜ್ ಸುವರ್ಣ, ಸತೀಶ್ ಅಂಬಾಡಿ, ರಾಕೇಶ್ ಕುಂಜೂರು, ಶೋಭಾ ಎ. ಬಂಗೇರ, ಲೋಕೇಶ್ ಕುಮಾರ್ ಕೋಟೆ, ಸಂಘ ಸಂಸ್ಥೆಗಳ ಪ್ರತಿನಿಧಿ ನವೀನ್ ಅಮೀನ್, ಹರ್ಷ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯಪ್ರಕಾಶ್, ಗಣ್ಯರು, ಭಕ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ‘ಸುಲ್ತಾನ್ ಪುರ’… ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ
Katapady: ಲಾರಿಗೆ ಟೂರಿಸ್ಟ್ ವಾಹನ ಢಿಕ್ಕಿ; ಹಲವು ಪ್ರವಾಸಿಗರಿಗೆ ಗಂಭೀರ ಗಾಯ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.