Paytm: ಗ್ರಾಹಕರ ಅನುಕೂಲಕ್ಕಾಗಿ ಆ್ಯಕ್ಸಿಸ್ ಬ್ಯಾಂಕ್ ಜತೆ ಪೇಟಿಎಂ ಪಾಲುದಾರಿಕೆ
ಆ್ಯಕ್ಸಿಸ್‌ಗೆ ನೋಡಲ್ ಖಾತೆ ವರ್ಗಾಯಿಸಿದ ಪೇಟಿಎಂ ಬ್ಯಾಂಕ್
Team Udayavani, Feb 17, 2024, 9:31 PM IST
ನವದೆಹಲಿ: ಈ ಹಿಂದಿನಂತೆ ತನ್ನ ಗ್ರಾಹಕರು ವಹಿವಾಟು ನಡೆಸುವುದನ್ನು ಮುಂದುವರಿಸುವಂತಾಗಲು ಪೇಟಿಎಂ ಬ್ಯಾಂಕ್ ತನ್ನ ನೋಡಲ್ ಖಾತೆಯನ್ನು ಆಕ್ಸಿಸ್ ಬ್ಯಾಂಕ್‌ಗೆ ವರ್ಗಾಯಿಸಿದೆ ಎಂದು ಪೇಟಿಎಂ ಮಾಲೀಕತ್ವದ ಒನ್ 97 ಕಮ್ಯನಿಕೇಶನ್ಸ್ ತಿಳಿಸಿದೆ.
ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಎಸೊð ಖಾತೆಯನ್ನು ತೆರೆಯುವ ಮೂಲಕ ಈ ಹಿಂದೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ.(ಪಿಪಿಬಿಎಲ್)ನಲ್ಲಿದ್ದ ನೋಡಲ್ ಖಾತೆಯನ್ನು ಆಕ್ಸಿಸ್ ಬ್ಯಾಂಕ್‌ಗೆ ವರ್ಗಾಯಿಸಲಾಗಿದೆ. ಇದರಿಂದ ಪೇಟಿಎಂ ಆ್ಯಪ್ ಬಳಸುವ ಗ್ರಾಹಕರು ಎಂದಿನಂತೆ ನಿರಾಳವಾಗಿ ವಹಿವಾಟು ನಡೆಸಬಹುದು ಎಂದು ಕಂಪನಿ ಹೇಳಿದೆ.
ಆರ್‌ಬಿಐ ಗಡುವು ಮಾ.15ರವರೆಗೆ ವಿಸ್ತರಣೆ
ಈ ಹಿಂದೆ, ಫೆ.29ರ ನಂತರ ಯಾವುದೇ ಗ್ರಾಹಕರ ಖಾತೆ, ಪ್ರಿಪೇಡ್ ಖಾತೆ, ವ್ಯಾಲೆಟ್, ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿ, ಸಾಲ ವಹಿವಾಟು ಅಥವಾ ಟಾಪ್ ಅಪ್ ಮಾಡದಂತೆ ಪಿಪಿಬಿಎಲ್‌ಗೆ ಆರ್‌ಬಿಐ ನಿರ್ಬಂಧಿಸಿತ್ತು. ಈಗ ಗ್ರಾಹಕರ ಹಿತದೃಷ್ಟಿಯಿಂದ ಈ ಗಡುವನ್ನು ಮಾ.15ರವರೆಗೆ ವಿಸ್ತರಿಸಲಾಗಿದೆ. ಇದೇ ವೇಳೆ, ಗ್ರಾಹಕರು ತಮ್ಮ ಪೇಟಿಎಂ ಪಾವತಿ ಬ್ಯಾಂಕ್ ಖಾತೆಗಳು ಮತ್ತು ವ್ಯಾಲೆಟ್‌ಗಳಿಂದ ಹಣ ಹಿಂಪಡೆಯಬಹುದು ಅಥವಾ ಆ ಹಣ ಖಾಲಿಯಾಗುವವರೆಗೂ ಬಳಸಬಹುದು. ಆದರೆ ಮಾ.15ರ ನಂತರ ಹೊಸದಾಗಿ ಯಾವುದೇ ಹಣ ಠೇವಣಿ ಮಾಡುವಂತಿಲ್ಲ ಎಂದು ಆರ್‌ಬಿಐ ತಿಳಿಸಿದೆ. ಅಲ್ಲದೇ ಈ ಖಾತೆಗಳಿಗೆ ತಮ್ಮ ಸಂಬಳ ಅಥವಾ ಸರ್ಕಾರದ ಸಬ್ಸಿಡಿಗಳು ಸೇರಿದಂತೆ ಇತರೆ ಪಾವತಿಗಳನ್ನು ಸ್ವೀಕರಿಸುವ ಗ್ರಾಹಕರು, ಮಾ.15ರೊಳಗೆ ಪರ್ಯಾಯ ವ್ಯವಸ್ಥೆ ಕಡೆಗೆ ಹೊರಳಬೇಕಾಗುತ್ತದೆ ಎಂದೂ ಸೂಚಿಸಿದೆ.
c
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.