Test ಆರ್‌. ಅಶ್ವಿ‌ನ್‌: 500 ವಿಕೆಟ್‌ ಮಹತ್ಸಾಧನೆ


Team Udayavani, Feb 18, 2024, 6:00 AM IST

1-eqwwwqe

ಅನಿಲ್‌ ಕುಂಬ್ಳೆ, ಹರ್ಭಜನ್‌ ಸಿಂಗ್‌ ಬಳಿಕ ಭಾರತೀಯ ಕ್ರಿಕೆಟ್‌ ರಂಗದ ಸ್ಪಿನ್‌ ದಾಳಿಯಲ್ಲಿ ರವಿಚಂದ್ರನ್‌ ಅಶ್ವಿ‌ನ್‌ ಮಹೋನ್ನತ ಸಾಧನೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‌ ಕಂಡ ಶ್ರೇಷ್ಠ ಸ್ಪಿನ್‌ ಸಾಧಕರಲ್ಲಿ ಅಶ್ವಿ‌ನ್‌ ಕೂಡ ಒಬ್ಬರಾಗಿದ್ದಾರೆ. ರಾಜ್‌ಕೋಟ್‌ನಲ್ಲಿ ಸಾಗುತ್ತಿರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ನಲ್ಲಿ ಜಾಕ್‌ ಕ್ರಾಲಿ ಅವರ ವಿಕೆಟನ್ನು ಪಡೆಯುವ ಮೂಲಕ ಅವರು ಟೆಸ್ಟ್‌ನಲ್ಲಿ 500 ವಿಕೆಟ್‌ ಕಿತ್ತ ಸಾಧಕರ ಪಟ್ಟಿಗೆ ಸೇರಿಕೊಂಡರು. ಈ ಸಾಧನೆಗೈದ ಭಾರತದ ಎರಡನೇ ಹಾಗೂ ವಿಶ್ವದ 9ನೇ ಸಾಧಕರಾಗಿ ಮೆರೆದರು. 619 ವಿಕೆಟ್‌ ಕಿತ್ತಿರುವ ಅನಿಲ್‌ ಕುಂಬ್ಳೆ ಮೊದಲಿಗರು.

37ರ ಹರೆಯದ ಅಶ್ವಿ‌ನ್‌ 98ನೇ ಟೆಸ್ಟ್‌ನಲ್ಲಿ ಈ ಪರಾಕ್ರಮಗೈದರು. ಅವರು ಅತೀ ಕಡಿಮೆ ಟೆಸ್ಟ್‌ ನಲ್ಲಿ ಈ ಸಾಧನೆಗೈದ ಎರಡನೇ ಕ್ರಿಕೆಟಗರಾಗಿದ್ದಾರೆ. ಅಗ್ರಸ್ಥಾನದಲ್ಲಿರುವ ಮುತ್ತಯ್ಯ ಮುರಳೀಧರನ್‌ ಕೇವಲ 87 ಟೆಸ್ಟ್‌ಗಳಲ್ಲಿ ಈ ಸಾಧನೆ ದಾಖಲಿಸಿದ್ದರು. ಗರಿಷ್ಠ ವಿಕೆಟ್‌ ಉರುಳಿಸಿದವರಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ.
ಬಲಗೈ ಆಫ್ ಸ್ಪಿನ್ನರ್‌ ಅಶ್ವಿ‌ನ್‌ ಬ್ಯಾಟಿಂಗ್‌ನಲ್ಲಿಯೂ ಭಾರೀ ಯಶಸ್ಸು ಸಾಧಿಸಿ ಗಮನ ಸೆಳೆದಿದ್ದಾರೆ. ಭಾರತ, 2011ರ ವಿಶ್ವಕಪ್‌, 2013ರ ಚಾಂಪಿಯನ್‌ ಟ್ರೋಫಿ ಗೆಲ್ಲಲು ಅಶ್ವಿ‌ನ್‌ ಮಹತ್ತರ ಪಾತ್ರ ವಹಿಸಿದ್ದರು. ಟೆಸ್ಟ್‌ನಲ್ಲಿ ಯಶಸ್ವಿ ಆಲ್‌ರೌಂಡರ್‌ ಆಗಿ ಮೆರೆದಾಡಿದ ಅವರು ಐಸಿಸಿ ಟೆಸ್ಟ್‌ ಬೌಲಿಂಗ್‌ನಲ್ಲಿ 3ನೇ ರ್‍ಯಾಂಕ್‌ ಹೊಂದಿದ್ದಾರೆ.

ಆರಂಭಿಕ ಜೀವನ
1986ರ ಸೆಪ್ಟಂಬರ್‌ 17ರಂದು ಚೆನ್ನೈಯಲ್ಲಿ ಜನಿಸಿದ ಅಶ್ವಿ‌ನ್‌ ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಟೆಕ್‌ ಪದವಿ ಪಡೆದಿದ್ದರೂ ಕ್ರಿಕೆಟ್‌ನತ್ತ ಒಲವು ವ್ಯಕ್ತ ಪಡಿಸಿ ಅಪ್ರತಿಮ ಸಾಧನೆ ಮಾಡಿ ಮಿಂಚಿದ್ದಾರೆ. ಅರಂಭಿಕ ಬ್ಯಾಟ್ಸ್‌ಮನ್‌ ಆಗಿ ವೃತ್ತಿ ಜೀವನ ಆರಂಭಿಸಿದ ಅವರು ಕ್ರಮೇಣ ಆಫ್ ಸ್ಪಿನ್ನರ್‌ ಆಗಿ ರೂಪುಗೊಳ್ಳುವ ಮೊದಲು ಮಧ್ಯಮ ವೇಗಿ ಯಾಗಿಯೂ ಗುರುತಿಸಿಕೊಂಡಿದ್ದರು. 2006ರಲ್ಲಿ ತಮಿಳುನಾಡು ಪರ ರಣಜಿ ಪಂದ್ಯದಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟಿಗೆ ಕಾಲಿಟ್ಟ ಅವರು ಆರು ವಿಕೆಟ್‌ ಕಿತ್ತು ತನ್ನ ಬೌಲಿಂಗ್‌ ಶಕ್ತಿಯನ್ನು ತೆರೆದಿಟ್ಟರು. ಆರು ವರ್ಷ ತಂಡದ ನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.

2011ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆಗೈದದಲ್ಲದೇ ಐದು ವಿಕೆಟ್‌ ಕಿತ್ತ ಸಾಧಕರಾಗಿ ಮೂಡಿ ಬಂದರು. ತವರಿನ ಟರ್ನಿಂಗ್‌ ಟ್ರ್ಯಾಕ್‌ನಲ್ಲಿ ಅಪಾರ ಯಶಸ್ಸು ಸಾಧಿಸಿದ ಅವರು ಆಸ್ಟ್ರೇಲಿಯ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ 29 ವಿಕೆಟ್‌ ಕಿತ್ತ ಮೊದಲ ಬೌಲರ್‌ ಎಂದೆನಿಸಿಕೊಂಡರು.
2010ರ ಐಪಿಎಲ್‌ನಲ್ಲಿ ನೀಡಿದ ಅಮೋಘ ಪ್ರದರ್ಶನದ ಆಧಾರದಲ್ಲಿ ಅಶ್ವಿ‌ನ್‌ ತ್ರಿಕೋನ ಸರಣಿಯಲ್ಲಿ ಆಡಲು ಭಾರತೀಯ ತಂಡದಲ್ಲಿ ಸ್ಥಾನ ಪಡೆದರು. 2010ರ ಜೂನ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಏಕದಿನ ಕ್ರಿಕೆಟಿಗೆ ಪದಾರ್ಪಣೆಗೈದರು. ವಾರದ ಬಳಿಕ ಟಿ20 ಕ್ರಿಕೆಟಿಗೂ ಪದಾರ್ಪಣೆ‌ ಮಾಡಿದರು. ಏಕದಿನ ಕ್ರಿಕೆಟ್‌ನಲ್ಲಿ 156 ಮತ್ತು ಟಿ20ಯಲ್ಲಿ 72 ವಿಕೆಟ್‌ ಉರುಳಿಸಿದ ಸಾಧಕರಾಗಿದ್ದರೆ.

ಐಪಿಎಲ್‌ ಸಾಧನೆ
2008ರಲ್ಲಿ ಐಪಿಎಲ್‌ ಉದ್ಘಾಟನ ಋತು ವೇಳೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ದೇಶೀಯ ಆಟ ಗಾರರಾಗಿ ಒಪ್ಪಂದಕ್ಕೆ ಸಹಿ. 2009ರಲ್ಲಿ ಪದಾರ್ಪಣೆ. 2015ರ ವರೆಗೆ ಸತತ 8 ವರ್ಷ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದ ಅಶ್ವಿ‌ನ್‌ 2010 ಮತ್ತು 2011ರಲ್ಲಿ ಸತತ ಎರಡು ವರ್ಷ ತಂಡ ಪ್ರಶಸ್ತಿ ಗೆಲ್ಲಲು ಪ್ರಮುಖ ಕಾರಣರಾಗಿದ್ದರು. ಈ ಅವಧಿಯಲ್ಲಿ ಅವರು 97 ಪಂದ್ಯಗಳಲ್ಲಿ ಆಡಿದ್ದು 90 ವಿಕೆಟ್‌ ಉರುಳಿಸಿದ್ದರು. ಚೆನ್ನೈ ಎರಡು ಬಾರಿ ಚಾಂಪಿಯನ್ಸ್‌ ಲೀಗ್‌ ಗೆಲ್ಲಲು ಕಾರಣಕರ್ತರಾಗಿದ್ದರು.
ಪ್ರಸ್ತುತ ರಾಜಸ್ಥಾನ್‌ ರಾಯಲ್ಸ್‌ ಪರ ಆಡುತ್ತಿರುವ ಅಶ್ವಿ‌ನ್‌ ಒಟ್ಟಾರೆ 197 ಪಂದ್ಯಗಳಲ್ಲಿ ತನ್ನ ಕೈಚಳಕ ಪ್ರದರ್ಶಿಸಿದ್ದು 171 ವಿಕೆಟ್‌ ಉರುಳಿಸಿದ್ದಾರೆ. 714 ರನ್‌ ಬಾರಿಸಿ ಬ್ಯಾಟಿಂಗ್‌ನಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

500 ಪ್ಲಸ್‌ ವಿಕೆಟ್‌ ಕಿತ್ತವರು
ಮುತ್ತಯ್ಯ ಮುರಳೀಧರನ್‌ (ಶ್ರೀಲಂಕಾ) 800
ಶೇನ್‌ ವಾರ್ನ್ (ಆಸ್ಟ್ರೇಲಿಯ) 708
ಜೇಮ್ಸ್‌ ಆ್ಯಂಡರ್ಸನ್‌ (ಇಂಗ್ಲೆಂಡ್‌) 690
ಅನಿಲ್‌ ಕುಂಬ್ಳೆ (ಭಾರತ) 619
ಸ್ಟುವರ್ಟ್‌ ಬ್ರಾಡ್‌ (ಇಂಗ್ಲೆಂಡ್‌) 604
ಗ್ಲೆನ್‌ ಮೆಕ್‌ಗ್ರಾಥ್‌ (ಆಸ್ಟ್ರೇಲಿಯ) 563
ಕೋರ್ಟ್ನಿ ವಾಲ್ಶ್ (ವೆಸ್ಟ್‌ಇಂಡೀಸ್‌) 519
ನಥನ್‌ ಲಿಯೋನ್‌ (ಆಸ್ಟ್ರೇಲಿಯ) 517
ಆರ್‌. ಅಶ್ವಿ‌ನ್‌ (ಭಾರತ) 500

ದಾಖಲೆ-ಸಾಧನೆ
ಪದಾರ್ಪಣೆಗೈದ ಟೆಸ್ಟ್‌
ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದ ಸಾಧಕ.
ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 250, 300 ಮತ್ತು 350 ವಿಕೆಟ್‌ ಕಿತ್ತ ಕ್ರಿಕೆಟಿಗ
ಟೆಸ್ಟ್‌ನಲ್ಲಿ 500 ವಿಕೆಟ್‌ ಕಿತ್ತ ಭಾರತದ
ಎರಡನೇ ಮತ್ತು ವಿಶ್ವದ 9ನೇ ಕ್ರಿಕೆಟಿಗ.
ಟೆಸ್ಟ್‌ ಪಂದ್ಯವೊಂದರಲ್ಲಿ ಶತಕ
ಮತ್ತು ಐದು ವಿಕೆಟ್‌ ಕಿತ್ತ ಭಾರತದ ಏಕೈಕ ಆಟಗಾರ
ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್‌ ಕಿತ್ತ
ಭಾರತದ ಮೊದಲ ಆಟಗಾರ.
ಕ್ಯಾಲೆಂಡರ್‌ ವರ್ಷವೊಂದರಲ್ಲಿ 500 ರನ್‌ ಮತ್ತು 50 ವಿಕೆಟ್‌ ಪಡೆದ ಭಾರತದ ಎರಡನೇ ಕ್ರಿಕೆಟಿಗ
ಋತುವೊಂದರಲ್ಲಿ ಗರಿಷ್ಠ (2) ವಿಕೆಟ್‌ ಪಡೆದ ಸಾಧಕ.
ಒಟ್ಟಾರೆ 700 ಅಂತಾರಾಷ್ಟ್ರೀಯ ವಿಕೆಟ್‌ ಪಡೆದ ಭಾರತದ 3ನೇ ಕ್ರಿಕೆಟಿಗ
ಟೆಸ್ಟ್‌ ಕ್ರಿಕೆಟ್‌ನಲ್ಲಿ 5 ಶತಕ, 14 ಅರ್ಧಶತಕ ಮತ್ತು 500 ವಿಕೆಟ್‌ ಕಿತ್ತ ಏಕೈಕ ಆಲ್‌ರೌಂಡರ್‌ ಎಂಬ ಹೆಗ್ಗಳಿಕೆ

ಭಾರತ ಪರ ಗರಿಷ್ಠ ವಿಕೆಟ್‌ ಸಾಧಕರು
ಅನಿಲ್‌ ಕುಂಬ್ಳೆ 619
ಅರ್‌. ಅಶ್ವಿ‌ನ್‌ 500
ಕಪಿಲ್‌ ದೇವ್‌ 434
ಹರ್ಭಜನ್‌ ಸಿಂಗ್‌ 417
ಇಶಾಂತ್‌ ಶರ್ಮ 311

ಶಂಕರನಾರಾಯಣ ಪಿ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.