Health: ಹೃದಯದ ಮೇಲೆ ಕೀಟೊ ಪರಿಣಾಮವೇನು ?


Team Udayavani, Feb 18, 2024, 11:00 AM IST

4-keto

ಹೃದಯದ ಆರೋಗ್ಯದ ಮೇಲೆ ಕಿಟೊಜೆನಿಕ್‌ (ಕಿಟೊ) ಪಥ್ಯಾಹಾರದ ಪರಿಣಾಮಗಳ ಬಗೆಗಿನ ಚರ್ಚೆ ಮತ್ತು ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಕೆಲವು ಸಂಶೋಧನೆಗಳು ಕಿಟೊ ಪಥ್ಯಾಹಾರವು ಹೃದಯ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳುತ್ತವೆಯಾದರೆ ಹೃದ್ರೋಗಗಳ ಕೆಲವು ಅಪಾಯ ಕಾರಣಗಳ ಮೇಲೆ ಕೀಟೊ ಪಥ್ಯಾಹಾರ ಬೀರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಇನ್ನು ಕೆಲವು ಅಧ್ಯಯನಗಳು ಬೊಟ್ಟು ಮಾಡುತ್ತವೆ. ಹೀಗಾಗಿ ಪಥ್ಯಾಹಾರ ಆಯ್ಕೆ ಮಾಡಿಕೊಳ್ಳುವುದಕ್ಕೆ ಮುನ್ನ ವಾದ-ವಿವಾದದ ಎರಡೂ ಆಯಾಮಗಳನ್ನು ಅರ್ಥ ಮಾಡಿಕೊಂಡು ವೈಯಕ್ತಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಒಳಿತು. ಹೃದಯ ಆರೋಗ್ಯದ ಮೇಲೆ ಕಿಟೊ ಪಥ್ಯಾಹಾರ ಹೇಗೆ ಪರಿಣಾಮ ಬೀರಬಹುದು ಎಂಬ ವಿವರ ಇಲ್ಲಿದೆ. ­

ತೂಕ ಇಳಿಕೆ: ಕೀಟೊ ಪಥ್ಯಾಹಾರದಿಂದ ದೇಹತೂಕದಲ್ಲಿ ಗಮನಾರ್ಹ ಇಳಿಕೆಯಾಗುತ್ತದೆ. ಇದರಿಂದ ರಕ್ತದೊತ್ತಡ ಇಳಿಕೆ, ಕೊಲೆಸ್ಟರಾಲ್‌ ಮಟ್ಟ ನಿಯಂತ್ರಣ, ರಕ್ತದಲ್ಲಿ ಸಕ್ಕರೆಯಂಶದ ಮೇಲೆ ನಿಯಂತ್ರಣದಂತಹ ಹೃದಯ ಆರೋಗ್ಯಕ್ಕೆ ಪೂರಕವಾದ ಅನುಕೂಲಗಳು ಆಗಬಹುದು. ­

ಟ್ರೈಗ್ಲಿಸರೈಡ್‌ ಇಳಿಕೆ: ಕಿಟೊ ಪಥ್ಯಾಹಾರದಿಂದ ಟ್ರೈಗ್ಲಿಸರೈಡ್‌ ಮಟ್ಟ ಇಳಿಕೆಯಾಗಬಹುದು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಟ್ರೈಗ್ಲಿಸರೈಡ್‌ ಮಟ್ಟ ತಗ್ಗಿದರೆ ಹೃದಯದ ಆರೋಗ್ಯಕ್ಕೆ ಪೂರಕ. ಟ್ರೈಗ್ಲಿಸರೈಡ್‌ ಮಟ್ಟ ಹೆಚ್ಚಿದ್ದರೆ ಹೃದ್ರೋಗ ಉಂಟಾಗುವ ಅಪಾಯ ಅಧಿಕ. ­

“ಉತ್ತಮಎಚ್‌ಡಿಎಲ್‌ ಕೊಲೆಸ್ಟರಾಲ್‌ ಹೆಚ್ಚಳ: ಕಿಟೊ ಪಥ್ಯಾಹಾರದಿಂದ “ಉತ್ತಮ’ ಕೊಲೆಸ್ಟರಾಲ್‌ ಎಂದು ಕರೆಯಲ್ಪಡುವ ಹೈ ಡೆನ್ಸಿಟಿ ಲಿಪೊಪ್ರೊಟೀನ್‌ (ಎಚ್‌ಡಿಎಲ್‌) ಕೊಲೆಸ್ಟರಾಲ್‌ ಮಟ್ಟ ಹೆಚ್ಚುತ್ತದೆ. ಎಚ್‌ಡಿಎಲ್‌ ಮಟ್ಟ ಹೆಚ್ಚಿರುವುದಕ್ಕೂ ಹೃದ್ರೋಗ ಅಪಾಯ ಕಡಿಮೆಯಾಗುವುದಕ್ಕೂ ಸಂಬಂಧವಿದೆ.

ಸ್ಯಾಚುರೇಟೆಡ್‌ ಕೊಬ್ಬು ಸೇವನೆ ಹೆಚ್ಚಳ: ಕಿಟೊ ಪಥ್ಯಾಹಾರದ ಒಂದು ಕಳವಳಕಾರಿ ಅಂಶ ಎಂದರೆ ಸ್ಯಾಚುರೇಟೆಡ್‌ ಕೊಬ್ಬುಗಳ ಸೇವನೆ ಹೆಚ್ಚುವುದು. ಇದರಿಂದ “ಕೆಟ್ಟ’ ಕೊಲೆಸ್ಟರಾಲ್‌ ಎಂದು ಕರೆಯಲ್ಪಡುವ ಲೋ ಡೆನ್ಸಿಟಿ ಲಿಪೊಪ್ರೊಟೀನ್‌ (ಎಲ್‌ ಡಿಎಲ್‌) ಕೊಲೆಸ್ಟರಾಲ್‌ ಮಟ್ಟ ಹೆಚ್ಚುತ್ತದೆ. ಎಲ್‌ಡಿಎಲ್‌ ಮಟ್ಟ ಹೆಚ್ಚಿರುವುದು ಹೃದ್ರೋಗ ಅಪಾಯಕ್ಕೆ ಕಾರಣವಾಗುವ ಅಂಶಗಳಲ್ಲಿ ಒಂದು.

ಪೌಷ್ಟಿಕಾಂಶ ಅಸಮತೋಲನ: ಕಿಟೊ ಪಥ್ಯಾಹಾರವು ಹಣ್ಣುಹಂಪಲು, ತರಕಾರಿಗಳು ಮತ್ತು ಇಡೀ ಧಾನ್ಯಗಳಂತಹ ಕಾಬೊìಹೈಡ್ರೇಟ್‌ ಸಮೃದ್ಧ ಆಹಾರವಸ್ತುಗಳ ಸೇವನೆಯ ಮೇಲೆ ನಿಯಂತ್ರಣ ವಿಧಿಸುತ್ತದೆ. ಈ ಆಹಾರವಸ್ತುಗಳು ಹೃದಯ ಆರೋಗ್ಯಕ್ಕೆ ಪೂರಕವಾದ ಖನಿಜ, ವಿಟಮಿನ್‌ಗಳು ಮತ್ತು ನಾರಿನಂಶದ ಪ್ರಮುಖ ಮೂಲಗಳಾಗಿವೆ. ಪೌಷ್ಟಿಕಾಂಶಗಳ ಅಸಮತೋಲನದಿಂದ ದೀರ್ಘ‌ಕಾಲೀನವಾಗಿ ಋಣಾತ್ಮಕ ಪರಿಣಾಮಗಳು ಉಂಟಾಗಬಹುದು. ­

ಎಂಡೊಥೇಲಿಯಲ್‌ ಕಾರ್ಯಚಟುವಟಿಕೆಯ ಮೇಲೆ ಸಂಭಾವ್ಯ ಪರಿಣಾಮ: ಕಿಟೊ ಪಥ್ಯಾಹಾರದಿಂದ ರಕ್ತನಾಳಗಳ ಆರೋಗ್ಯಕ್ಕೆ ಸಂಬಂಧಿಸಿದ ಎಂಡೊಥೇಲಿಯಲ್‌ ಕಾರ್ಯಚಟುವಟಿಕೆಗಳಿಗೆ ಅಡಚಣೆ ಉಂಟುಮಾಡಬಹುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಎಂಡೊಥೇಲಿಯಲ್‌ ಕಾರ್ಯಚಟುವಟಿಕೆಗಳಿಗೆ ಕುಂದು ಉಂಟಾಗುವುದು ಹೃದ್ರೋಗ ಬೆಳವಣಿಗೆ ಹೊಂದಲು ಪೂರಕ ಸನ್ನಿವೇಶವನ್ನು ನಿರ್ಮಿಸುತ್ತದೆ.

­ದೀರ್ಘ‌ಕಾಲೀನ ಅಧ್ಯಯನ ಕಡಿಮೆ: ಕಿಟೊ ಪಥ್ಯಾಹಾರವು ಹೃದಯ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತಾಗಿ ಇದುವರೆಗೆ ನಡೆದಿರುವ ಅಧ್ಯಯನಗಳು ತುಲನಾತ್ಮಕವಾಗಿ ಕಿರು ಅವಧಿಯವು. ದೀರ್ಘ‌ಕಾಲದಿಂದ ಕಿಟೊ ಪಥ್ಯಾಹಾರವನ್ನು ಅನುಸರಿಸಿದರೆ ಹೃದಯದ ಒಟ್ಟಾರೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗಬಲ್ಲವು ಎಂಬುದನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ದೀರ್ಘ‌ಕಾಲೀನ ಅಧ್ಯಯನದ ಅಗತ್ಯವಿದೆ.

ಹೃದಯದ ಆರೋಗ್ಯದ ಮೇಲೆ ಕಿಟೊಜೆನಿಕ್‌ ಪಥ್ಯಾಹಾರದ ಪರಿಣಾಮಗಳು ಸಂಕೀರ್ಣವಾಗಿವೆ ಮತ್ತು ಅವುಗಳನ್ನು ಇನ್ನೂ ಸಮಗ್ರವಾಗಿ ಅರಿತುಕೊಳ್ಳಲು ಆಗಿಲ್ಲ. ತೂಕ ಇಳಿಕೆ, ಹೃದ್ರೋಗಕ್ಕೆ ಕಾರಣವಾಗಬಲ್ಲ ಕೆಲವು ಅಂಶಗಳು ದೂರವಾಗುವಂತಹ ಸಂಭಾವ್ಯ ಪ್ರಯೋಜನಗಳು ಇವೆಯಾದರೂ ಹೈ ಸ್ಯಾಚುರೇಟೆಡ್‌ ಕೊಬ್ಬಿನಂಶ ಹಾಗೂ ಪೌಷ್ಟಿಕಾಂಶ ಸಮತೋಲನ ಮತ್ತು ರಕ್ತನಾಳಗಳ ಕಾರ್ಯಚಟುವಟಿಕೆಗಳ ಮೇಲೆ ಸಂಭಾವ್ಯ ಪ್ರತಿಕೂಲ ಪರಿಣಾಮಗಳು ಈ ಪಥ್ಯಾಹಾರದ ಋಣಾತ್ಮಕ ಅಂಶಗಳಾಗಿವೆ.

-ಡಾ| ಟಾಮ್‌ ದೇವಸ್ಯ,

ಪ್ರೊಫೆಸರ್‌ ಮತ್ತು ಯುನಿಟ್‌ ಹೆಡ್‌

ಕಾರ್ಡಿಯಾಲಜಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ , ಮಂಗಳೂರು)

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.