Pimples: ಮುಖದ ತ್ವಚೆಯಲ್ಲಿ ಗುಳಿಗಳು; ವಿವಾಹಪೂರ್ವ ಚರ್ಮ ಚಿಕಿತ್ಸೆ


Team Udayavani, Feb 18, 2024, 11:56 AM IST

5-skin-treatment

ಈಗ ವಿವಾಹಗಳ ಋತು. ವಿವಾಹವಾಗುವ ಯುವತಿಯರು ಮತ್ತು ಯುವಕರು ಚರ್ಮದ ಆರೈಕೆ ಮತ್ತು ಚಿಕಿತ್ಸೆಗಳ ಮೂಲಕ ತಮ್ಮ ಜೀವನದ ಈ ಬಹುದೊಡ್ಡ ದಿನಕ್ಕಾಗಿ ಮುಖವನ್ನು ಹೇಗೆ ಸುಂದರಗೊಳಿಸಿಕೊಳ್ಳಬಹುದು ಎಂದು ಚರ್ಚಿಸುವುದಕ್ಕೆ ಇದು ಸಕಾಲ.

ಚರ್ಮದ ಬಣ್ಣ ಬದಲಾವಣೆ, ಶುಷ್ಕ ಮತ್ತು ಪೇಲವ ಚರ್ಮ, ಜಿಡ್ಡಾದ ಚರ್ಮ, ಚರ್ಮದ ಮೇಲೆ ಕೆಂಪು ದದ್ದುಗಳು, ಗುಳಿಗಳು – ಹೀಗೆ ನವವಧುಗಳಿಗೆ ತಮ್ಮ ತ್ವಚೆಯ ಬಗ್ಗೆ ಹಲವಾರು ಪ್ರಶ್ನೆಗಳು, ಚಿಂತೆಗಳು ಇರಬಹುದು.

ವಿವಾಹಕ್ಕೆ ಮುನ್ನ ನಡೆಸುವ ಯಾವುದೇ ಚರ್ಮದ ಆರೈಕೆಯ ಚಿಕಿತ್ಸೆಗಳು ವಿವಾಹಕ್ಕಿಂತ ಮೂರರಿಂದ ಆರು ತಿಂಗಳು ಮುಂಚಿತವಾಗಿ ನಡೆಸಬೇಕು ಎನ್ನುವುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಯಾವುದೇ ಅಡ್ಡ ಪರಿಣಾಮಗಳನ್ನು ತಡೆಯುವುದಕ್ಕಾಗಿ ಮದುವೆಯ ದಿನಕ್ಕಿಂತ ಕೆಲವೇ ದಿನಗಳಿಗೆ ಮುನ್ನ ಚರ್ಮದ ಯಾವುದೇ ಆರೈಕೆ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬಾರದು.

ಮುಖದ ಚರ್ಮದಲ್ಲಿ ಗುಳಿಗಳು ವಿಚಾರಕ್ಕೆ ಬಂದರೆ, ಇವು ಚರ್ಮದ ಮೇಲ್ಮೆ„ಯಲ್ಲಿ ಕಂಡುಬರುವ ಎದ್ದುಕಾಣುವ ರಚನೆಗಳು. ಪೈಲೊಸೆಬೇಶಿಯಸ್‌ ಫಾಲಿಕಲ್‌ಗ‌ಳು ದೊಡ್ಡದಾಗಿ ತೆರೆದುಕೊಂಡಿರುವುದರಿಂದ ಈ ಗುಳಿಗಳು ಉಂಟಾಗುತ್ತಿದ್ದು, ಮುಖದ ಮುಖದ ತ್ವಚೆಯಲ್ಲಿ ಗುಳಿಗಳು ಸೌಂದರ್ಯಕ್ಕೆ ಕುಂದು ತರುತ್ತವೆ.

ಮುಖದ ಚರ್ಮದಲ್ಲಿ ಗುಳಿಗಳು ಉಂಟಾಗುವುದಕ್ಕೆ ಕಾರಣಗಳು ಆಂತರಿಕವಾಗಿರಬಹುದು ಅಥವಾ ಬಾಹ್ಯ ಕಾರಣಗಳಿರಬಹುದು. ಆಂತರಿಕ ಕಾರಣಗಳಲ್ಲಿ ಲಿಂಗ, ವಂಶವಾಹಿ ಹಿನ್ನೆಲೆ, ವಯಸ್ಸು, ಲೈಂಗಿಕ ಹಾರ್ಮೋನ್‌ಗಳು, ಪದೇಪದೆ ದದ್ದುಗಳು ಉಂಟಾಗಿರುವುದು, ಅತಿಯಾದ ಸೆಬಮ್‌ ಸ್ರಾವ ಸೇರಿವೆ. ಬಾಹ್ಯ ಕಾರಣಗಳಲ್ಲಿ ಸೂರ್ಯನ ಬಿಸಿಲಿಗೆ ದೀರ್ಘ‌ ಕಾಲ ಒಡ್ಡಿಕೊಂಡಿರುವುದು, ಸೌಂದರ್ಯ ವರ್ಧಕಗಳ ಅಸಮರ್ಪಕ ಬಳಕೆ ಮತ್ತು ಕಳಪೆ ಮುಖ ತೊಳೆಯುವ ಅಭ್ಯಾಸ ಸೇರಿವೆ.

ಮುಖದಲ್ಲಿ ಗುಳಿಗಳು ಉಂಟಾಗುವುದಕ್ಕೆ ಮುಖ್ಯ ಮೂರು ರೋಗಶಾಸ್ತ್ರೀಯ ಕಾರಣಗಳು ಎಂದರೆ ಅತಿಯಾದ ಸೆಬಮ್‌ (ಚರ್ಮದ ಅಡಿಭಾಗದಲ್ಲಿ ಇರುವ ಸೆಬೇಶಿಯಸ್‌ ಗ್ರಂಥಿಗಳಿಂತ ಉತ್ಪಾದನಯಾಗುವ ಅಂಟಾದ ಜಿಡ್ಡಿನಂತಹ ದ್ರವ) ಸ್ರಾವ, ಚರ್ಮರಂಧ್ರಗಳ ಸುತ್ತ ನಮನೀಯತೆ ಕಡಿಮೆಯಾಗಿರುವುದು ಹಾಗೂ ದಪ್ಪನೆಯ ಕೂದಲಿನ ಸಹಿತ ರೋಮರಂಧ್ರಗಳ ಸಂಖ್ಯೆ ಹೆಚ್ಚಿರುವುದು.

ಮುಖದಲ್ಲಿ ಉಂಟಾಗುವ ಗುಳಿಗಳ ನಿರ್ವಹಣೆಯಲ್ಲಿ ಅನೇಕ ಬಗೆಯ ಸಾಮಗ್ರಿಗಳು ಮತ್ತು ಕ್ರಿಯೆಗಳನ್ನು ಪ್ರಯೋಗ ಮಾಡಿ ನೋಡಲಾಗಿದ್ದು, ಫ‌ಲಿತಾಂಶಗಳು ಬೇರೆ ಬೇರೆ ಆಗಿವೆ. ಪ್ರತೀ ರೋಗಿಯಲ್ಲೂ ಇದಕ್ಕೆ ಕಾರಣಗಳು ವಿಭಿನ್ನವಾಗಿರುವ ಹಿನ್ನೆಲೆಯಲ್ಲಿ ನಿರ್ವಹಣೆ ಮತ್ತು ಚಿಕಿತ್ಸೆಯೂ ರೋಗಿನಿರ್ದಿಷ್ಟವಾಗಿರಬೇಕಾಗುತ್ತದೆ.

ಮುಖದ ಗುಳಿಗಳಿಗೆ ಚಿಕಿತ್ಸೆಯ ವಿಚಾರಕ್ಕೆ ಬಂದರೆ, ರೆಟನಾಯ್ಡಗಳು ಮೊದಲ ಆದ್ಯತೆಯಲ್ಲಿವೆ. ಮುಖದ ಗುಳಿಯ ತೀವ್ರತೆಯನ್ನು ಆಧರಿಸಿ ಇದನ್ನು ಮುಖದ ಮೇಲೆ ಹಚ್ಚುವಂತೆ ಅಥವಾ ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧವಾಗಿ ಪ್ರಯೋಗಿಸಬಹುದು. ಇದು ಚರ್ಮದ ಮೇಲೆ ಎಣ್ಣೆಜಿಡ್ಡು ಸ್ರಾವಯಾಗುವ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಗುಳಿಗಳು ಕಡಿಮೆಯಾಗಲು ಸಹಾಯ ಮಾಡುತ್ತದೆ. ಇದು ಎಕ್ಸ್‌ ವರ್ಗದ ಔಷಧ ಆಗಿದ್ದು, ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಇದನ್ನು ಉಪಯೋಗಿಸಬಾರದು.

ಮುಖದ ಮೇಲೆ ಹಚ್ಚುವ ಔಷಧಗಳಲ್ಲಿ ಶೇ. 2 ನಿಯಾಸಿನಮೈಡ್‌ ಮತ್ತು ಎಲ್‌ ಕಾರ್ನಿಟೈನ್‌ ಸೇರಿವೆ. ಸಾಲಿಸೈಕ್ಲಿಕ್‌ ಆಮ್ಲದಂತಹ ಬೇಟಾ ಹೈಡ್ರಾಕ್ಸಿ ಆಮ್ಲ ಹಾಗೂ ಗ್ಲೈಕಾಲಿಕ್‌ ಆಮ್ಲ, ಲ್ಯಾಕ್ಟಿಕ್‌ ಆಮ್ಲ ಮತ್ತು ಮಾಂಡೆಲಿಕ್‌ ಆಮ್ಲದಂತಹ ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಉಪಯೋಗಿಸಿ ಕೆಮಿಕಲ್‌ ಎಕ್ಸ್‌ಫಾಲಿಯೇಶನ್‌ ಕೂಡ ಮುಖದ ತ್ವಚೆಯ ಗುಳಿಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಮೇಲೆ ಹೇಳಲಾಗಿರುವ ಮುಖದ ಚರ್ಮದ ಮೇಲ್ಮೈಗೆ ನೀಡಲಾಗುವ ಚಿಕಿತ್ಸೆಗಳ ಜತೆಗೆ, ಸರ್ಫಕ್ಟಂಟ್‌ಗಳ ಸರಳ ದ್ರಾವಣದ ಎಣ್ಣೆಜಿಡ್ಡು ನಿವಾರಕಗಳು, ನೋ ಆಯಿಲ್‌ಗ‌ಳು, ವ್ಯಾಕ್ಸ್‌ಗಳು ಅಥವಾ ಫ್ಯಾಟಿ ಏಜೆಂಟ್‌ಗಳನ್ನು ಕೂಡ ಉಪಯೋಗಿಸಬಹುದಾಗಿದೆ. ನಾನ್‌-ಒಕ್ಲೂಸಿವ್‌, ನಾನ್‌ ಕಾಮೆಡಾನಿಕ್‌ ಮತ್ತು ಎಣ್ಣೆರಹಿತ ಸಾಮಗ್ರಿಗಳಿರುವ ಮಾಯಿಶ್ಚರೈಸರ್‌ ಮತ್ತು ಸನ್‌ಸ್ಕ್ರೀನ್‌ಗಳನ್ನು ಉಪಯೋಗಿಸಬೇಕು.

ಮೈಕ್ರೊ ನೀಡ್ಲಿಂಗ್‌ ರೇಡಿಯೋ ಫ್ರೀಕ್ವೆನ್ಸಿ, ಫಾಕ್ಶನಲ್‌ ಕಾರ್ಬನ್‌ ಡೈಆಕ್ಸೈಡ್‌ ಲೇಸರ್, ಮೈಕ್ರೊ ನೀಡ್ಲಿಂಗ್‌ ವಿದ್‌ ಡರ್ಮಾಪೆನ್‌, ಕಾರ್ಬನ್‌ ಪೀಲ್‌ ಮತ್ತು ಕ್ಯು ಸ್ವಿಚ್ಡ್ ವೈಎಜಿ ಲೇಸರ್‌ ಉಪಯೋಗಿಸಿ ಗೋಲ್ಡ್‌ ಟೋನಿಂಗ್‌ನಂತಹ ಲೈಟ್ಸ್‌ ಮತ್ತು ಲೇಸರ್‌ ಚಿಕಿತ್ಸೆಗಳು ಕೂಡ ಬೇರೆ ಬೇರೆ ರೀತಿಯ ಫ‌ಲಿತಾಂಶಗಳೊಂದಿಗೆ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ‌ಪ್ಲೇಟ್‌ಲೆಟ್‌ ರಿಚ್‌ ಪ್ಲಾಸ್ಮಾ ಥೆರಪಿ, ಪೆಪ್ಟೆ„ಡ್‌ಗಳು ಮತ್ತು ಸ್ಕಿನ್‌ ಬೂಸ್ಟರ್‌ಗಳಂತಹ ಒಳರೋಗಿ ಚಿಕಿತ್ಸೆಗಳು ಕೂಡ ಪ್ರಯೋಜನಕಾರಿಯಾಗಿವೆ.

ಇಂಟ್ರಾಡರ್ಮಲ್‌ ಬೊಟುಲಿನಮ್‌ ಟಾಕ್ಸಿನ್‌, ಇಂಟೆನ್ಸ್‌ ಪಲ್ಸ್‌ ಲೈಟ್‌, ಫೊಟೊಡೈನಾಮಿಕ್‌ ಥೆರಪಿಗಳು, 1440 ಎನ್‌ಎಂ ಡಯೋಡ್‌ ಲೇಸರ್‌ಗಳು ಮತ್ತು ನಾನ್‌ಅಬ್ಲೇಟಿವ್‌ ರೇಡಿಯೊ ಫ್ರೀಕ್ವೆನ್ಸಿ-ಇವು ಚಿಕಿತ್ಸೆಯ ಇತರ ವಿಧಾನಗಳಲ್ಲಿ ಸೇರಿವೆ. ಮುಖದಲ್ಲಿ ದಪ್ಪನೆಯ ಕೂದಲುಗಳಿರುವುದರಿಂದಾಗಿ ಗುಳಿಗಳು ಉಂಟಾಗಿದ್ದರೆ ಲೇಸರ್‌ ಹೇರ್‌ ರಿಡಕ್ಷನ್‌ ವಿಧಾನವನ್ನು ಉಪಯೋಗಿಸುವುದು ಉತ್ತಮ.

ಹೆಚ್ಚು ಗ್ಲೈಸೇಮಿಕ್‌ ಇಂಡೆಕ್ಸ್‌ ಇರುವ ಆಹಾರ ಸೇವನೆಯಿಂದ ಸೆಬಮ್‌ ಸ್ರಾವ ಹೆಚ್ಚುವುದರಿಂದ ಆಹಾರ ಶೈಲಿಯಲ್ಲಿ ಬದಲಾವಣೆಯನ್ನು ಕೂಡ ಪ್ರಯೋಜನಕಾರಿಯಾದ ನಿರ್ವಹಣೆ ವಿಧಾನವಾಗಿ ಅನುಸರಿಸಬಹುದು.

ಡಾ| ಕಿರಣ್‌,

ಸೀನಿಯರ್‌ ರೆಸಿಡೆಂಟ್‌,

ಡರ್ಮಟಾಲಜಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಡರ್ಮಟಾಲಜಿ, ವೆನರಾಲಜಿ ಮತ್ತು ಲೆಪ್ರಸಿ ವಿಭಾಗ, ಮಂಗಳೂರು)

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-tooth

Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ

10-wayanad

Landslide Survivors: ಭೂಕುಸಿತದಿಂದ ಪಾರಾದವರಿಗೆ ಆಘಾತದಿಂದ ಚೇತರಿಸಿಕೊಳ್ಳಲು ಮಾರ್ಗದರ್ಶಿ

9-cancer

Cancer Symptoms: ಕ್ಯಾನ್ಸರ್‌ನ ಸಾಮಾನ್ಯವಲ್ಲದ ಲಕ್ಷಣಗಳು

8-weight-gain

Weight gain: ಕ್ರೀಡಾಳುಗಳಲ್ಲಿ ತೂಕ ಗಳಿಕೆ- ದೈಹಿಕ, ಮಾನಸಿಕ ಪರಿಣಾಮಗಳ ನಿರ್ವಹಣೆ

4-breastfeeding

Infant’s Immune System: ಶಿಶುವಿನ ರೋಗ ನಿರೋಧಕ ವ್ಯವಸ್ಥೆಗ ಸ್ತನ್ಯಪಾನದಿಂದ ಪ್ರಯೋಜನಗಳು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.