Bangalore: 50 ಸಾವಿರ ರೂ.ಗೂ ಹೆಚ್ಚು ದಂಡ ಉಳಿಸಿಕೊಂಡ 84 ಬೈಕ್, ಕಾರು ಜಪ್ತಿ
Team Udayavani, Feb 18, 2024, 11:54 AM IST
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ 50 ಸಾವಿರ ರೂ.ಗಿಂತ ಅಧಿಕ ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳ ಪತ್ತೆ ಹಚ್ಚಿರುವ ದಕ್ಷಿಣ ವಿಭಾಗ ಸಂಚಾರ ಪೊಲೀಸರು, 84 ದ್ವಿಚಕ್ರ ವಾಹನ, ಒಂದು ಕಾರು ಜಪ್ತಿ ಮಾಡಿದ್ದಾರೆ.
ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 2,681 ವಾಹನಗಳ ಮಾಲೀಕರು ತಲಾ 50 ಸಾವಿರ ರೂ.ಗಿಂತ ಹೆಚ್ಚಿನ ದಂಡ ಬಾಕಿ ಉಳಿಸಿಕೊಂಡಿ ದ್ದವರನ್ನು ವಿಶೇಷ ಕಾರ್ಯಾಚರಣೆ ನಂತರ ಸಂಚಾರ ಪೊಲೀಸರು ಪತ್ತೆ ಹಚ್ಚಿದ್ದರು. ವಶಕ್ಕೆ ಪಡೆದ ವಾಹನಗಳ ಮೇಲೆ ಒಟ್ಟು 10,210 ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾ ಗಿದ್ದು, 1.07 ಕೋಟಿ ರೂ. ದಂಡದ ಮೊತ್ತ ಬಾಕಿ ಇರುವುದು ಪತ್ತೆಯಾಗಿದೆ.
ಈ ಬಗ್ಗೆ ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾತ ನಾಡಿ, 50 ಸಾವಿರ ಮೇಲೆ ದಂಡ ಇರುವ ವಾಹನಗಳ ಪತ್ತೆ ಹಚ್ಚಿ 84 ಬೈಕ್ 1 ಕಾರು ಜಪ್ತಿ ಮಾಡಲಾಗಿದೆ. ಎಫ್ಟಿವಿಆರ್ ಮೂಲಕ ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಪ್ರಕರಣ ದಾಖಲಿಸ ಲಾಗುತ್ತಿದೆ. ಕಾಮೆರಾಗಳ ಮೂಲಕ ಕೇಸ್ ಹಾಕಲಾಗುತ್ತದೆ. ದಂಡ ಕಟ್ಟಿಲ್ಲ ಅಂದರೆ ಕೋರ್ಟ್ಗೆ ಹಾಜರುಪಡಿಸಲಾಗು ವುದು. ವಶಕ್ಕೆ ಪಡೆದಿರುವ ಎರಡು ಬೈಕ್ಗಳ ಮೇಲೆ ತಲಾ ಒಂದೂವರೆ ಲಕ್ಷ ರೂ. ದಂಡವಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.