Karwar; ಅಂಬಾರಕೊಡ್ಲದ ಜೀವನಾಡಿ ಕವಿ ವಿಷ್ಣು ನಾಯ್ಕ ಇನ್ನಿಲ್ಲ
Team Udayavani, Feb 18, 2024, 12:30 PM IST
ಕಾರವಾರ: ಅಂಕೋಲಾದ ಅಂಬಾರಕೊಡ್ಲದ ಪರಿಮಳದ ಕವಿ ಲೇಖಕ ವಿಷ್ಣು ನಾಯ್ಕ ಶನಿವಾರ ರಾತ್ರಿ ಅಲ್ಪಕಾಲದ ಅಸ್ವಸ್ಥತೆಯಿಂದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಲೇಖಕ, ಪ್ರಕಾಶಕ, ಕವಿಯಾಗಿದ್ದ ಅವರು ನಾಡಿನ 170 ಕ್ಕೂ ಹೆಚ್ಚು ಲೇಖಕರ ಕತೆ, ಕವಿತೆ, ವಿಮರ್ಶೆ, ನಾಟಕ, ಕಾದಂಬರಿಗಳನ್ನು ಪ್ರಕಟಿಸಿದ್ದರು.
ಶಿಕ್ಷಕರಾಗಿ ಜೀವನ ಪ್ರಾರಂಭಿಸಿದ್ದ ಅವರು, ದಾಂಡೇಲಿ ಜನತಾ ವಿದ್ಯಾಲಯದಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಆರಂಭದಲ್ಲಿ ಕೆಲಸ ಮಾಡಿದ್ದರು. ನಂತರ ಅಂಕೋಲಾದಲ್ಲಿ ಪಿಯು ಕಾಲೇಜು ಉಪನ್ಯಾಸಕರಾಗಿದ್ದ ಅವರು ನಿವೃತ್ತಿಯ ನಂತರದಲ್ಲಿ ಕೆನರಾ ವೆಲ್ಫೆರ್ ಟ್ರಸ್ಟ್ ನ ಟ್ರಸ್ಟಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.
ಅಂಕೋಲೆಯ ಅಂಬಾರಕೊಡ್ಲದ ಬುದವಂತಿ ಮತ್ತು ನಾಗಪ್ಪ ನಾಯ್ಕ ದಂಪತಿಗಳ ಮಗನಾಗಿ ಹುಟ್ಟಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ನೋವು ಪ್ರೀತಿಯ ಪ್ರಶ್ನೆ, ನನ್ನ ಅಂಬಾರ ಕೊಡ್ಲ ಮುಂತಾದ ಕವನ ಸಂಕಲನಗಳನ್ನು, ಬೀದಿ ನಾಟಕಗಳನ್ನು, ಹಾಲಕ್ಕಿಗಳ ಕುರಿತು ಕಾದಂಬರಿಯನ್ನು ಬರೆದಿದ್ದರು.
ಗೌರೀಶ ಕಾಯ್ಕಿಣಿಯವರ ವೈಚಾರಿಕ ಲೇಖನಗಳ ಸಹಿತ ಸಮಗ್ರ ಸಂಪುಟಗಳನ್ನು ಹತ್ತು ಸಂಚಿಕೆಗಳಲ್ಲಿ ಪ್ರಕಟಿಸಿದ್ದರು. ಕಾವ್ಯ, ನಾಟಕ, ಕಥೆ, ಕಾದಂಬರಿ, ಜಾನಪದ, ವಿಮರ್ಶೆ, ಶಿಕ್ಷಣ, ಪತ್ರಿಕೋದ್ಯಮ, ರಂಗಭೂಮಿ, ಚಳುವಳಿ, ಪ್ರಕಾಶನ ಹೀಗೆ ಬಹುಮುಖ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಮುಂಗಾರು ಪತ್ರಿಕೆಗೆ ವರದಿಗಾರರಾಗಿದ್ದ ಅವರು ಸಕಾಲಿಕ ಎಂಬ ವಾರ ಪತ್ರಿಕೆಯನ್ನು ಎರಡು ವರ್ಷ ನಡೆಸಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಸಂದಿದ್ದವು. ಅಂಕೋಲಾ ಅವರ ಕಾರ್ಯಕ್ಷೇತ್ರವಾಗಿತ್ತು. ದಿನಕರ ದೇಸಾಯಿಯವರ ಒಡನಾಡಿಗಳಲ್ಲಿ ವಿಷ್ಣು ನಾಯ್ಕ ಪ್ರಮುಖರು. ಶಿಕ್ಷಣ ಸಂಘಟನೆಯಲ್ಲಿ ಕೆಲಸ ಮಾಡಿದರು. ಬೀದಿ ನಾಟಕಗಳ ಮೂಲಕ ಜನ ಜಾಗ್ರತೆ ಮೂಡಿಸಿದ್ದರು.
ವಿಷ್ಣು ನಾಯ್ಕ ಅವರ ಪತ್ನಿ ಕವಿತಾ ನಾಯ್ಕ ಐದು ವರ್ಷಗಳ ಹಿಂದೆ ನಿಧನರಾಗಿದ್ದರು. ವಿಷ್ಣು ನಾಯ್ಕ ಈರ್ವರು ಪುತ್ರಿಯರು, ಅಳಿಯಂದಿರು, ಇಬ್ಬರು ಸಹೋದರರನ್ನು ಅಗಲಿದ್ದಾರೆ . ಸಾಹಿತ್ಯ ಲೋಕದ ಹಲವರು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಸಂತಾಪ: ಕವಿ ವಿಷ್ಣು ನಾಯ್ಕ ನಿಧನಕ್ಕೆ ಕತೆಗಾರ ರಾಮಕೃಷ್ಣ ಗುಂದಿ, ಲೇಖಕರಾದ ಮೋಹನ ಹಬ್ಬು , ದಾಂಡೇಲಿಯ ಜಯಚಂದ್ರನ್ , ಕೃಷ್ಣ ನಾಯಕ ಹಿಚ್ಕಡ, ಕಾರವಾರದ ನಾಗರಾಜ್ ಹರಪನಹಳ್ಳಿ, ಅಂಕೋಲಾದ ರೇಣುಕಾ ರಮಾನಂದ, ಶಿರಸಿಯ ಶೋಭಾ ನಾಯ್ಕ, ಹಿರೇಕೈ, ರಮಾನಂದ ನಾಯಕ, ಎನ್.ಆರ್ .ರೂಪಶ್ರೀ, ಶ್ರೀಧರ ನಾಯ್ಕ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.