Kalaburagi; ಅಕೌಂಟ್ ಸೀಜ್ ಮಾಡುವುದು ಕೈಲಾಗದವರು ಮೈ ಪರಚಿಕೊಂಡಂತೆ: ವಿಜಯಾನಂದ ಕಾಶಪ್ಪನವರ್
Team Udayavani, Feb 18, 2024, 2:44 PM IST
ಕಲಬುರಗಿ: ಕೈಲಾಗದವರು ಮೈ ಎಲ್ಲಾ ಪರಚಕೊಂಡರು ಎನ್ನುವ ಗಾದೆ ಮಾತು ಎನ್ನುವಂತೆ ಕಾಂಗ್ರೆಸ್ ಪಕ್ಷದ ಅಕೌಂಟ್ ಗಳನ್ನು ಸೀಜ್ ಮಾಡಲಾಗುತ್ತಿದೆ ಎಂದು ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಯಾವಾಗ ಯಾವಾಗ ಬರುತ್ತೆ ಬಜೆಪಿಯವರು ಇಂತಹ ಒಂದು ರಾಗ ತೆಗೆಯುತ್ತಾರೆ. ಸಿಬಿಐ, ಇಡಿ ದಾಳಿ ಮಾಡಿಸುವುದುದು ಬಿಜೆಪಿಯ ಹುಟ್ಟು ಗುಣವಾಗಿದೆಯಲ್ಲದೆ, ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಇದು ಒಂದು ಕಸುಬು ಆಗಿದೆ. ಪ್ರಮುಖವಾಗಿ ಚುನಾವಣೆ ಬರುತ್ತಿದ್ದ ಹಾಗೆ ಇವು ಪ್ರಾರಂಭವಾಗುತ್ತವೆ. ಇದು ಬ್ಲಾಕ್ ಮೇಲ್ ತಂತ್ರ ಎಂದು ವಾಗ್ದಾಳಿ ನಡೆಸಿದರು.
ಪ್ರಾಮಾಣಿಕವಾಗಿ, ಸ್ವಂತ ಶಕ್ತಿ, ಅಭಿವೃದ್ಧಿ ಮೇಲೆ ದೇಶದಲ್ಲಿ ಗೆಲ್ಲುತ್ತೆವೆ ಎಂದು ಅವರಿಗೆ ಗ್ಯಾರಂಟಿ ಇಲ್ಲ ಎಂದ ಕಾಶಪ್ಪನವರ್, ರಾಮ ಮಂದಿರ ಉದ್ಘಾಟನೆ ಮಾಡಿದಾಕ್ಷಣ ಗೆಲ್ಲೋಕಾಗುತ್ತಾ? ರಾಮ ಮಂದಿರವನ್ನು ನಾವು ಯಾರೂ ಬೇಡ ಅಂದಿಲ್ಲ, ನಾವೂ ಜೈ ಶ್ರೀರಾಮ ಎನ್ನುತ್ತೇವೆ. ನಾವೂ ರಾಮನ ಭಕ್ತರೇ ಎಂದು ಹೇಳಿದರು.
ರಾಜಕೀಯಗೋಸ್ಕರ ರಾಮ ಮಂದಿರ ಬಳಕೆ, ಹೆದರಿಕೆ ಬೆದರಿಕೆ ಹಾಕುವುದು, ಅಕೌಂಟ್ ಸೀಜ್ ಮಾಡುವುದು ಇವೆಲ್ಲಾ ಬಿಜೆಪಿಯವರ ಇವರ ಹುಟ್ಟು ಗುಣ. ಬಿಜೆಪಿಯವರಿಗೆ ಸ್ವಂತ ತಾಕತ್ತಿಲ್ಲ ಎಂದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದು ಹೇಡಿ ರಾಜಕೀಯ. ಕಾಂಗ್ರೆಸ್ ನವರು ಹೇಡಿ ರಾಜಕೀಯ ಮಾಡುವುದಿಲ್ಲ.
ಎಷ್ಟೇ ಗೊಡ್ಡು ಬೆದರಿಕೆ ಹಾಕಿದರೂ ಕಾಂಗ್ರೆಸ್ ಹೆದರಲ್ಲ. ಕಾಂಗ್ರೆಸ್ ಗೆ ಅದರದೇ ಆದ ಸಿದ್ದಾಂತವಿದೆ. ಅದರ ಮೇಲೆ ನಡೆಯುತ್ತದೆ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.