Kundapura ಬೆಂಕಿ ಅವಘಡ; ಲಕ್ಷಾಂತರ ರೂ. ನಷ್ಟ
Team Udayavani, Feb 18, 2024, 11:28 PM IST
ಕುಂದಾಪುರ: ಹೆಮ್ಮಾಡಿಯ ಅಮರ್ ಕಾರು ಕ್ಲಿನಿಕ್ (ಗ್ಯಾರೇಜ್)ನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ, ಕಾರುಗಳ ಸಹಿತ ಅಪಾರ ಪ್ರಮಾಣದ ಸೊತ್ತುಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ಸಟ್ವಾಡಿ ಸಮೀಪದ ನಿವಾಸಿ ಅಮರನಾಥ್ ಶೆಟ್ಟಿ ಮಾಲಕತ್ವದ ಗ್ಯಾರೇಜ್‌ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿ ಕಾರುಗಳ ರಿಪೇರಿ, ಡೆಂಟಿಂಗ್, ಪೇಂಟಿಂಗ್ ಕೆಲಸ ಮಾಡಲಾಗುತ್ತಿದೆ. ಮೂರು ಕಾರುಗಳು ರಿಪೇರಿಗೆ ಬಂದಿತ್ತು. ಇದರಲ್ಲಿ ಎರಡು ಕಾರುಗಳು ದುರಸ್ತಿಯಾಗಿದ್ದು ಸೋಮವಾರ ಮಾಲಕರಿಗೆ ಕೊಡಲು ಸಿದ್ಧಪಡಿಸಲಾಗಿತ್ತು.
ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಗ್ಯಾರೇಜ್ ಮೇಲ್ಭಾಗದ ಮೊದಲ ಮಹಡಿಯಲ್ಲಿ ಕಟ್ಟಡದ ಮಾಲಕರ ಮನೆ ಇತ್ತು. ಸುಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಮಾಲಕರು ಕೆಳಗೆ ಬಂದು ನೋಡುವಾಗ ಬೆಂಕಿಯ ಕೆನ್ನಾಲಿಗೆ ಇಡೀ ಗ್ಯಾರೇಜ್ ತುಂಬಾ ವ್ಯಾಪಿಸಿತ್ತು. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಯಿತು. ತತ್‌ಕ್ಷಣ ಸ್ಥಳಕ್ಕೆ ಧಾವಿಸಿದ ಕುಂದಾಪುರ ಹಾಗೂ ಬೈಂದೂರು ಅಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು.
ಸ್ಥಳೀಯರಾದ ಮೊಹಮ್ಮದ್ ಆಲಿ, ಶಫುದ್ದೀನ್, ರಮಾನಾಥ್, ಆಟೋ ಚಾಲಕ ಪ್ರದೀಪ್ ದೇವಾಡಿಗ ಕಾರ್ಯಾಚರಣೆಗೆ ಸಹಕರಿಸಿದರು. ಕುಂದಾಪುರ ನಗರಠಾಣೆಯ ಎಎಸ್‌ಐ ಸುಧಾಕರ ಹಾಗೂ ಸಿಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.