RAM ಮಂದಿರ ನಿರ್ಮಾಣ 1,000 ವರ್ಷಗಳವರೆಗೆ ರಾಮ ರಾಜ್ಯ ಸ್ಥಾಪನೆಗೆ ನಾಂದಿ
ನಮ್ಮ ಗೆಲುವಿನ ಬಗ್ಗೆ ವಿದೇಶಿಗರಿಗೂ ಗೊತ್ತು: ಮೋದಿ... ಸೇನೆಯ ನೈತಿಕ ಸ್ಥೈರ್ಯ ಕುಗ್ಗಿಸಿದ ಕೈ
Team Udayavani, Feb 19, 2024, 6:10 AM IST
ಹೊಸದಿಲ್ಲಿ: “ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂಬ ಬಗ್ಗೆ ವಿದೇಶಗಳಲ್ಲಿಯೂ ಭಾವನೆ ವ್ಯಕ್ತವಾಗಿದೆ. ಹೀಗಾಗಿಯೇ, ಜುಲೈ, ಆಗಸ್ಟ್, ಸೆಪ್ಟಂಬರ್‌ನಲ್ಲಿ ನಮ್ಮಲ್ಲಿಗೆ ಭೇಟಿ ನೀಡಿ ಎಂಬ ಆಹ್ವಾನಗಳು ಇತರ ದೇಶಗಳ ಸರಕಾರಗಳಿಂದ ಬರುತ್ತಿದೆ.’ - ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹೊಸದಿಲ್ಲಿಯ ಭಾರತ ಮಂಟಪದಲ್ಲಿ ರವಿವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು “ದೇಶದ ಜನರು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಮತ್ತೂಮ್ಮೆ ಆಶೀರ್ವಾದ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಲೋಕಸಭೆ ಚುನಾವಣೆ ಇನ್ನು ನಡೆಯಬೇಕಿದೆ. ಆದರೆ ನನಗೆ ಈಗಾಗಲೇ ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಕಾರ್ಯಕ್ರಮಗಳಿಗೆ ವಿದೇಶಗಳಿಂದ ಆಹ್ವಾನ ಬಂದಿವೆ. ಇದು ಏನನ್ನು ಸೂಚಿಸಲಿದೆ?. ದೇಶದಲ್ಲಿ ಮುಂದಿನ ಬಾರಿಯೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂಬುದು ವಿದೇಶಗಳಿಗೂ ಕೂಡ ಖಾತ್ರಿಯಿದೆ’ ಎಂದು ಹೇಳಿದ್ದಾರೆ.
400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು: ರವಿವಾರದ ಭಾಷಣದಲ್ಲಿಯೂ ಕೂಡ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಗೆ 370 ಸ್ಥಾನಗಳಲ್ಲಿ ಜಯ ಸಿಕ್ಕಲಿದೆ. ಎನ್‌ಡಿಎಗೆ 400 ಸ್ಥಾನಗಳು ಬರಲಿವೆ ಎಂದರು. ಈ ಮೂಲಕ ಐತಿಹಾಸಿಕ ಜಯ ವನ್ನು ದಾಖಲಿಸಲೇಬೇಕಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಪರೋಕ್ಷ ವಾಗಿ ಉಲ್ಲೇಖೀಸಿದ್ದಾರೆ.
“ಬಿಜೆಪಿ ಗೆಲುವಿಗಾಗಿ ಪ್ರತಿಯೊಬ್ಬ ಕಾರ್ಯಕರ್ತನು ಕೂಡ ಮನೆ-ಮನೆಗೆ ಭೇಟಿ ನೀಡಿ, 10 ವರ್ಷಗಳಲ್ಲಿ ಎನ್‌ಡಿಎ ಸರಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಬೇಕಿದೆ’ ಎಂದರು.
ಸೇನೆಯ ಮೇಲೆ ಕೈ ಅನುಮಾನ: ಭದ್ರತಾ ಪಡೆಗಳ ಮೇಲೆ ಕಾಂಗ್ರೆಸ್ ನಂಬಿಕೆ ಇರಿಸಿರಲಿಲ್ಲ. ಅವುಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಕಾಂಗ್ರೆಸ್ ಹಿಂಜರಿಯಲಿಲ್ಲ ಎಂದು ಪ್ರಧಾನಿ ದೂರಿದರು. ಇದು ಕಾಂಗ್ರೆಸ್ ಮಾಡಿದ ಮಹಾ ಪಾಪವಾಗಿದೆ. ನಮ್ಮ ಭದ್ರತಾ ಪಡೆಗಳು ಪಾಕಿಸ್ಥಾನದ ಬಾಲಕೋಟ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಕಾಂಗ್ರೆಸ್ ನಾಯಕರು ಸಾಕ್ಷ್ಯ ಕೇಳಿದ್ದರು. ಐಎಎಫ್ಗೆ ರಫೇಲ್ ಯುದ್ಧ ವಿಮಾನ ಖರೀದಿಗೆ ಅಡ್ಡಿ ಮಾಡಿದರು ಎಂದು ಪ್ರಧಾನಿ ತರಾಟೆಗೆ ತೆಗೆದುಕೊಂಡರು.
ಎನ್‌ಡಿಎ ಪಾಂಡವರದ್ದು, ಇಂಡಿಯಾ ಒಕ್ಕೂಟ ಕೌರವರದ್ದು: ಅಮಿತ್ ಶಾ
ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾಭಾರತ ಯುದ್ಧಕ್ಕೆ ಹೋಲಿಸಿದ್ದಾರೆ. ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, “ಮಹಾಭಾರತ ಯುದ್ಧದಲ್ಲಿ ಪಾಂಡ ವರು ಮತ್ತು ಕೌರವರು ಎಂಬ ಎರಡು ಗುಂಪುಗಳಿದ್ದವು.ಇದೀಗ ಇಲ್ಲಿಯೂ ಎರಡು ಗುಂಪುಗಳಿವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕುಟುಂಬಗಳು ನಡೆಸುತ್ತಿರುವ ಪಕ್ಷಗಳು ಮತ್ತು ಭ್ರಷ್ಟಾಚಾರದಿಂದ ತುಂಬಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಇದೆ’ ಎಂದರು. “ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ತುಷ್ಟೀಕರಣ ರಾಜಕೀಯ ವನ್ನು ಪೋಷಿಸುತ್ತಿರುವ ಪಕ್ಷಗಳಿಂದ ಕೂಡಿರುವ ಇಂಡಿಯಾ ಒಕ್ಕೂಟ ಒಂದು ಕಡೆ. ಇನ್ನೊಂದೆಡೆ ದೇಶವೇ ಮೊದಲು ಎಂಬ ಸಿದ್ಧಾಂತವನ್ನು ನೆಚ್ಚಿಕೊಂಡಿರುವ ಪಕ್ಷಗಳಿರುವ ಎನ್‌ಡಿಎ ಒಕ್ಕೂಟ. ಯಾವ ಗುಂಪಿಗೆ ಬಹುಮತ ನೀಡಬೇಕೆಂಬುದನ್ನು ದೇಶದ ಜನರು ನಿರ್ಧರಿಸಬೇಕಿದೆ’ ಎಂದು ಶಾ ಹೇಳಿದರು.
ಮಂದಿರ ನಿರ್ಮಾಣ 1,000 ವರ್ಷಗಳವರೆಗೆ ರಾಮ ರಾಜ್ಯ ಸ್ಥಾಪನೆಗೆ ನಾಂದಿ: ಬಿಜೆಪಿ
ದಿಲ್ಲಿಯ ಭಾರತ ಮಂಟಪಂನಲ್ಲಿ ರವಿವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಯೋಧ್ಯೆಯ ರಾಮಮಂದಿರ ಮೇಲಿನ ನಿರ್ಣಯವನ್ನು ಅಂಗೀಕರಿಸಲಾಯಿತು.
ಜ.22ರಂದು ರಾಮಜನ್ಮಭೂಮಿ ಆಯೋಧ್ಯೆಯಲ್ಲಿ ಮಂದಿರ ನಿರ್ಮಾಣವು ದೇಶದ ಐತಿಹಾಸಿಕ ಮತ್ತು ಅದ್ಭುತ ಸಾಧನೆ.
ಮಂದಿರ ಲೋಕಾರ್ಪಣೆ ಯಶ್ವಸಿಯಾಗಿ ನಡೆಸಿದ್ದಕ್ಕಾಗಿ ಪ್ರಧಾನಿಯವರಿಗೆ ಹೃತೂ³ರ್ವಕ ಅಭಿನಂದನೆಗಳು.
ಮಂದಿರವು ಭಾರತದ ದೂರದೃಷ್ಟಿ, ತಣ್ತೀಶಾಸ್ತ್ರದ ಸಂಕೇತ.
ಇದು ನಿಜವಾಗಿಯೂ ರಾಷ್ಟ್ರೀಯ ಪ್ರಜ್ಞೆಯ ದೇಗುಲ.
ನಾಗರಿಕತೆ, ಸಂಸ್ಕೃತಿಯಲ್ಲಿ ರಾಮ, ಸೀತೆ,ರಾಮಾಯಣವಿದೆ.
ಸಂವಿಧಾನದ ಮೂಲ ಪ್ರತಿಯ ಮೂಲಭೂತ ಹಕ್ಕುಗಳ ವಿಭಾಗದಲ್ಲಿ ದಿಗ್ವಿಜಯದ ಅನಂತರ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆಗೆ ಮರಳುತ್ತಿರುವ ಚಿತ್ರವಿದೆ. ಶ್ರೀರಾಮನು ಮೂಲಭೂತ ಹಕ್ಕುಗಳಿಗೆ ಸ್ಫೂರ್ತಿ ಎಂಬುದಕ್ಕೆ ಇದು ಪುರಾವೆ.
ಮಹಾತ್ಮಾ ಗಾಂಧಿ ಅವರ ಹೃದಯದಲ್ಲೂ ಕೂಡ ರಾಮ ರಾಜ್ಯದ ಪರಿಕಲ್ಪನೆಯಿತ್ತು. ಇದರ ಸಾಕಾರಕ್ಕೆ ಅವರು ಕನಸು ಕಂಡಿದ್ದರು.
ರಾಮನ ಮೌಲ್ಯಗಳು “ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಮತ್ತು “ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್’ಗೆ ಆಧಾರ.
ಜೂನ್‌ವರೆಗೆ ಬಿಜೆಪಿ ಅಧ್ಯಕ್ಷ ನಡ್ಡಾ ಅಧಿಕಾರದ ಅವಧಿ ವಿಸ್ತರಣೆ
ಎಪ್ರಿಲ್-ಮೇಯಲ್ಲಿ ಲೋಕಸಭೆ ಚುನಾ ವಣೆ ನಡೆಯುವ ಸಾಧ್ಯತೆಗಳು ಇವೆ. ಹೀಗಾಗಿ ಬಿಜೆಪಿ
ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧಿಕಾರದ ಅವಧಿಯನ್ನು ಜೂನ್ ವರೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ತೀರ್ಮಾನ ಕೈಗೊಂಡು, ಒಪ್ಪಿಗೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.