BPL; ಮುಸ್ತಫಿಜುರ್ ತಲೆಗೆ ಚೆಂಡಿನೇಟು: ಆಸ್ಪತ್ರೆಗೆ ದಾಖಲು
Team Udayavani, Feb 19, 2024, 6:00 AM IST
ಢಾಕಾ: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಅಭ್ಯಾಸದ ವೇಳೆ ಅವಘಡವೊಂದು ಸಂಭವಿಸಿದೆ. ಎಡಗೈ ಪೇಸ್ ಬೌಲರ್ ಮುಸ್ತಫಿಜುರ್ ರೆಹಮಾನ್ ತಲೆಗೆ ಚೆಂಡು ಬಡಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ.
“ಜಹುರ್ ಅಹ್ಮದ್ ಚೌಧರಿ ಸ್ಟೇಡಿಯಂ’ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಲಿಟನ್ ದಾಸ್ ಬಾರಿಸಿದ ಚೆಂಡು ಮುಸ್ತಫಿಜುರ್ ತಲೆಗೆ ಹೋಗಿ ಬಡಿಯಿತು. ಆಗ ಅವರು ತಮ್ಮ ಬೌಲಿಂಗ್ ಮಾರ್ಕ್ನತ್ತ ನಡೆದು ಹೋಗುತ್ತಿದ್ದರು.
ಚೆಂಡು ಬಡಿದ ರಭಸಕ್ಕೆ ತಲೆಯಿಂದ ರಕ್ತ ಚಿಮ್ಮಿತು. ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ “ಇಂಪೀರಿಯಲ್ ಹಾಸ್ಪಿಟಲ್’ಗೆ ಕೊಂಡೊಯ್ಯಲಾಯಿತು. ಆದರೆ ತಲೆಯ ಒಳ ಭಾಗಕ್ಕೆ ಯಾವುದೇ ಏಟು ಬಿದ್ದಿಲ್ಲ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.