Vayu Shakti 2024:ಭಾರತೀಯ ವಾಯುಪಡೆಯ ಸಾಮರ್ಥ್ಯ ಅನಾವರಣಗೊಳಿಸಿದ ವಾಯು ಶಕ್ತಿ 2024

ಭಾರತೀಯ ಸೇನೆಯ ಎರಡೂ ವಿಭಾಗಗಳ ನಡುವಿನ ಅತ್ಯುತ್ತಮ ಸಂಯೋಜನೆಯನ್ನು ಪ್ರದರ್ಶಿಸಿತು.

Team Udayavani, Feb 19, 2024, 10:36 AM IST

Vayu Shakti 2024:ಭಾರತೀಯ ವಾಯುಪಡೆಯ ಸಾಮರ್ಥ್ಯ ಅನಾವರಣಗೊಳಿಸಿದ ವಾಯು ಶಕ್ತಿ 2024

ಭಾರತೀಯ ವಾಯುಪಡೆ ಇತ್ತೀಚೆಗೆ ನಡೆದ ವಾಯು ಶಕ್ತಿ – 2024 ವಾಯು ಸೇನಾ ಅಭ್ಯಾಸದಲ್ಲಿ ತನ್ನ ಅಸಾಧಾರಣ ಸಾಮರ್ಥ್ಯ ಮತ್ತು ಕಾರ್ಯತಂತ್ರದ ಪರಾಕ್ರಮವನ್ನು ಸಾಬೀತು ಪಡಿಸಿತು. ಈ ಅಭ್ಯಾಸ ಜೈಸಲ್ಮೇರ್ ಬಳಿಯ ಪೋಖ್ರಾನ್ ಪ್ರದೇಶದಲ್ಲಿ ಫೆಬ್ರವರಿ 17ರ ಶನಿವಾರ(ಫೆ.17)ದಂದು ನೆರವೇರಿತು.

ಅಭ್ಯಾಸದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸೇನಾ ಸಿಬ್ಬಂದಿ ಮುಖ್ಯಸ್ಥರು) ಜನರಲ್ ಅನಿಲ್ ಚೌಹಾಣ್ ಅವರು ಉಪಸ್ಥಿತರಿದ್ದರು. 120ಕ್ಕೂ ಹೆಚ್ಚು ವಿಮಾನಗಳು ಭಾಗವಹಿಸಿದ ಈ ಅಭ್ಯಾಸದಲ್ಲಿ, ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿ ನಿಖರವಾಗಿ ದಾಳಿ ಕಾರ್ಯಾಚರಣೆ ನಡೆಸುವ ಭಾರತೀಯ ವಾಯು ಸೇನೆಯ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು.

ವಾಯು ಶಕ್ತಿ ಸೇನಾ ಅಭ್ಯಾಸದ ಸಂದರ್ಭದಲ್ಲಿ, ಭಾರತೀಯ ವಾಯುಪಡೆ ಮರುಭೂಮಿಯ ಆಗಸದಲ್ಲಿ ತನ್ನ ಅತ್ಯಂತ ಶಕ್ತಿಶಾಲಿ ಆಯುಧಗಳ ಸಾಮರ್ಥ್ಯವನ್ನು ತೋರಿಸಿತು. ಇದರಲ್ಲಿ ರಫೇಲ್ ಯುದ್ಧ ವಿಮಾನಗಳಿಂದ ದೃಗ್ಗೋಚರ ವ್ಯಾಪ್ತಿಯನ್ನು ಮೀರಿ (ಬಿಯಾಂಡ್ ವಿಶುವಲ್ ರೇಂಜ್) ದಾಳಿ ನಡೆಸುವ ಎಂಐಸಿಎ ಕ್ಷಿಪಣಿ ಉಡಾವಣೆ, ಅಪಾಚೆ ದಾಳಿ ಹೆಲಿಕಾಪ್ಟರ್‌ನಿಂದ ಹೆಲ್‌ಫೈರ್ ಕ್ಷಿಪಣಿ ಉಡಾವಣೆಗಳು ಸೇರಿದ್ದು, ಭಾರತೀಯ ವಾಯುಪಡೆ ತನ್ನ ಗುರಿಯ ಮೇಲೆ ಎಷ್ಟು ನಿಖರವಾಗಿ ದಾಳಿ ನಡೆಸಬಲ್ಲದು ಎಂಬುದನ್ನು ತೋರ್ಪಡಿಸಿದವು.

ಅತ್ಯಂತ ಬೃಹತ್ತಾದ ವಾಯು ಶಕ್ತಿ 2024 ಅಭ್ಯಾಸ ನೈಜ ಯುದ್ಧ ಸನ್ನಿವೇಶದ ಮರು ನಿರ್ಮಾಣದಂತೆ ತೋರಿತು. ಅಭ್ಯಾಸದ ಸಂದರ್ಭದಲ್ಲಿ, ಬಹುತೇಕ 50 ಟನ್‌ಗಳಷ್ಟು ಆಯುಧಗಳನ್ನು 2 ಚದರ ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿ ಪ್ರಯೋಗಿಸಲಾಯಿತು.

ಇದರಲ್ಲಿ ಭಾಗಿಯಾದ 120 ವಿಮಾನಗಳ ಪೈಕಿ, 77 ಯುದ್ಧ ವಿಮಾನಗಳಾಗಿದ್ದು, ಬೆಳಗಿನಿಂದ ಸಂಜೆ, ಸಂಜೆಯಿಂದ ರಾತ್ರಿಯ ತನಕ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ತೋರಿದವು. ಇದಕ್ಕೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಇತರ ಗಣ್ಯರು ಸಾಕ್ಷಿಯಾದರು.

ಈ ವರ್ಷದ ವಾಯು ಶಕ್ತಿ ಅಭ್ಯಾಸದಲ್ಲಿ ಭಾರತೀಯ ಸೇನೆಯೂ ಭಾಗವಹಿಸಿದ್ದು, ಇದು ಭಾರತೀಯ ಸೇನೆಯ ಎರಡೂ ವಿಭಾಗಗಳ ನಡುವಿನ ಅತ್ಯುತ್ತಮ ಸಂಯೋಜನೆಯನ್ನು ಪ್ರದರ್ಶಿಸಿತು.

ವಾಯು ಶಕ್ತಿ ಅಭ್ಯಾಸದಲ್ಲಿ ಭಾರತದ ಸ್ವದೇಶೀ ನಿರ್ಮಾಣದ ತೇಜಸ್ ಯುದ್ಧ ವಿಮಾನ, ಪ್ರಚಂಡ್ ಮತ್ತು ಧ್ರುವ್ ಹೆಲಿಕಾಪ್ಟರ್‌ಗಳು, ಜಾಗತಿಕವಾಗಿ ಗುರುತಿಸಲ್ಪಟ್ಟ ವಿಮಾನಗಳಾದ ರಫೇಲ್, ಮಿರೇಜ್-2000, ಸುಖೋಯಿ-30 ಎಂಕೆಐ, ಮತ್ತು ಜಾಗ್ವಾರ್‌ಗಳೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು. ಅದರೊಡನೆ, ಅತ್ಯಾಧುನಿಕ ಹೆಲಿಕಾಪ್ಟರ್‌ಗಳಾದ ಚಿನೂಕ್, ಅಪಾಚೆ, ಮತ್ತು ಎಂಐ-17ಗಳು ಅಭ್ಯಾಸದಲ್ಲಿ ಭಾಗಿಯಾದವು. ವಾಯು ಶಕ್ತಿ ಅಭ್ಯಾಸ ಭಾರತೀಯ ಸ್ವದೇಶೀ ನಿರ್ಮಾಣದ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ವ್ಯವಸ್ಥೆಗಳಾದ ಆಕಾಶ್ ಮತ್ತು ಸಮರ್‌ನಂತಹ ಆಯುಧ ವ್ಯವಸ್ಥೆಗಳನ್ನೂ ಪ್ರದರ್ಶಿಸಿತು.

2024ರ ವಾಯು ಶಕ್ತಿ ಅಭ್ಯಾಸವನ್ನು ‘ನವಶ್ ವಜ್ರ ಪ್ರಹಾರಮ್’ ಅಂದರೆ, ಆಗಸದಿಂದ ಮಿಂಚಿನ ದಾಳಿ ಎಂಬ ಥೀಮ್ ಅಡಿಯಲ್ಲಿ ನಡೆಸಲಾಗಿದ್ದು, ಇದು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಪ್ರತಿನಿಧಿಸಿದ್ದು, ರಾಷ್ಟ್ರೀಯ ಭದ್ರತೆಯ ಕುರಿತು ವಾಯುಪಡೆಯ ಬದ್ಧತೆ ಮತ್ತು ಸ್ವಾವಲಂಬನೆಯ ಸಾಧನೆಯೆಡೆಗೆ ನಿರಂತರ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.

ವಾಯು ಶಕ್ತಿ ಅಭ್ಯಾಸ ಮೂರು ವರ್ಷಗಳಿಗೊಮ್ಮೆ ನೆರವೇರುವ ಅಭ್ಯಾಸವಾಗಿದ್ದು, ಕಳೆದ ಬಾರಿ 2019ರ ಫೆಬ್ರವರಿಯಲ್ಲಿ ನೆರವೇರಿತ್ತು. 2022ರಲ್ಲಿ ಆಯೋಜನೆಗೊಳ್ಳಬೇಕಿದ್ದ ವಾಯು ಶಕ್ತಿ ಆವೃತ್ತಿ ರಷ್ಯಾ ಮತ್ತು ಉಕ್ರೇನ್ ನಡುವೆ ತೀವ್ರಗೊಂಡಿದ್ದ ಚಕಮಕಿಯ ಕಾರಣದಿಂದ ರದ್ದಾಗಿತ್ತು. ಈ ನಿರ್ಧಾರಕ್ಕೆ ಕೋವಿಡ್-19 ಕೂಡ ಕಾರಣವಾಗಿತ್ತು.

ವಾಯು ಶಕ್ತಿ 2024ರ ಗುರಿಗಳು

i) ಭಾರತೀಯ ವಾಯು ಸೇನೆಯ ಸಮಗ್ರ ಯುದ್ಧ ಮತ್ತು ಕಾರ್ಯಾಚರಣಾ ಸಾಮರ್ಥ್ಯಗಳ ಪ್ರದರ್ಶನ.

ii) ಗಾಳಿಯಿಂದ ಭೂಮಿಗೆ ಮತ್ತು ಭೂಮಿಯಿಂದ ಗಾಳಿಗೆ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ತೋರುವಿಕೆ. ಭಾರತೀಯ ನಿರ್ಮಾಣದ ತೇಜಸ್ ರೀತಿಯ ವಿಮಾನಗಳು ಸೇರಿದಂತೆ, ವಿವಿಧ ಯುದ್ಧ ವಿಮಾನಗಳ ನಡುವೆ ಯಾವುದೇ ಅಡೆತಡೆಯಿಲ್ಲದ ಸಂಯೋಜನೆ.

iii) ವಿವಿಧ ಮಿಲಿಟರಿ ಯೋಜನೆಗಳಲ್ಲಿ ಭಾರತೀಯ ಭೂ ಸೇನೆಯೊಡನೆ ಸಂಯೋಜಿತ ಕಾರ್ಯಾಚರಣೆಗಳ ಪ್ರದರ್ಶನ.

iv) ಭಾರತೀಯ ವಾಯುಪಡೆ ಬಳಸುವ ಇತ್ತೀಚಿನ ತಾಂತ್ರಿಕ ನಾವೀನ್ಯತೆಗಳು ಮತ್ತು ಆಯುಧಗಳ ಪ್ರದರ್ಶನ.

v) ರಾತ್ರಿಯ ವೇಳೆ ಕಾರ್ಯಾಚರಣೆ ನಡೆಸಲು ಮತ್ತು ದಾಳಿ ನಡೆಸುವಲ್ಲಿ ಭಾರತೀಯ ವಾಯುಪಡೆಯ ಸಾಮರ್ಥ್ಯ ಪ್ರದರ್ಶನ. ಈ ಅಭ್ಯಾಸದಲ್ಲಿ ಭಾರತೀಯ ವಾಯುಪಡೆಯ ಸಾಗಾಣಿಕಾ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳೂ ಪ್ರದರ್ಶನ ತೋರಿವೆ.

ಏಕೀಕೃತ ವೈಮಾನಿಕ ಸಾಮರ್ಥ್ಯ ಪ್ರದರ್ಶನ

ಭಾರತೀಯ ವಾಯುಪಡೆ ಮೂರು ಪ್ರಮುಖ ಯುದ್ಧ ಅಭ್ಯಾಸಗಳಾದ ವಾಯು ಶಕ್ತಿ, ಗಗನ್ ಶಕ್ತಿ, ಮತ್ತು ತರಂಗ್ ಶಕ್ತಿಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಇಂತಹ ಅಭ್ಯಾಸಗಳು ಭಾರತೀಯ ವಾಯುಪಡೆಯ ರಕ್ಷಣೆ ಮತ್ತು ದಾಳಿ ಸಾಮರ್ಥ್ಯ, ಹಗಲು ಮತ್ತು ರಾತ್ರಿ ವೇಳೆಯ ಕಾರ್ಯಾಚರಣಾ ಸಾಮರ್ಥ್ಯವನ್ನು ತೋರಿಸುತ್ತವೆ. ಅದರೊಡನೆ, ಇಂತಹ ಕಾರ್ಯಾಚರಣೆಗಳು ಭಾರತೀಯ ಸೇನಾಪಡೆಯ ವಿವಿಧ ವಿಭಾಗಗಳ ಕಾರ್ಯಾಚರಣಾ ಸಹಯೋಗವನ್ನು ಪ್ರದರ್ಶಿಸುತ್ತವೆ.

ವಾಯು ಶಕ್ತಿ ಅಭ್ಯಾಸ: ಭಾರತೀಯ ವಾಯುಪಡೆ ಆಯೋಜಿಸುವ ‘ವಾಯು ಶಕ್ತಿ’ ಸೇನಾ ಅಭ್ಯಾಸ ಪ್ರತಿ ಮೂರು ವರ್ಷಗಳಿಗೊಮ್ಮೆ ಜರಗುತ್ತದೆ. ಪೋಖ್ರಾನ್ ಪ್ರದೇಶದಲ್ಲಿ ಜರಗುವ ಈ ಅಭ್ಯಾಸದಲ್ಲಿ, ಅಂದಾಜು 135 ಯುದ್ಧ ವಿಮಾನಗಳು, ವಿಮಾನಗಳು, ಹೆಲಿಕಾಪ್ಟರ್‌ಗಳು, ಹಾಗೂ ಡ್ರೋನ್‌ಗಳು ಭಾಗವಹಿಸುತ್ತವೆ.

ಗಗನ ಶಕ್ತಿ ಅಭ್ಯಾಸ: ಇದು ಭಾರತೀಯ ವಾಯುಪಡೆ ಭಾರತೀಯ ಸೇನೆಯ ಇತರ ವಿಭಾಗಗಳು ಮತ್ತು ಪಾಲುದಾರರ ಜೊತೆ ಕೈಗೊಳ್ಳುವ ಸಮರ ಅಭ್ಯಾಸವಾಗಿದೆ. ಉತ್ತರದಿಂದ ದಕ್ಷಿಣಕ್ಕೆ – ಪೂರ್ವದಿಂದ ಪಶ್ಚಿಮಕ್ಕೆ ಕಾರ್ಯಾಚರಿಸುವ ಭಾರತೀಯ ಸೇನೆ ಮತ್ತು ನೌಕಾಪಡೆಗಳು ಇದರಲ್ಲಿ ಭಾಗಿಯಾಗುತ್ತವೆ. ಈ ಅಭ್ಯಾಸದಲ್ಲಿ ರಫೇಲ್ ಯುದ್ಧ ವಿಮಾನಗಳು ಮತ್ತು ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳೂ ಭಾಗಿಯಾಗುತ್ತವೆ. ಈ ಅಭ್ಯಾಸವೂ 2024ರಲ್ಲಿ ನಡೆಯಲಿದೆ.

ತರಂಗ್ ಶಕ್ತಿ ಅಭ್ಯಾಸ: ಇದು ಭಾರತದಲ್ಲಿ ನಡೆಯುವ ಮೊದಲ ಬಹುರಾಷ್ಟ್ರೀಯ ಪಾಲ್ಗೊಳ್ಳುವಿಕೆಯ ಅಭ್ಯಾಸವಾಗಿದೆ. ಇದರಲ್ಲಿ ಭಾರತದ ಸ್ನೇಹಿತ ರಾಷ್ಟ್ರಗಳಾದ ಅಮೆರಿಕಾ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಹಾಗೂ ಇತರ ಸ್ಥಳೀಯ ರಾಷ್ಟ್ರಗಳ ಯುದ್ಧ ವಿಮಾನಗಳು ಭಾಗಿಯಾಗಲಿವೆ. ಈ ಅಭ್ಯಾಸದಲ್ಲಿ ಒಟ್ಟು 12 ಮಿತ್ರ ವಾಯುಪಡೆಗಳು ಭಾಗವಹಿಸುವ ನಿರೀಕ್ಷೆಗಳಿವೆ.

ಭಾರತೀಯ ವಾಯಪಡೆ ಪ್ರಸ್ತುತ ತನ್ನ ಜಾಗತಿಕ ವ್ಯಾಪ್ತಿ, ಅತ್ಯಂತ ದೀರ್ಘ ವ್ಯಾಪ್ತಿಯ ಗುರಿಯ ಮೇಲೆ ನಿಖರ ದಾಳಿ ನಡೆಸುವ ಸಾಮರ್ಥ್ಯದಿಂದಾಗಿ ಹೆಸರುವಾಸಿಯಾಗುತ್ತಿದೆ. ಭಾರತೀಯ ವಾಯುಪಡೆ ಇದೇ ರೀತಿಯಲ್ಲಿ ಹೊಸ ಸಾಮರ್ಥ್ಯಗಳ ಅನಾವರಣ ನಡೆಸುವುದನ್ನು ಮುಂದುವರಿಸುವ ನಿರೀಕ್ಷೆಗಳಿವೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಟಾಪ್ ನ್ಯೂಸ್

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

18-uv-fusion

UV Fusion: ನಿಸ್ವಾರ್ಥ ಜೀವ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.