Kannada literature; ಮನದ ಕದವ ತಟ್ಟಿ ಮುಟ್ಟಿ ಹೊರಟವರು ಕೆ.ಟಿ. ಗಟ್ಟಿ


Team Udayavani, Feb 20, 2024, 6:00 AM IST

1-sadasd

ಕನ್ನಡ ಸಾಹಿತ್ಯ ಕಣಜದಲ್ಲಿ ಕೆ.ಟಿ. ಗಟ್ಟಿಯವರು ಒಬ್ಬ ಗಟ್ಟಿ ಕಾಳು. ಸಾಹಿತ್ಯ, ವಿಚಾರ, ಶಿಕ್ಷಣ, ಅನುವಾದ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಹೀಗೆ ಬಂದು ಹೋದವರಲ್ಲ; ಬದಲಾಗಿ ಆಳವಾಗಿ ಕುಳಿತು ಕೃತಿಗಳ ತೋರಣ ಕಟ್ಟಿದವರು. ಬರೆಯುವುದೆಲ್ಲ ಮುಗಿದಿದೆ ಎನ್ನುತ್ತಿದ್ದ ಗಟ್ಟಿಯವರ ಮಾತು ನಿಜವೂ ಇರಬಹುದು. ಆದರೆ ಬರೆಯದೇ ಹೇಳಬೇಕಾದ್ದು ಇನ್ನೂ ಇತ್ತೇನೋ?

ಮಾನವೀಯತೆಯ ನಂದಾದೀಪ, ವೈಚಾರಿಕತೆಯ ಪ್ರದೀಪ, ಶಿಕ್ಷಣದ ಹೊಂಗಿರಣ ಕೆ.ಟಿ.ಗಟ್ಟಿ ಎಂಬ ಪ್ರಖರ ಸೂರ್ಯ ಇಂದು ಅಸ್ತಂಗತರಾಗಿದ್ದಾರೆ. ಗಟ್ಟಿ ಅವರು ತಮ್ಮ ಪ್ರಥಮ ಕೃತಿ “ಶಬ್ದಗಳು’ ಕಾದಂಬರಿಯಲ್ಲೇ ಮಾನವ ದೇಹದ ಸಾಧ್ಯತೆಗಳ ಬಗ್ಗೆ ವಿಚಾರ ಮಂಥನ ಮಾಡಿದವರು. ಆ ಕೃತಿಯ ಮೂಲಕ ಓದುಗರಲ್ಲಿ ಸಂಚಲನ ಮೂಡಿಸಿದ ಅದ್ವಿತೀಯರು.

ಬಳಿಕ ದೂರದ ಇಥಿಯೋಪಿಯಾದಲ್ಲಿ ಇದ್ದು, “ಕರ್ಮಣ್ಯೇ ವಾಧಿಕಾರಸ್ತೇ’ “ಅಬ್ರಾಹ್ಮಣ’, “ಯುಗಾಂತರ’, “ಯುದ್ಧ’ ಕಾದಂಬರಿಗಳನ್ನು ಹರಿಯ ಬಿಟ್ಟವರು. ತಾಯ್ನಾಡಿಗೆ ಮರಳಿದ ಬಳಿಕ “ರಾಗಲಹರಿ’, “ಸ್ವರ್ಣಮೃಗ’, “ನಿರಂತರ’, “ಕೆಂಪು ಕಳವೆ’ ಮುಂತಾದ ಹಲವು ಕಾದಂಬರಿಗಳನ್ನೂ, ಶಿಕ್ಷಣ ಸಂಬಂಧಿ ಕೃತಿಗಳನ್ನೂ, ವೈಚಾರಿಕತೆಯ ಉದ್ದೀ ಪಕ ಉತ್ಕೃಷ್ಟ ಸಾಹಿತ್ಯವನ್ನೂ ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳಗಿದವರು. ಕವನ ಸಂಕಲನ, ಅನುವಾದ, ಮಕ್ಕಳ ನಾಟಕ, ತುಳು ಭಾಷೆಯಲ್ಲೂ ಕೃತಿಗಳು, ಅನುವಾದವನ್ನೂ ಕೈಗೊಂಡು ಭಾಷಾ ಸಿರಿಯನ್ನು ಮೆರೆದ ಅವರು, ಸ್ವಶಿಕ್ಷಿತರಾದವರಷ್ಟೇ ಅಲ್ಲ, ತಾನೇ ಒಂದು ವಿಶ್ವವಿದ್ಯಾನಿಲಯ ಎನ್ನುವಂತೆ ಇದ್ದ ವರು. ಭಾಷಾ ಶಾಸ್ತ್ರದ, ಪ್ರಗಲ್ಭ ಪಂಡಿತರು. ಆಂಗ್ಲ ವಿಶ್ವ ಸಾಹಿತ್ಯವನ್ನು ಅರಗಿಸಿಕೊಂಡವರು.

ಬದುಕು ಎಂದರೆ ಬರಹವೇ ಆಗಿರುವ ಗಟ್ಟಿಯವರ ಅಗಾಧ ಸಾಹಿತ್ಯ ಕೃಷಿ ಅವರ ಚಿಂತನಶೀಲ ಮನಸ್ಸಿನ ಪ್ರತಿಕೃತಿ. ಶಿಕ್ಷಕನೂ ಆಗಿದ್ದ ಈ ಸಾಹಿತಿಯಲ್ಲಿ ಶಿಕ್ಷಣ ಪ್ರಜ್ಞೆ ಪ್ರಖರವಾಗಿತ್ತು. ಅವರ ಆತ್ಮಕಥನ “ತೀರ’ದ ಮುಖ್ಯ ವಿಚಾರಸೆಲೆಯೂ ಶಿಕ್ಷಣವೇ. ಅದನ್ನು ಆತ್ಮಚಿಂತನವೆಂದು ಅವರು ಕರೆದುಕೊಂಡಿದ್ದಾರೆ. ನಿಜಕ್ಕೂ ಬಹುಮೂಲ್ಯ ಕೃತಿಯದು. ಒಟ್ಟು 49 ಕಾದಂಬರಿಗಳು, ಆತ್ಮಕಥನ, ನಾಲ್ಕು ಕಥಾ ಸಂಕಲನಗಳು, ಆರು ಪ್ರಬಂಧ ಸಂಕಲನಗಳು, ಒಂದು ಪ್ರವಾಸ ಸಾಹಿತ್ಯ, ಮೂರು ಕವನ ಸಂಕಲನಗಳು, ಹದಿನೇಳು ಬಾನುಲಿ ನಾಟಕಗಳು, ಹತ್ತೂಂಬತ್ತು ರಂಗನಾಟಕಗಳು, ಶಿಶು ಸಾಹಿತ್ಯದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಒಟ್ಟು ನಲವತ್ತು ನಾಟಕಗಳು, ತುಳುವಿನಲ್ಲಿ ಒಂದು ಕಾದಂಬರಿ, ಇಂಗ್ಲಿಷ್‌ ಕವಿತೆಗಳ ಅನುವಾದ, ಇಂಗ್ಲಿಷ್‌-ಕನ್ನಡ ಉಭಯ ಭಾಷಾಧ್ಯಯನದ ಎರಡು ಕೃತಿಗಳು, ಶಿಕ್ಷಣದ ಬಗ್ಗೆ ಗುರುಗಳಾಗಿ, ತಂದೆ-ತಾಯಿ ಹಾಗೂ “ಪೇರೆಂಟ್ಸ್‌ ಆಸ್‌ ಎಜುಕೇಟರ್’ ಎಂಬ ಮಹತ್ವದ ಕೃತಿಗಳು, ಇಂಗ್ಲಿಷ್‌ ವ್ಯಾಕರಣ ಹಾಗೂ ಉಪಯೋಗದ ಬಗ್ಗೆ ಐದು ಕೃತಿಗಳು..ಇಂತಹ ಮಹತ್ವಪೂರ್ಣ, ಅಗಾಧ ಸಾಹಿತ್ಯ ಸೃಷ್ಟಿಯ ಹಿಂದಿನ ಕತೃìತ್ವ ಶಕ್ತಿಗೆ ಸಮನಾದುದು ಬೇರೇನಿದ್ದೀತು ? “ನಿನ್ನೆ- ಇಂದು- ನಾಳೆ’ ರಾಜಕೀಯ ಪ್ರಜ್ಞೆಯ ಬೃಹತ್‌ ಕಾದಂಬರಿ ಬಹಳ ಮುಖ್ಯವಾಗಿ ಉಲ್ಲೇಖೀಸಲೇಬೇಕಾದದ್ದು.

ಉಜಿರೆಯ ಗುಡ್ಡಗಾಡಿನ ವನಶ್ರೀಯಲ್ಲಿ ಕೃಷಿಕನಾಗಿಯೂ ವಿಜೃಂಭಿಸಿದವರು ಗಟ್ಟಿಯವರು. ಸಾಹಿತ್ಯ ಕ್ಷೇತ್ರದ ಗಟ್ಟಿಗನನ್ನು ಮಣಿಸಿದುದು ಅಲ್ಲಿನ ಮಂಗಗಳು. ಕರಿಮೆಣಸು ಬಿಟ್ಟು ಬೇರೇನೂ ಕೈಗೆ ಸಿಗದಂತೆ ಎಲ್ಲವನ್ನೂ ಧ್ವಂಸವಾಗಿಸುವ ಮಂಗಗಳಿಗೆ ಕೊನೆಗೂ ಸೋತು ಅವರು ಕೈಚೆಲ್ಲಿದ್ದರು. ಮಂಗಗಳಿಲ್ಲದಿದ್ದರೆ ಸಾಹಿತ್ಯದೊಡನೆ ಆ ವನಶ್ರೀಯಲ್ಲಿ ಹಸುರಿನ ಕೃಷಿಯೂ ಪುಷ್ಕಳವಾಗಿರುತ್ತಿತ್ತು. ಹೋಮಿ ಯೋಪತಿ ವೈದ್ಯಕೀಯ ದಲ್ಲಿ ಶ್ರದ್ಧೆ ಮತ್ತು ಅನುಸರಣೆ ಅವರ ಇನ್ನೊಂದು ವೈಶಿಷ್ಟ್ಯ. ಹೀಗೆ ಹಲವು ವಿಷಯಗಳಲ್ಲಿ ಆಸಕ್ತಿ ತಳೆದವರು ಗಟ್ಟಿಯವರು.
ಮಾನವೀಯತೆಯ ಸಾಕಾರವಾಗಿದ್ದ ಕೆ.ಟಿ.ಗಟ್ಟಿ ಅವರಲ್ಲಿ ದೇವರು, ದಿಂಡರು, ಪೂಜೆ ಪುನಸ್ಕಾರಗಳಿರಲಿಲ್ಲ. ಇದ್ದುದು ಮಾನವೀಯ ಸಂಬಂಧಗಳು ಮತ್ತು ಪುಸ್ತಕಗಳ ನಂಟು. ನೆಹರೂ ಅವರಂತೆ ಪುಟಗಳನ್ನು ಬಿಡಿ ಬಿಡಿ ವಾಕ್ಯಗಳನ್ನು ಓದದೆ ಇಡಿಯ ಪುಟವನ್ನು ಶೀಘ್ರವಾಗಿ ಗ್ರಹಿಸುವ ಬಗೆ ಅವರ ಅನನ್ಯತೆ. ಅದನ್ನು ಎಲ್ಲರಿಗೂ ತಿಳಿಸಿ ಕೊಟ್ಟಿದ್ದರು. ಭಾಷಾ ಶಾಸ್ತ್ರದ ಅರಿವಿದ್ದ ಅವರು ಇಂಗ್ಲಿಷ್‌ ಉಚ್ಚಾರದ ಬಗೆಗೂ ಉತ್ತಮ ಪರಿಜ್ಞಾನ ಹೊಂದಿದ್ದರು. ಅವರ “ಅಬ್ರಾಹ್ಮಣ’, “ಕರ್ಮಣ್ಯೇ ವಾಧಿಕಾರಸ್ತೇ’ ಕೃತಿಗಳು ಸಾಮಾಜಿಕ ಸಂಚಲನವನ್ನೇ ಉಂಟು ಮಾಡಿದ್ದವು ಎನ್ನಲಡ್ಡಿಯಿಲ್ಲ. ಅವರ ಅಷ್ಟೂ ಕಾದಂಬರಿಗಳಲ್ಲಿ ಜನರ ಹೆಸರಾಗಲಿ, ಸ್ಥಳನಾಮಗಳಾಗಲೀ ಎಲ್ಲೂ ಪುನರಾವರ್ತನೆ ಆದುದು ಎಂಬುದೇ ಇಲ್ಲ. ಪಯಣದ ಆರಂಭದಲ್ಲಿ ಶುರುವಾಗುವ ಕಥೆ, ಕಾದಂಬರಿಯ ಮೊಳಕೆ ಬಸ್‌ ಇಳಿಯುವಾಗ ಪೂರ್ಣ ಹಂದರವಾಗಿ ರೂಪುಗೊಳ್ಳುತ್ತದೆ. ಅತ್ಯಂತ ಬಡ ಹಿನ್ನೆಲೆಯಿಂದ ಬಂದ ಗಟ್ಟಿಯವರ ಬೌದ್ಧಿಕ ಶ್ರೀಮಂತಿಕೆ ಅಪಾರ. ಅವರ “ಕೆಂಪು ಕಳವೆ’ ಕಾದಂಬರಿ ರೇಡಿಯೋದಲ್ಲಿ ಪ್ರಸಾರವಾಗಿ ಅಪಾರ ಜನಮನ್ನಣೆ ಪಡೆದಿತ್ತು.

ವರ್ಷಗಳ ಹಿಂದೆ ಮೆದುಳಿನ ಸ್ಟ್ರೋಕ್‌ಗೆ ಒಳಗಾಗಿದ್ದ ಅವರು ಸುರಕ್ಷಿತವಾಗಿ ಹೊರಬಂದರೂ ಇತ್ತೀಚಿನ ವರ್ಷಗಳಲ್ಲಿ ಅದರ ಪರಿಣಾಮ ಅವರ ಚಿತ್ತ, ದೇಹದ ಮೇಲೆ ಆಗದಿರಲಿಲ್ಲ. ಇನ್ನು ಬರೆಯುವುದು ಏನೂ ಇಲ್ಲ, ಬರೆದು ಮುಗಿದಿದೆ ಎಂದು ನಾಲ್ಕು ವರ್ಷಗಳಿಂದ ಅವರು ಹೇಳುತ್ತಲೇ ಇದ್ದರು. ಕೊನೆಯವರೆಗೂ ಅವರ ಲೇಖನಿ ನಿಲ್ಲದಿರಲಿ ಎಂಬುದೇ ನನ್ನ ಹಾರೈಕೆಯಾಗಿತ್ತು. ಆದರೆ ಆ ಆಶಯ ಈಡೇರಲಿಲ್ಲ ಎಂಬುದೇ ನನಗೆ ತೀರಾ ದುಃಖ ವನ್ನುಂಟು ಮಾಡಿದೆ.

1977ರಲ್ಲಿ ನನ್ನ ಪತ್ರಕ್ಕೆ ಉತ್ತರವಾಗಿ ನಮ್ಮ ಮನೆ ಬಾಗಿಲಲ್ಲಿ ಪ್ರತ್ಯಕ್ಷರಾದವರು. ಉಜಿರೆಯ ವನಶ್ರೀಯಲ್ಲಿ¨ªಾಗ ಸಾಹಿತ್ಯ, ತೋಟದ ಕೃಷಿಯಲ್ಲಿ ನಿರಂತರ ತೊಡಗಿಕೊಂಡಿರುತ್ತಿದ್ದ ಗಟ್ಟಿಯವರು ನನ್ನನ್ನು ಕಂಪ್ಯೂಟರ್‌ ಬಳಕೆಗೂ ಪ್ರೇರೇಪಿಸಿದವರು. ಅರ್ಧಗಂಟೆಯಲ್ಲಿ ನೀವದರಲ್ಲಿ ಮಾಸ್ಟರ್‌ ಆಗ ಬಹುದು ಎಂದು ಹುರಿ ದುಂಬಿಸಿ ದವರು. ಹಾಗೆ ಆಧುನಿಕ ತಾಂತ್ರಿಕತೆ ಬಗ್ಗೆ ಮನದ ಮೂಲೆಯಲ್ಲೋ ಕುತೂಹಲದ ಕಿಂಡಿ ತೆರೆದಿಟ್ಟುಕೊಂಡಿದ್ದವರು. ಅಂಥವರು ಈ ಕೊನೆಯ ವರ್ಷಗಳಲ್ಲಿ ಸ್ಮಾರ್ಟ್‌ ಫೋನ್‌ ಆದರೂ ಉಪಯೋಗಿ ಸುತ್ತಿದ್ದರೆ ಕ್ರಿಯಾ ಶೀಲವಾಗಿರುತ್ತಿದ್ದರೇನೋ ಎಂದು ನಾನು ಅಂದು ಕೊಳ್ಳುವುದಿದೆ. ಅದು ಪೂರ್ಣ ಸತ್ಯವೋ ತಿಳಿದಿಲ್ಲ.

ಕೊರೊನಾ ಕಾಲದ ನಿರ್ಬಂಧ ಹಲವರನ್ನು ಮೂಲೆಗುಂಪಾಗಿಸಿದಂತೆ ನಮ್ಮ ಗಟ್ಟಿಯವರೂ ನಿಶ್ಚೇತನರಾಗುತ್ತಾ ನಡೆದರು. ನನ್ನ ಸಾಹಿತ್ಯ ಸ್ನೇಹ ಬಂಧ, ನನ್ನೆಲ್ಲ ಸಾಧನೆಗಳಿಗೆ ಮೂಲಾಧಾರವಾಗಿದ್ದ ಅವರ ಅಗಲಿಕೆ ನನ್ನ ಪಾಲಿಗಂತೂ ತುಂಬಲಾರದ ನಷ್ಟ.
ಗಟ್ಟಿಯವರು ನಮ್ಮ ಸಾಹಿತ್ಯ ಕ್ಷೇತ್ರದ ಅನರ್ಘ್ಯ ನಿಧಿ. ಅವರನ್ನು ಕನ್ನಡ ನಾಡು ಹೇಗೆ ಕಂಡಿತು ಎಂಬ ಬಗ್ಗೆ ಮಾತು ಅನಗತ್ಯ. ಅವರು ಅಂತಹ ವಿಚಾರಗಳಿಗೆ ಹೊರತಾಗಿ ಬದುಕಿದವರು. ಕೇವಲ ಸಾಹಿತ್ಯವನ್ನೇ ಕೊನೆವರೆಗೂ ಉಸಿರಾಡಿ ಇಲ್ಲಿಂದ ಹೊರಟವರು. ಆದರೆ ಅವರ ಸಾಹಿತ್ಯ ಕೃತಿಗಳು, ವಿಚಾರಧಾರೆ ಮೂಲಕ ಸಾಹಿತ್ಯಾಸಕ್ತರೆಲ್ಲರ ಹೃದಯಗಳಲ್ಲಿ ಸದಾ ಜ್ವಲಂತರಾಗಿರುವವರು. ಅದರಲ್ಲಿ ಎರಡು ಮಾತಿಲ್ಲ.

ಶ್ಯಾಮಲಾ ಮಾಧವ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.