Ranji League:: ಕರ್ನಾಟಕ-ಚಂಡೀಗಢ ಪಂದ್ಯ ಡ್ರಾ
ದ್ವಿತೀಯ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ತಲುಪಿದ ರಾಜ್ಯ ತಂಡ
Team Udayavani, Feb 19, 2024, 10:54 PM IST
ಹುಬ್ಬಳ್ಳಿ: ಕರ್ನಾಟಕ ಮತ್ತು ಚಂಡೀಗಢ ನಡುವಿನ ಕೊನೆಯ ರಣಜಿ ಲೀಗ್ ಪಂದ್ಯ ಡ್ರಾಗೊಂಡಿದೆ. ಇದ ರೊಂದಿಗೆ ಕರ್ನಾಟಕ “ಸಿ’ ವಿಭಾಗದ ದ್ವಿತೀಯ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು (27 ಅಂಕ). ಅಗ್ರಸ್ಥಾನಿಯಾದ ತಮಿಳುನಾಡು 7 ವರ್ಷಗಳ ತರುವಾಯ ರಣಜಿ ನಾಕೌಟ್ ಹಂತ ತಲುಪಿತು (28 ಅಂಕ).
“ಸಿ’ ವಿಭಾಗದಿಂದ ಹೊರಬಿದ್ದ ಇತರ ತಂಡಗಳೆಂದರೆ ಗುಜರಾತ್ (25), ರೈಲ್ವೇಸ್ (24), ತ್ರಿಪುರ (17), ಪಂಜಾಬ್ (11), ಚಂಡೀಗಢ (6) ಮತ್ತು ಗೋವಾ (4).ಫೆ. 23ರಂದು ಕ್ವಾರ್ಟರ್ ಫೈನಲ್ಸ್ ಆರಂಭವಾಗಲಿದ್ದು, ಕರ್ನಾಟಕ “ಎ’ ವಿಭಾಗದ ಅಗ್ರಸ್ಥಾನಿ ವಿದರ್ಭವನ್ನು ಎದುರಿಸಲಿದೆ. ಉಳಿದ ಪಂದ್ಯಗಳಲ್ಲಿ ಮಧ್ಯ ಪ್ರದೇಶ- ಆಂಧ್ರಪ್ರದೇಶ, ಮುಂಬಯಿ -ಬರೋಡ, ತಮಿಳುನಾಡು -ಸೌರಾಷ್ಟ್ರ ಮುಖಾಮುಖಿ ಆಗಲಿವೆ.
ಬ್ಯಾಟಿಂಗ್ ಹೋರಾಟ
296 ರನ್ನುಗಳ ಮೊದಲ ಇನ್ನಿಂಗ್ಸ್ ಹಿನ್ನಡೆಗೆ ಸಿಲುಕಿದ್ದ ಚಂಡೀಗಢ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಹೋರಾಟ ನಡೆಸಿತು. ಪಂದ್ಯ ಕೊನೆಗೊಳ್ಳುವಾಗ 5 ವಿಕೆಟಿಗೆ 236 ರನ್ ಮಾಡಿತ್ತು. ವಿಕೆಟ್ ನಷ್ಟವಿಲ್ಲದೆ 61 ರನ್ ಮಾಡಿದಲ್ಲಿಂದ ಚಂಡೀಗಢ ಅಂತಿಮ ದಿನದ ಆಟ ಮುಂದುವರಿಸಿತ್ತು.
ಇದೇ ಮೊತ್ತಕ್ಕೆ ಶಿವಂ ಭಾಂಬ್ರಿ (33) ವಿಕೆಟ್ ಬಿತ್ತು. ದ್ವಿತೀಯ ವಿಕೆಟಿಗೆ ಮತ್ತೆ 61 ರನ್ ಒಟ್ಟುಗೂಡಿತು. ಆಗ ನಾಯಕ ಮನನ್ ವೋಹ್ರಾ (23) ಪೆವಿಲಿಯನ್ ಸೇರಿಕೊಂಡರು. ಎರಡೂ ವಿಕೆಟ್ ಶಶಿಕುಮಾರ್ ಪಾಲಾಯಿತು. 122ರ ಮೊತ್ತ ದಲ್ಲೇ ಆರಂಭಕಾರ ಅಸ್ಲಾನ್ ಖಾನ್ ಕೌಶಿಕ್‌ಗೆ ಲೆಗ್ ಬಿಫೋರ್ ಆದರು. ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಅಸ್ಲಾìನ್ ಗಳಿಕೆ 63 ರನ್. ಇವರದು ಚಂಡೀಗಢ ಸರದಿಯ ಟಾಪ್ ಸ್ಕೋರ್ ಆಗಿತ್ತು.
ಐದೇ ರನ್ ಅಂತರದಲ್ಲಿ ಕುಣಾಲ್ ಮಹಾಜನ್ (1) ವಿಕೆಟ್ ಕಿತ್ತ ವಿ. ಕೌಶಿಕ್ ಕರ್ನಾಟಕದ ಗೆಲುವಿನ ಆಸೆಯನ್ನು ಚಿಗುರಿಸಿದರು. ಆಗ ಚಂಡೀಗಢ 127ಕ್ಕೆ 4 ವಿಕೆಟ್ ಕಳೆದುಕೊಂಡಿತ್ತು.
ಆದರೆ ಅಂಕಿತ್ ಕೌಶಿಕ್ (56 ಎಸೆತಗಳಿಂದ 15), ಕೀಪರ್ ಮಾಯಾಂಕ್ ಸಿಧು (ಔಟಾಗದೆ 56) ಮತ್ತು ಕರಣ್ ಕೈಲ (ಔಟಾಗದೆ 25) ರಕ್ಷಣಾತ್ಮಕ ಆಟಕ್ಕೆ ಮುಂದಾಗುವುದರೊಂದಿಗೆ ಕರ್ನಾಟಕದ ಗೆಲುವಿನ ಯೋಜನೆ ವಿಫಲಗೊಂಡಿತು.
ಸಂಕ್ಷಿಪ್ತ ಸ್ಕೋರ್: ಚಂಡೀಗಢ-267 ಮತ್ತು 5 ವಿಕೆಟಿಗೆ 236 (ಅಸ್ಲಾìನ್ ಖಾನ್ 63, ಮಾಯಾಂಕ್ ಸಿಧು ಔಟಾಗದೆ 56, ಶಿವಂ ಭಾಂಬ್ರಿ 33, ಕರಣ್ ಕೈಲ ಔಟಾಗದೆ 25, ಮನನ್ ವೋಹ್ರಾ 23, ವಿ. ಕೌಶಿಕ್ 26ಕ್ಕೆ 2, ಶಶಿಕುಮಾರ್ ಕೆ. 55ಕ್ಕೆ 2).
ಕ್ವಾರ್ಟರ್ ಫೈನಲ್ಸ್
(ಫೆ. 23-27)
1. ಕರ್ನಾಟಕ-ವಿದರ್ಭ
2. ಮಧ್ಯಪ್ರದೇಶ-ಆಂಧ್ರಪ್ರದೇಶ
3. ಮುಂಬಯಿ-ಬರೋಡ
4. ತಮಿಳುನಾಡು-ಸೌರಾಷ್ಟ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.