Rotterdam ಓಪನ್ ಚಾಂಪಿಯನ್: ಜಾನಿಕ್ ಸಿನ್ನರ್ಗೆ ಮತ್ತೊಂದು ಪ್ರಶಸ್ತಿ
Team Udayavani, Feb 20, 2024, 5:05 AM IST
ರೋಟರ್ಡ್ಯಾಮ್: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜಾನಿಕ್ ಸಿನ್ನರ್ ಪ್ರಸಕ್ತ ಸೀಸನ್ನಲ್ಲಿ ಮತ್ತೂಂದು ಪ್ರಶಸ್ತಿಯೊಂದಿಗೆ ತಮ್ಮ ಫಾರ್ಮ್ ತೆರೆದಿರಿಸಿದ್ದಾರೆ. ಅವರು ಮೊದಲ ಬಾರಿಗೆ “ರೋಟರ್ಡ್ಯಾಮ್ ಓಪನ್’ ಟೆನಿಸ್ ಚಾಂಪಿಯನ್ ಆಗಿ ಮೂಡಿಬಂದರು.
ಹೈ ಕ್ವಾಲಿಟಿ ಫೈನಲ್ನಲ್ಲಿ ಇಟಲಿಯ ಜಾನಿಕ್ ಸಿನ್ನರ್ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ವಿರುದ್ಧ 7-5, 6-4 ಅಂತರದ ಗೆಲುವು ಸಾಧಿಸಿದರು. ಇದು ಅವರ ಸತತ 15ನೇ ಗೆಲುವು. ಇದರೊಂದಿಗೆ ಜೀವನಶ್ರೇಷ್ಠ 3ನೇ ರ್ಯಾಂಕಿಂಗ್ ಅಲಂಕರಿಸಿದರು.
ಕಳೆದ 6 ಪಂದ್ಯಗಳಲ್ಲೂ ಸಿನ್ನರ್ ವಿರುದ್ಧ ಸೋಲನ್ನೇ ಕಂಡಿದ್ದ ಡಿ ಮಿನೌರ್, ಇಲ್ಲಿ ಮೊದಲ ಸೆಟ್ನಲ್ಲಿ ಗೆಲುವಿನ ಸೂಚನೆ ನೀಡಿದ್ದರು. ಆದರೆ ಇವರಿಗೆ ರಕ್ಷಣಾತ್ಮಕ ಆಟ ಮುಳುವಾಯಿತು. ಸಿನ್ನರ್ ಹೆಚ್ಚು ಆಕ್ರಮಣಕಾರಿಯಾಗಿ ರ್ಯಾಕೆಟ್ ಬೀಸುತ್ತ ಮುನ್ನುಗ್ಗಿದರು.
ಸಿನ್ನರ್ಗೆ ಕ್ವಾರ್ಟರ್ ಫೈನಲ್ನಲ್ಲಿ ವಾಕ್ ಓವರ್ ಲಭಿಸಿತ್ತು. ಕೆನಡಾದ ಹಿರಿಯ ಆಟಗಾರ ಮಿಲೋಸ್ ರಾನಿಕ್ ಗಾಯಾಳಾಗಿ ಹಿಂದೆ ಸರಿದಿದ್ದರು. ಸೆಮಿಫೈನಲ್ನಲ್ಲಿ ಸ್ಥಳೀಯ ಆಟಗಾರ ಟ್ಯಾಲನ್ ಗ್ರೀಕ್ಸ್ಪೂರ್ ಅವರನ್ನು ಮಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Congress-NC ಮೈತ್ರಿಗೆ ಪಾಕ್ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
High Court: ಬಾಂಬ್ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್ ರದ್ದು
15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿನ್ ಸನಿಲ್ ಕುರ್ಕಾಲು
Commonwealth ಚಾಂಪಿಯನ್ಶಿಪ್ : ಅಲ್ಲುರಿ ಅಜಯ್ಗೆ ಬಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.