World TT: ಭಾರತಕ್ಕೆ ಮಿಶ್ರ ಫಲ
Team Udayavani, Feb 19, 2024, 11:31 PM IST
ಬುಸಾನ್ (ದಕ್ಷಿಣ ಕೊರಿಯಾ): ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಮಿಶ್ರ ಫಲ ಅನುಭವಿಸಿದೆ. ವನಿತಾ ತಂಡ ಉಜ್ಬೆಕಿಸ್ಥಾನವನ್ನು ಮಣಿಸುವಲ್ಲಿ ಯಶಸ್ವಿಯಾದರೆ, ಪುರುಷರ ತಂಡ ಆತಿಥೇಯ ದಕ್ಷಿಣ ಕೊರಿಯಾಕ್ಕೆ ಶರಣಾಯಿತು.
ಚೀನಕ್ಕೆ 2-3 ಅಂತರದಿಂದ ಸೋತ ಬಳಿಕ ಲಯ ಕಂಡುಕೊಂಡ ಭಾರತದ ವನಿತೆಯರು ಹಂಗೇರಿಯನ್ನು 3-2ರಿಂದ ಮಣಿಸಿದ್ದರು. ಇದೀಗ ಉಜ್ಬೆಕಿಸ್ಥಾನಕ್ಕೆ 3-0 ಸೋಲುಣಿಸಿದರು. ಐಹಿಕಾ ಮುಖರ್ಜಿ ಮತ್ತು ಶ್ರೀಜಾ ಅಕುಲಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇವರ ಬದಲು ಅರ್ಚನಾ ಕಾಮತ್ ಮತ್ತು ದಿಯಾ ಚಿತಾಲೆ ಆಡಲಿಳಿದರು. ಇಬ್ಬರೂ ಸಿಂಗಲ್ಸ್ ಜಯಿಸಿದರು. ಇನ್ನೊಂದು ಗೆಲುವನ್ನು ತಂದಿತ್ತವರು ಮಣಿಕಾ ಬಾತ್ರಾ.
ಅರ್ಚನಾ ಕಾಮತ್ 11-7, 11-3, 11-6ರಿಂದ ರಿಮ್ನಾ ಗುಫÅನೋವ್ ಅವರನ್ನು ಮಣಿಸಿದರು. ಮಣಿಕಾ ಬಾತ್ರಾ 11-7, 11-4, 11-1 ಅಂತರದಿಂದ ಮರ್ಖಾಬೊ ಮ್ಯಾಗಿxàವಾ ಅವರನ್ನು ಕೆಡವಿದರು. ದಿಯಾ 4 ಗೇಮ್ಗಳ ಹೋರಾಟದಲ್ಲಿ ರೋಜಾಲಿನಾ ಖಜೀವಾ ಅವರನ್ನು ಹಿಮ್ಮೆಟ್ಟಿಸಲು ಯಶಸ್ವಿಯಾದರು. ಅಂತರ 11-6, 10-12, 11-4, 11-6. ವನಿತಾ ತಂಡವಿನ್ನು ಸ್ಪೇನ್ ವಿರುದ್ಧ ಆಡಲಿದೆ.
ಪುರುಷರಿಗೆ ಆಘಾತ
ಅನುಭವಿ ಆಟಗಾರ ಅಚಂತ ಶರತ್ ಕಮಲ್, ಹಾಲಿ ರಾಷ್ಟ್ರೀಯ ಚಾಂಪಿಯನ್ ಹರ್ಮೀತ್ ದೇಸಾಯಿ ಹಾಗೂ ಜಿ. ಸಥಿಯನ್ ಅವರನ್ನೊಳಗೊಂಡ ಭಾರತದ ಪುರುಷರ ತಂಡ ಆತಿಥೇಯರ ಸವಾಲನ್ನು ಮೆಟ್ಟಿ ನಿಲ್ಲಲು ವಿಫಲವಾಯಿತು. ಮೂವರೂ ಸೋಲನುಭವಿಸಿದರು.
ಆರಂಭಿಕ ಪಂದ್ಯದಲ್ಲಿ ಚಿಲಿಯನ್ನು ಮಣಿಸಿದ್ದ ಭಾರತದ ಪುರುಷರ ತಂಡ, ಬಳಿಕ ಪೋಲೆಂಡ್ಗೆ 1-3ರಿಂದ ಸೋತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.