Ujire; ಆ್ಯಸಿಡ್ ದಾಳಿ ಪ್ರಕರಣ: 29 ವರ್ಷ ಬಳಿಕ ಆರೋಪಿ ಖುಲಾಸೆ
Team Udayavani, Feb 20, 2024, 12:04 AM IST
ಬೆಳ್ತಂಗಡಿ: ಉಜಿರೆಯಲ್ಲಿ 1995ರ ಸೆಪ್ಟಂಬರ್ 27ರಂದು ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ.
ಉಜಿರೆ ಗ್ರಾಮದ ನಿವಾಸಿ ಮಂಜುನಾಥ್ ಪ್ರಭು ಅವರ ಮಗ ಗಣೇಶ್ ಪ್ರಭು ಅವರ ಮಾಲಕತ್ವದ ಬಾಡಿಗೆ ಮನೆಯಲ್ಲಿ ಪ್ರಕರಣ ಆರೋಪಿ ಶಂಕರ ಗೌಡ ಯಾನೇ ವೀರಪ್ಪ ಗೌಡ ಬಾಡಿಗೆ ನೆಲೆಯಲ್ಲಿ ವಾಸ್ತವ್ಯ ಇದ್ದು, ಆರೋಪಿತನ ಪತ್ನಿ ಗಣೇಶ್ ಪ್ರಭುವಿನ ಮನೆಯಲ್ಲಿ ಮನೆಗೆಲಸ ಮಾಡುತ್ತ ಜೀವಿಸುತ್ತಿದ್ದರು. ಅನಂತರ ಆಕೆಯನ್ನು ಕೆಲಸದಿಂದ ತೆಗೆದುಹಾಕಿದ ಪೂರ್ವದ್ವೇಷದ ಕಾರಣಕ್ಕಾಗಿ ಆರೋಪಿಯು ಗಣೇಶ್ ಪ್ರಭುವಿನ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ಎನ್ನಲಾಗಿದೆ.
ಆರೋಪಿ ಶಂಕರ ಗೌಡ ಯಾನೇ ಶ್ರೀಧರ ಗೌಡ ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ದೀರ್ಘಕಾಲದ ಸಾಕ್ಷ್ಯ ವಿಚಾರಣೆಯು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆದಿದ್ದು, ಇದೀಗ ಆರೋಪಿ ದೋಷಮುಕ್ತನಾಗಿದ್ದಾನೆ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: ಪೊಲೀಸರಿಂದ 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, ಎರಡು ಕಾರು ವಶಕ್ಕೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.