UV Fusion: ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ…


Team Udayavani, Feb 20, 2024, 1:16 PM IST

9-uv-fusion

ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಿರುದ್ಯೋಗ, ಬಡತನ ಅದು ಇದು ಅಂತ ಪಟ್ಟಿ ಎಷ್ಟುದ್ದಕ್ಕೆ ಬೇಕಾದರೂ ಬೆಳೆಯುತ್ತೆ. ಆದರೆ ಹೆಚ್ಚಿನ ಯುವ ಜನರ ಸಮಸ್ಯೆ ಯಾವುದು ಹೇಳಿ ನೋಡೋಣ? ಬ್ರೇಕ್‌ ಅಪ್‌! ಅವರು ಮಾತಾಡಿಸುತ್ತಿಲ್ಲ, ಇವರೂ ಮಾತಾಡಿಸುತ್ತಿಲ್ಲ, ಒಂಟಿತನ ಇಂತಹವೇ. ಯಾಕೆ ಹೀಗೆ ಅಂತೀರಾ? ಯಾಕಂದ್ರೆ ಕೆಲವೊಂದು ಸರಳ ವಿಷಯಗಳು ಸರಳವಾಗಿ ತಲೆಗೆ ಹೋಗಲ್ಲ.

ಇಲ್ಯಾರು ಪರಿಪೂರ್ಣರಲ್ಲ. ಎಲ್ಲರಿಗೂ ಅವರವರದ್ದೇ ಆದ ಒಳ್ಳೆಯ ಕೆಟ್ಟ ಗುಣಗಳೆರಡೂ ಇರುತ್ತವೆ. ಒಳ್ಳೆಯ ಅಥವಾ ಕೆಟ್ಟ ಎನ್ನುವುದಕ್ಕಿಂತ ಧನಾತ್ಮಕ ಮತ್ತು ಋಣಾತ್ಮಕ ಇಲ್ಲವೇ ಶಕ್ತಿ ಮತ್ತು ಬಲಹೀನತೆಗಳಿವೆ ಎನ್ನಬಹುದೇನೋ. ಹಳೆಯ ಹಾಡಿನ ಸಾಲೊಂದಿದೆಯಲ್ಲ “ಒಂದೇ ಗಿಡದಿ ಹೂವು ಮುಳ್ಳು ಇರುವಂತೆ ಒಂದೇ ಮನದಿ ಎರಡು ಗುಣವು ಇರುವುದಂತೆ’ ಅಂತ ಹಾಗೆಯೇ ಇದು ಕೂಡ. ಸೀಬೆಯ ಗಿಡದಲ್ಲಿ ಸೇಬು ಬೆಳೆಯಬೇಕು ಎಂದರೆ? ಅದು ಸಾಧ್ಯವಿರಬಹುದು.

ಆದರೆ ಪ್ರಕೃತಿಯ ನಿಯಮಕ್ಕೆ ಅದೆಷ್ಟು ಸಹ್ಯ? ಅಂತೆಯೇ ಎಲ್ಲರ ಆಲೋಚನೆಗಳು, ಆಕಾರ, ನಡೆ, ನುಡಿ ಎಲ್ಲವೂ ವಿಭಿನ್ನವೇ. ಅದನ್ನು ಒಪ್ಪಿಕೊಳ್ಳುವ ಭಾವ ನಮ್ಮೆಲ್ಲರಲ್ಲಿ ಬರಬೇಕು. ಇನ್ನೊಬ್ಬರ ನಡೆ ನುಡಿ, ವೇಷ ಭೂಷಣ, ಆಯ್ಕೆ, ನಂಬಿಕೆಗಳನ್ನು ಆಡಿಕೊಂಡು ನಗಲು ನಾವೆಷ್ಟು ಅರ್ಹರು?ಅವರು ಸ್ನೇಹಿತರಿರಲಿ ಅಪರಿಚಿತರಿರಲಿ ಇನ್ನೊಬ್ಬರನ್ನು ಅಳೆಯುವ ಕೆಳಮಟ್ಟಕ್ಕೆ ನಾವಿಳಿಯುವುದು ಉಚಿತವಲ್ಲವೇನೋ. ಇದನ್ನು ಕೆಲವರು ಅರ್ಥಮಾಡಿಕೊಳ್ಳಬೇಕು.

ಇದಕ್ಕಿಂತಲೂ ಬಹುಮುಖ್ಯವಾದ ವಿಷಯ ವೇನೆಂದರೆ ಏಕೆ ನಮ್ಮನ್ನು ನಾವು ಯಾವಾಗಲೂ ಅಮುಖ್ಯರಾಗೇ ನೋಡುತ್ತೇವೆ? ನಮ್ಮ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವೇಕೆ ಹಿಂದೆ ಬೀಳುತ್ತೇವೆ? ಕಾರಣ ಇಷ್ಟೇ. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’.

ಅವರಷ್ಟು ಸಿರಿವಂತರಾಗಿ ನಾವೇಕಿಲ್ಲ? ಅವರಪ್ಪ ಅಮ್ಮನ ರೀತಿ ನಮ್ಮವರು ನಮಗ್ಯಾಕೆ ಸೌಲಭ್ಯ ಕೊಟ್ಟಿಲ್ಲ? ಇದೆಲ್ಲ ಒಂದು ರೀತಿಯದ್ದಾದರೆ ಇನ್ನೊಂದಿದೆ ನಮ್ಮನ್ನು ಪ್ರೀತಿಸುವ ಗೌರವಿಸುವ ಒಂದಷ್ಟು ಹೃದಯಗಳನ್ನು ನಾವು ಗುರುತಿಸುವುದೇ ಇಲ್ಲ. ಯಾವಾಗಲೂ ನಮ್ಮನ್ನು ಕಡೆಗಣಿಸುವವರ ಹಿಂದೆಯೇ ಓಡಿ ಓಡಿ ಮತ್ತೆ ಅವರೇ ಸರ್ವಸ್ವವೆನ್ನುವಂತೆ ವರ್ತಿಸಿ ಕೊನೆಗೆ ಅವರು ತಿರುಗಿಯೂ ನೋಡದಾಗ ಹತಾಶೆಯಿಂದ ಅದಕ್ಕೂ ನಮ್ಮನ್ನು ನಾವೇ ಹೊಣೆಯಾಗಿಸಿಕೊಳ್ಳುವುದು! ಅದ್ಯಾಕೆ ಹಾಗೆ? ನಾವು ಅಂದರೆ ನಾವೆಲ್ಲರೂ ಹಾಗಂತಲ್ಲ ಹಲವರು ಅಥವಾ ಕೆಲವರು ಅವರನ್ನು ನಮ್ಮವರೆಂದೇ ಬಗೆದು ಹೇಳುತ್ತಿರುವೆನಷ್ಟೆ.

ಯಾವಾಗಲೂ ಇನ್ನೊಬ್ಬರ ಸ್ನೇಹ ಪ್ರೀತಿ ಹಂಬಲದಲ್ಲಿ ಬಿದ್ದು ಒದ್ದಾಡುವವರು ನಮ್ಮನ್ನು ನಿಜವಾಗಿ ಆತ್ಮೀಯರೆಂದು ಬಗೆಯುವ ಮನಸ್ಸುಗಳನ್ನು ಗೌರವಿಸೋದೇ ಇಲ್ಲ. ಯಾರದೋ ಹಿಂದೆ ಅಥವಾ ಯಾವುದೋ ವಸ್ತುವಿನ ಹಿಂದೆ, ಆಸೆಯ ಹಿಂದೆ ಓಡುತ್ತಾ ನಮ್ಮನ್ನೇ ಅರಸುತ್ತಾ ಅನುಸರಿಸುತ್ತಾ ಬಂದ ವ್ಯಕ್ತಿ, ವಸ್ತು, ಮನಸ್ಸು, ಕನಸುಗಳನ್ನು ಒಮ್ಮೆ ನಿಂತು ಮಾತಾಡಿಸಿ, ನಾವೂ ಇಷ್ಟೆಲ್ಲಕ್ಕೂ ಅರ್ಹರೆಂಬ ಭಾವದಿಂದ ಒಪ್ಪಿ ಅಪ್ಪಿ ಇರುವುದರೊಂದಿಗೆ ನಮ್ಮೊಂದಿಗೆ ನಿಜವಾಗಿ ಬರುವುದರೊಂದಿಗೆ ಮುನ್ನಡೆಯಬಹುದಲ್ವಾ?

ಬದುಕಿನಲ್ಲಿ ಈ ಸರಳ ಸೂತ್ರವನ್ನೊಮ್ಮೆ ಅನುಸರಿಸಿ ನೋಡೋಣ. ನಮ್ಮ ವರ್ತನೆ, ಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಆದರೂ ಮತ್ತೆ ಮತ್ತೆ ನಿಮ್ಮ ಮಾತಿಗೆ ಹಾರೈಸುವ ಜೀವಗಳನ್ನು ಪಡೆಯುವುದು ಸಾಮಾನ್ಯ ವಿಷಯವೇ? ಮತ್ತೆ ಹೇಳಬೇಡಿ ಅಂತವರು ಯಾರೂ ನನ್ನ ಬದುಕಲ್ಲಿ ಇಲ್ಲ ಅಂತ. ಇಲ್ಲದೇ ಅಲ್ಲ ನೀವು ಗುರುತಿಸಿಲ್ಲ ಅಷ್ಟೇ.

ಅಕ್ಕರೆ ತೋರಿಸುವ ಅಪ್ಪ ಅಮ್ಮ ಅಕ್ಕ ತಮ್ಮ ಇರಬಹುದು, ಇಲ್ಲ ಸ್ನೇಹಿತರಿರಬಹುದು ಅದೂ ಇಲ್ಲ ನಿಮ್ಮ ದಾರಿಯನ್ನೇ ಕಾಯುವ ಸಾಕು ಪ್ರಾಣಿಯೊಂದಿರ ಬಹುದು ಗಮನಿಸುವ ಗುರುತಿಸುವ ತಾಳ್ಮೆ ಜಾಣ್ಮೆ ನಮಗಿರಬೇಕಷ್ಟೆ.

-ಶರತ್‌ ಶೆಟ್ಟಿ ,

ವಂಡ್ಸೆ

ಟಾಪ್ ನ್ಯೂಸ್

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.