UV Fusion: ಲೋಪವಿರುವುದು ಅಭ್ಯರ್ಥಿಗಳಲ್ಲೋ ಅಧಿಕಾರಿಗಳಲ್ಲೋ?
Team Udayavani, Feb 22, 2024, 8:00 AM IST
ಎಂದಿನಂತೆ ಮುಂಜಾನೆ ಪತ್ರಿಕೆಯನ್ನು ಓದುತ್ತಿರುವಾಗ ನಾಲ್ಕನೇ ಪುಟದ ಬಲ ಭಾಗದಲ್ಲಿದ್ದ ಸುದ್ದಿಯೊಂದು ಬಲವಾಗಿ ನನ್ನನ್ನು ಕಾಡಿತ್ತು. ಆ ಸುದ್ದಿ ಪಿಎಸ್‌ಐ ಪರೀಕ್ಷೆಗೆ ಡ್ರೆಸ್ ಕೋಡ್ ಎಂಬ ಶೀರ್ಷಿಕೆಯಲ್ಲಿತ್ತು. ಹಲವು ತಿರುವುಗಳ ಬಳಿಕ ಜನವರಿ 23ರಂದು ನಡೆಯಲಿರುವ ಸಬ್ ಇನ್‌ಸ್ಪೆಕ್ಟರ್ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆಇಎ ಡ್ರೆಸ್ ಕೋಡ್ ಬಿಡುಗಡೆ ಮಾಡಿದೆ.
ಈ ಸುದ್ದಿ ಉದ್ದಕ್ಕೂ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಧರಿಸಬಹುದಾದ ಉಡುಗೆ – ತೊಡುಗೆಗಳ ವಿವರಣೆಯನ್ನು ಸಾಲು ಸಾಲಾಗಿ ನೀಡಲಾಗಿತ್ತು. ಕುಡಿಯುವ ನೀರಿನ ಬಾಟಲಿ ತರುವುದು ನಿಷೇಧದಿಂದ ಹಿಡಿದು ದೊಡ್ಡ ಬಟನ್ ಬಟ್ಟೆಗಳನ್ನು ಧರಿಸಬಾರದು ಎಂಬ ಸೂಕ್ಷ್ಮ ಸಂಗತಿಯವರೆಗೂ ನೀತಿ ನಿಯಮಗಳನ್ನು ಕೊಡಲಾಗಿತ್ತು.
ಈ ಹತ್ತಾರು ಶರತ್ತುಗಳನ್ನು ಓದಿದ ಬಳಿಕ ನನ್ನಲ್ಲಿ ಮೂಡಿದ ಸಂಶಯವೆಂದರೆ ಕೆಇಎ ಪ್ರತೀ ಪರೀಕ್ಷೆಯಲ್ಲೂ ಇಂತಹ ಸೂಚನೆಗಳು ಇರುವುದು ಹೊಸತೇನಲ್ಲ, ಎಲ್ಲ ಪರೀಕ್ಷೆಗಳನ್ನು ಎಂದಿನಂತೆ ಸಹಜ. ಆದರೆ ಕಳೆದ ಬಾರಿ ನಡೆದ ಪಿಎಸ್‌ಐ ಪರೀಕ್ಷೆಯಲ್ಲಿ ಈ ನಿಯಮಾವಳಿಗಳು ಇರಲಿಲ್ಲವೇ?, ಇದ್ದರೂ ಪರೀಕ್ಷಾ ಪ್ರಾಧಿಕಾರದವರು ಗಮನಿಸಲಿಲ್ಲವೇ?, ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕೆಮರಾಗಳು ಇರಲಿಲ್ಲವೇ, ಇದ್ದರೂ ಅದನ್ನು ಪರಿಶೀಲನೆಗೆ ಒಳಪಡಿಸಲಿಲ್ಲವೇ? ಕಳೆದ ಬಾರಿಯೂ ಪರೀಕ್ಷೆ ಸಮೀಪಿಸುತ್ತಿದ್ದಂತೆ ಇಲಾಖೆ ಇದೇ ರೀತಿಯ ಸುತ್ತೋಲೆಯನ್ನು ಹೊರಡಿಸಿರಲಿಲ್ಲವೇ? ಇಷ್ಟೆಲ್ಲಾ ಕಟ್ಟುನಿಟ್ಟಿನ ಪಾಲನೆಗಳು ಯಶಸ್ವಿಯಾಗಿದ್ದರೆ ಅಕ್ರಮ ಎಲ್ಲಿ ಮತ್ತು ಹೇಗೆ ನಡೆದವು ಎಂದು.
ರಾಜ್ಯದ ಕಾನೂನು ಸುವ್ಯವಸ್ಥೆಗಳ ರಕ್ಷಣೆಗೆ ಬೆನ್ನೆಲುಬಾಗಿರಬೇಕಿರುವ ಆರಕ್ಷಕರ ಪರೀಕ್ಷೆಗಳಿಗೆ ರಕ್ಷಣೆ ಇಲ್ಲದಂತಾಯಿತಾ! ಸಾವಿರಾರು ವರಿಷ್ಠ ಅಧಿಕಾರಿಗಳಿರುವ ಸರಕಾರದ ಇಲಾಖೆಗಳಿಗೆ ಒಂದು ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗಲಿಲ್ಲವೆ? ಅಕ್ರಮಗಳ ಹಿಂದೆ ಅಧಿಕಾರಿಗಳೇ ಶಾಮೀಳಾಗಿರುವರೇ…?
ಒಟ್ಟಾರೆಯಾಗಿ ಕೆಇಎನ ಪರೀಕ್ಷೆಗಳಲ್ಲಿ ಈ ಮಟ್ಟದ ಅಕ್ರಮಗಳು ನಡೆಯಲು ಲೋಪವಿರುವುದು ಅಭ್ಯರ್ಥಿಗಳಲ್ಲೋ ಅಥವಾ ಅಧಿಕಾರಿಗಳಲ್ಲೋ ಎಂಬ ಸಂಶಯ ಎಲ್ಲರಲ್ಲೂ ಮನೆ ಮಾಡಿದೆ. ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಸರಕಾರವು ಸೇರಿದಂತೆ ಕೆಇಎನ ಕಾರ್ಯನಿರ್ವಾಹಕ ನಿರ್ದೇಶಕರು ತನ್ನ ಇಲಾಖೆಯ ಅಧಿಕಾರಿಗಳಿಗೆ ಯಾವ ರೀತಿಯ ನಿಯಮಗಳನ್ನು ಬೋಧಿಸಿದೆ?
ಈ ವರೆಗೆ ಅಕ್ರಮ ಎಸಗಿದ ಎಷ್ಟು ಜನ ಅಧಿಕಾರಿಗಳಿಗೆ ಕ್ರಮ ಜರುಗಿಸಿದೆ. ಆಯ್ಕೆ ಪ್ರಕ್ರಿಯೆಗಳಲ್ಲಿ ಯಾವ ಮಟ್ಟಿನ ಪಾರದರ್ಶಕತೆಯನ್ನು ಪಾಲಿಸುತ್ತಿದೆ? ಅಭ್ಯರ್ಥಿಗಳಿಗೊಂದು ನ್ಯಾಯ ಅಧಿಕಾರಿಗಳಿಗೆ ಒಂದು ನ್ಯಾಯ. ಇದೇ ಕಾರಣಕಲ್ಲವೇ ಅಭ್ಯರ್ಥಿಗಳು ಇಲಾಖೆಯ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳುವುದು. ಇಂತಹ ಹತ್ತಾರು ಪ್ರಶ್ನೆಗಳು ನನ್ನಂಥ ಸಾವಿರಾರು ಅಭ್ಯರ್ಥಿಗಳಿಗೆ ಕಾಡಿದೆ ಎಂಬುದು ನನ್ನ ನಂಬಿಕೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದಕ್ಕೆ ಉತ್ತರವನ್ನು ನೀಡಬೇಕು. ನೂರಾರು ನೀತಿ ನಿಯಮಗಳನ್ನು ಅಭ್ಯರ್ಥಿಗಳ ಮೇಲೇರಿ ಹಿಂಸಿಸುವ ಬದಲು ಅಕ್ರಮ ಎಸಗುವ ಇಲಾಖೆಯ ಅಧಿಕಾರಿಗಳಿಗೆ ಕಠಿನವಾಗಿ ಶಿಕ್ಷೆಯಾಗಬೇಕು. ಅಂತಿಮವಾಗಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆದು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಫಲ ಶ್ರುತಿ ಆಗುವಂತೆ ಮಾಡಬೇಕು.
ಅರವಿಂದ
ಎಸ್.ಡಿ.ಎಂ. ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.