Telangana: 18 ವರ್ಷಗಳ ಕಾಲ ದುಬೈ ಜೈಲಿನಲ್ಲಿದ್ದ ಐವರು ಭಾರತೀಯರು ಕೊನೆಗೂ ಮರಳಿ ತವರಿಗೆ
Team Udayavani, Feb 21, 2024, 12:57 PM IST
ಹೈದರಾಬಾದ್: ಕೊಲೆ ಪ್ರಕರಣವೊಂದರಲ್ಲಿ ದುಬೈನಲ್ಲಿ ಕಳೆದ 18 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿ ಸ್ವದೇಶಕ್ಕೆ ಮರಳಿ ಕುಟುಂಬದವರನ್ನು ಭೇಟಿಯಾಗಿರುವ ಭಾವುಕ ಕ್ಷಣಕ್ಕೆ ಬುಧವಾರ(ಫೆ.21 ರಂದು) ಹೈದರಾಬಾದ್ ವಿಮಾನ ನಿಲ್ದಾಣ ಸಾಕ್ಷಿಯಾಯಿತು.
ಏನಿದು ಘಟನೆ: ದುಬೈನಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಸಿರ್ಸಿಲ್ಲ ಜಿಲ್ಲೆಯ ಶಿವರಾತ್ರಿ ಮಲ್ಲೇಶ್, ಶಿವರಾತ್ರಿ ರವಿ, ಗೊಲ್ಲೆಂ ನಾಂಪಲ್ಲಿ, ದುಂದುಗುಲ ಲಕ್ಷ್ಮಣ್ ಮತ್ತು ಶಿವರಾತ್ರಿ ಹನುಮಂತು ಎಂಬವರು ನೇಪಾಳಿ ಪ್ರಜೆಯೊಬ್ಬರ ಸಾವಿನ ಪ್ರಕರಣದಲ್ಲಿ ದುಬೈ ಜೈಲಿನಲ್ಲಿ ಶಿಕ್ಷೆಗೆ ಒಳಗಾಗಿದ್ದರು.
ಅಕ್ಟೋಬರ್ 28, 2005, ವಿಸಿಟ್ ವೀಸಾದಲ್ಲಿ ಹನುಮಂತ್ ದುಬೈಗೆ ಹೋಗಿದ್ದರು. ಎರಡು ತಿಂಗಳು ಕೆಲಸ ಮಾಡಿದ ನಂತರ ಸ್ಥಳೀಯ ಪೊಲೀಸರು ಹನುಮಂತ್ ನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 10 ಜನರನ್ನು ಆರೋಪಿಗಳಾಗಿ ಬಂಧಿಸಲಾಗಿತ್ತು. ಇದರಲ್ಲಿ ಐವರು ತೆಲಂಗಾಣ ಮೂಲದವರು ಆಗಿದ್ದರು.
ಪ್ರಕರಣ ಸಂಬಂಧ 25 ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಲಾಗಿತ್ತು. ದುಬೈ ಕಾನೂನಿನ ಪ್ರಕಾರ ಮೃತರ ಕುಟುಂಬದ ಸದಸ್ಯರ ಬಳಿ ಕ್ಷಮೆಯಾಚಿಸಿ ಅವರು ಕ್ಷಮಿಸಿದರೆ ಅಪರಾಧಿಗಳನ್ನು ಬಿಡುಗಡೆ ಮಾಡಬಹುದಾಗಿದೆ. ಅದರಂತೆ ಅಪರಾಧಿಗಳ ಬಿಡುಗಡೆಗಾಗಿ 2011 ರಲ್ಲಿ 2011ರಲ್ಲಿ ಶಾಸಕ ಕೆಟಿಆರ್ ಅವರು ನೇಪಾಳದಲ್ಲಿ ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ 15 ಲಕ್ಷ ರೂ. ಚೆಕ್ ನ್ನು ನೀಡಿದ್ದರು.
ಕಳೆದ ವರ್ಷ ಐವರ ಕ್ಷಮಾದಾನ ಅರ್ಜಿಯನ್ನು ಅಂಗೀಕರಿಸುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರವನ್ನು ಕೆಟಿಆರ್ ಒತ್ತಾಯಿಸಿದರು. ಇದಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಲ್ಲಿ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.
ಅಂತಿಮವಾಗಿ ದುಬೈ ನ್ಯಾಯಾಲಯ ಕ್ಷಮಾದಾನ ನೀಡಿದ ಬಳಿಕ ಐವರನ್ನು ಬಿಡುಗಡೆ ಮಾಡಲಾಯಿತು. ಐವರು ತವರಿಗೆ ವಾಪಾಸ್ ಆಗಲು ಸ್ವತಃ ಕೆಟಿಆರ್ ಅವರೇ ಟಿಕೆಟ್ ಬುಕ್ ಮಾಡಿ ವಿಮಾನದ ವ್ಯವಸ್ಥೆ ಮಾಡಿದ್ದಾರೆ.
ಈ ವ್ಯಕ್ತಿಗಳು ಮನೆಗೆ ಬಂದಿರುವುದು ತುಂಬಾ ಸಂತೋಷವಾಗಿದೆ ಎಂದು ಕೆಟಿಆರ್ ʼಎಕ್ಸ್ʼ ನಲ್ಲಿ ಬರೆದುಕೊಂಡಿದ್ದಾರೆ.
Emotional Scenes witnessed at the RGIA #Hyderabad Airport:
The two men from Rajanna Sircilla dist, #Telangana, who were imprisoned in #Dubai for 18 years, have finally been reunited with their families with the help of former minister and #Sircilla MLA #KTR. pic.twitter.com/sVRAVp1JXd
— Surya Reddy (@jsuryareddy) February 21, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.