UV Fusion: ರೆಕ್ಕೆಯನ್ನು ನಂಬಿ ಕೊಂಬೆಯನ್ನಲ್ಲ…
Team Udayavani, Feb 22, 2024, 7:00 AM IST
ಮರದ ಕೊಂಬೆಯ ಮೇಲೆ ಕುಳಿತ ಹಕ್ಕಿಗೆ ಕೆಳಗೆ ಬೀಳುವ ಭಯವಿರದು, ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ. ಹಾಗೆಯೇ ನಮ್ಮ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇರಬೇಕು. ಹಾಗಿದ್ದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ.
ಕನಸು ಕಾಣುವುದು ತಪ್ಪಲ್ಲ. ಆ ಕನಸನ್ನು ನನಸಾಗಿಸುವ ಹಂತದಲ್ಲಿ ಸುಸ್ತಾಗಿ ಕೈ ಚೆಲ್ಲುವುದು, ತನ್ನಿಂದ ಸಾಧ್ಯವಿಲ್ಲ ಎಂಬ ಹಿಂಜರಿಕೆ ನಮ್ಮನ್ನು ಇನ್ನಷ್ಟು ಕುಬjರನ್ನಾಗಿಸುತ್ತದೆ. ಪ್ರತಿಯೋರ್ವ ಸಾಧಕನ ಹಿಂದೆಯೂ ಕನಸಿತ್ತು, ಗುರಿ ಬೆನ್ನತ್ತುವ ಹಠವಿತ್ತು, ಹಿಡಿದ ಕೆಲಸವನ್ನು ಪೂರೈಸಿಯೇ ತೀರುತ್ತೇನೆಂಬ ಅಪಾರ ವಿಶ್ವಾಸವೂ ಕೂಡ ಇತ್ತು. ಅಂತಹ ಸಾಧಕನ ಸ್ಫೂರ್ತಿ ಕತೆ ನಿಮ್ಮ ಬದುಕು ಬಂಗಾರವಾಗಲು ದಾರಿದೀಪವಾದೀತು.
ಆತ ಹುಟ್ಟಿದ್ದು, ಬೆಳೆದದ್ದು ಎಲ್ಲವೂ ಕೊಳಗೇರಿಯಲ್ಲೇ, ಯಾವುದೋ ಕಾಲಕ್ಕೆ ನೀರು ಸರಬರಾಜಿಗಾಗಿ ತಂದು ಹಾಕಲಾಗಿದ್ದ ಮೋರಿಯೊಳಗೆ ಅವನು ನಿತ್ಯ ಬದುಕುತ್ತಿದ್ದ. ಜೀವನಕ್ಕಾಗಿ ಕಡಲ ಕಿನಾರೆಯಲ್ಲಿ ಹಾಗೂ ಗಾಳಿಪಟ ಉತ್ಸವ ನಡೆಯೋ ಕಡೆಗೆಲ್ಲ ಹೋಗಿ ಗಾಳಿಪಟ ಮಾರುತ್ತಿದ್ದ. ಖರ್ಚು ಕಳೆದು ಒಂದು ಚೂರು ಹೆಚ್ಚು ಉಳಿದರೆ ಮಾತ್ರ ಎರಡು ಹೊತ್ತು ಊಟ ನೆಮ್ಮದಿಯ ನಿದ್ರೆ. ಹೀಗಿರೋ ಕಾಲಕ್ಕೆ ತಾನು ಉಣ್ಣೋದಕ್ಕೇ ದುಡಿತಿದ್ದೀನಾ ? ಇದನ್ನೇ ಮಾಡ್ತಾ ಇದ್ರೆ ಜೀವನದಲ್ಲಿ ಉದ್ಧಾರ ಆಗ್ತಿàನಾ… ಏನಾದ್ರೂ ಮಾಡಿ ಯಶ ಗಳಿಸಬೇಕೆಂಬ ಯೋಚನೆ ಆತನನ್ನು ತಂಗಾಳಿ ಬೀಸೋ ರಾತ್ರಿಯಲ್ಲೂ ನಿದ್ದೆಗೆಡುವಂತೆ ಮಾಡಿತ್ತು.
ಏನಾದರೂ ಮಾಡಲೇಬೇಕು…
ಯಾವುದೋ ಹೋಲ್‌ಸೇಲ್ ಅಂಗಡಿಯಿಂದ ಚೌಕಾಸಿ ಮಾಡಿ 15 ರೂ.ಗೆ ಗಾಳಿಪಟ ತರುತ್ತಿದ್ದ. ಅದರ ಬೆಲೆಯನ್ನು ಉಜ್ಜಿ 20 ರೂ. ಎಂದು ಬರೆಯುತ್ತಿದ್ದ. ಇಷ್ಟೇ. ಮಾರಾಟವಾದರೆ ಒಂದು ಗಾಳಿಪಟದಲ್ಲಿ 5 ರೂ. ಲಾಭ. 300 ರೂ. ಬಜೆಟ್‌ನಲ್ಲಿ 20 ಗಾಳಿಪಟ ತರುತ್ತಿದ್ದ. ಎಲ್ಲ ಗಾಳಿಪಟ ಮಾರಾಟವಾದರೆ 200 ರೂ. ಲಾಭವಾಗುತ್ತಿತ್ತು. ಬರೀ 5 ರೂ. ಲಾಭಕ್ಕಾಗಿ ಗಂಟೆಗಟ್ಟಲೆ ಬಿರು ಬಿಸಿಲಿನಲ್ಲಿ ಒಣಗಬೇಕೇ… ಅಲ್ಲದೆ ಅಂಗಡಿಯಾತನ ದರ್ಪವೂ ಕಣ್ಣೆದುರು ಬಂತು. ಬೇಕಾದ್ರೆ ಕೊಂಡ್ಹೊàಗು ಇಲ್ಲಂದ್ರೆ ಇಟ್ಟೋಗು ಅಂತಾನಲ್ಲ, ಧರ್ಮಕ್ಕೆ ಕೇಳ್ತೀವಾ ನಾವು… ಹಣ ಕೊಡಲ್ವೆ? ಎಂಬೆಲ್ಲ ಪ್ರಶ್ನೆಗಳು ಆತನ ಮನಸ್ಸಿನಲ್ಲಿ ಪದೇ ಪದೆ ಬಂದ್ಹೋಗುತ್ತಿತ್ತು.
ಗಾಳಿಪಟಕ್ಕೆ ಏನು ಬೇಕು?
ನೂಲಿನುಂಡೆ, ಬಣ್ಣದ ಕಾಗದ, ತೆಂಗಿನ ಗರಿಯ ಕಡ್ಡಿ, ಸ್ವಲ್ಪ ಮೈದಾ ಅಂಟು. 5-6 ರೂ. ವೆಚ್ಚ ದಲ್ಲಿ ನಾನೇ ಯಾಕೆ ಮಾಡಬಾರದು? ನಾನೇ ಮಾಡಿºಟ್ಟು ಮಾರಿದ್ರೆ ಡಬಲ್ ಲಾಭವೂ ಸಿಗುತ್ತೆ. ಆದ್ರೆ ರಾತ್ರಿ ಚೂರು ನಿದ್ದೆಗೆಡಬೇಕಷ್ಟೇ ಎಂದು ಮನದಲ್ಲೇ ಲೆಕ್ಕ ಹಾಕಿಕೊಂಡ.
ಯೋಚನೆ ಬಂದಿದ್ದೇ ತಡ ಗಾಳಿಪಟದ ಕೆಲಸ ಶುರು ಆಯ್ತು… ಮಾಡ್ತಾ ಮಾಡ್ತಾ ವೇಗನೂ ಕರಗತ ಆಯ್ತು… 5 ಗಾಳಿಪಟ ಸಮಯದಲ್ಲಿ 15 ಗಾಳಿಪಟ ಮಾಡುವಷ್ಟು ವೇಗ ಅವನಿಗೆ ಬಂದಿತ್ತು. ತಾನು ಮಾಡಿದ ಗಾಳಿಪಟ ಮೇಲೆ ಮೇಲೆ ಹಾರಿದಾಗ ಮನಸ್ಸೂ ಬಾನೆತ್ತರಕ್ಕೆ ಹಾರ್ತಾ ಇತ್ತು. ಯಾಕಂದ್ರೆ ಇವನ ಗಾಳಿಪಟ ಅಷ್ಟು ಸುಭದ್ರವಾಗಿತ್ತು, ಅಷ್ಟು ನಾಜೂಕಿನಿಂದ ಕೂಡಿತ್ತು. ಎಲ್ಲಿಯೂ ಕಿಂಚಿತ್ತೂ ಲೋಪವಿಲ್ಲದ ಶ್ರಮದ ಫಲವಿದು.
ಇನ್ನು ನಂದೇ ಹವಾ…
ಇವನು ಚಿಕ್ಕದಾಗಿ ಹುಟ್ಟು ಹಾಕಿದ ಗಾಳಿಪಟ ತಯಾರಿಕಾ ಕಂಪೆನಿ ದೇಶಾದ್ಯಂತ ನಡೆಯುವ ಬೃಹತ್ ಗಾಳಿಪಟ ಉತ್ಸವಗಳಿಗೂ ಗಾಳಿಪಟ ತಯಾರಿಸಿಕೊಡುವಷ್ಟು ಬೆಳೆದಿತ್ತು. ಇವನೂ ಬೆಳೆದಿದ್ದ. ಇವನಂತ ಎಷ್ಟೋ ಆಸೆ ಹೊತ್ತ ಕಂಗಳಿಗೆ ಕೆಲಸ ನೀಡಿ ಬದುಕಿಗೆ ದಾರಿ ತೋರಿಸಿದ್ದ. ಇವನು ಬರೀ ಬಾಸ್ ಆಗಿ ಎಂದಿಗೂ ಉಳಿಯಲಿಲ್ಲ. ಅಗತ್ಯ ಬಿದ್ದರೇ ತಾನೇ ಖುದ್ದಾಗಿ ಕೆಸಲಕ್ಕೆ ಕೈಜೋಡಿಸಲೂ ಹಿಂಜರಿಯದೆ ನೌಕರರ ಪಾಲಿಗೆ ಪ್ರೀತಿಯ ಒಡೆಯನಾದ.
ಯಾವತ್ತೂ ಮುಗಿಲೆತ್ತರದ ಕನಸು ಕಾಣಿರಿ, ಅದನ್ನು ನನಸಾಗಿಸಲು ನಿರಂತರ ಶ್ರಮವಹಿಸಿ. ಹಾಗೆಯೇ ತನ್ನಿಂದ ಸಾಧ್ಯವಿದೆ ಎನ್ನುವ ಛಲ ಯಾವತ್ತೂ ನಿಮ್ಮ ಜತೆಗಿದ್ದರೆ ಯಾವುದೇ ಅಡೆತಡೆಗಳು ನಿಮ್ಮನ್ನು ಬಾಧಿಸುವುದಿಲ್ಲ.
ಅಂದ ಹಾಗೆ ಆ ಗಾಳಿಪಟದ ವ್ಯಾಪಾರದಲ್ಲೇ ತನ್ನ ಸಾಮ್ರಾಜ್ಯ ಕಟ್ಟಿದ ವ್ಯಕ್ತಿ ಯಾರು? ಎಲ್ಲಿನವರು? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿದ್ದರೆ ಫೆ. 10, 11ರಂದು ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಬನ್ನಿ. ಅಲ್ಲಿ ಅವರ ಗಾಳಿಪಟಗಳು ತಮ್ಮ ಗುರುತನ್ನು ಬಾನೆತ್ತರದಲ್ಲಿ ಬಿಚ್ಚಿಡಬಹುದು…
-ಹಿರಣ್ಮಯಿ
ಕೈರಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.