ಕೋಲಾರ: ಪ್ರವಾಸಿ ಮಾರ್ಗದರ್ಶಕರಿಗೆ ಪ್ರೋತ್ಸಾಹ ಅಗತ್ಯ


Team Udayavani, Feb 22, 2024, 2:49 PM IST

ಕೋಲಾರ: ಪ್ರವಾಸಿ ಮಾರ್ಗದರ್ಶಕರಿಗೆ ಪ್ರೋತ್ಸಾಹ ಅಗತ್ಯ

ಉದಯವಾಣಿ ಸಮಾಚಾರ
ಕೋಲಾರ: ತೆರೆಮರೆಯಲ್ಲಿ ಕನಿಷ್ಠ ಸಂಬಳ ಹಾಗೂ ಸೌಕರ್ಯಗಳೊಂದಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಪ್ರವಾಸಿ ಮಾರ್ಗದರ್ಶಿಗಳು ಅಹಿರ್ನಿಷಿ ದುಡಿಯುತ್ತಿದ್ದು, ಫೆ.21 ಪ್ರತಿವರ್ಷ ವಿಶ್ವ ಪ್ರವಾಸಿ ಮಾರ್ಗದರ್ಶಿಗಳ ದಿನವನ್ನು ಆಚರಿಸುತ್ತಿದ್ದು, ಜಿಲ್ಲೆಯ ಪ್ರವಾಸಿ ಮಾರ್ಗದರ್ಶಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಾಗರಿಕರ ಜವಾಬ್ದಾರಿಯಾಗಬೇಕಿದೆ.

ದಿನಾಚರಣೆ ಆರಂಭ: ಪ್ರವಾಸಿ ಮಾರ್ಗದರ್ಶಿ ಸಂಘಗಳ ವಿಶ್ವ ಒಕ್ಕೂಟ 1985ರಲ್ಲಿ ಲಾಭರಹಿತ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿತು. 1989ರಲ್ಲಿ ಸೈಪ್ರಸ್‌ನ ನಿಕೋಸಿಯಾದಲ್ಲಿ ನಡೆದ ಒಕ್ಕೂಟದ ಮೂರನೇ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಪ್ರವಾಸಿ ಮಾರ್ಗದರ್ಶಿ ದಿನವನ್ನು ಆರಂಭಿಸಲಾಯಿತು. ವಿಶ್ವಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಪ್ರವಾಸಿ ಮಾರ್ಗದರ್ಶಿಗಳನ್ನು ಪ್ರತಿನಿಧಿ ಸುವ 70ಕ್ಕೂ ಹೆಚ್ಚು ದೇಶಗಳ ಸದಸ್ಯರನ್ನು ಹೊಂದಿದೆ.

ಮಾರ್ಗದರ್ಶಿಗಳ ಪಾತ್ರ: ಅಂತಾರಾಷ್ಟ್ರೀಯ ಪ್ರವಾಸಿ ಮಾರ್ಗದರ್ಶಿ ದಿನವನ್ನು ಪ್ರತಿವರ್ಷ ಫೆ.21ರಂದು ಆಚರಿಸಲಾಗುತ್ತದೆ. ಪ್ರವಾಸಿ ಮಾರ್ಗದರ್ಶಕರು ಪ್ರತಿ ಪ್ರಯಾಣದ ಹೀರೋಗಳಾಗಿ ರೋಮಾಂಚಕ ದೃಶ್ಯ ವೈಭವ, ಕಲೆ ಸಾಹಿತ್ಯ, ವಿಜ್ಞಾನ, ಗತಕಾಲದ ಭವ್ಯ ಪರಂಪರೆಯನ್ನು ಸಾರುವ ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಂದು ದೇಶದ ಸಂಸ್ಕೃತಿಯನ್ನು ಮತ್ತೊಂದು ದೇಶದ ಸಂಸ್ಕೃತಿ ಯೊಂದಿಗೆ ಮೇಳೈಸಿ ಅಂತಾರಾಷ್ಟ್ರೀಯ ರಾಯಭಾರಿಗಳಾಗಿ ಸ್ನೇಹ ಬಾಂಧವ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸಿ ಅತ್ಯಂತ ಶ್ರದ್ಧಾಪೂರ್ವಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲೆ ಮಾರ್ಗದರ್ಶಿಗಳು: ಕೋಲಾರ ಸೇರಿದಂತೆ ರಾಜ್ಯದಲ್ಲಿ ಪ್ರವಾಸಿ ಮಾರ್ಗದರ್ಶಿಗಳನ್ನು ರೂಪಿಸಿ 2011ರಲ್ಲಿ ಸರ್ಕಾರ ತರಬೇತಿ ಕಾರ್ಯಕ್ರಮ ನಡೆಸಿತು. ಪ್ರತಿ ಜಿಲ್ಲೆಯಲ್ಲಿ ತರಬೇತಿ ಕಾರ್ಯಕ್ರಮ ನಡೆದು ಒಂದಷ್ಟು ಮಂದಿ ಮಾರ್ಗದರ್ಶಿಗಳಾಗಲು ಆಸಕ್ತಿ ತೋರಿಸಿದರು. 2017ರಲ್ಲಿ ಮತ್ತೆ ಆಸಕ್ತರಿಗೆ ವಿಶ್ವ ವಿದ್ಯಾಲಯ ಮಟ್ಟದಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಲಾಯಿತು. ಹೀಗೆ, ತರಬೇತಿ ಪಡೆದ ಆರ್‌. ಚಂದ್ರಶೇಖರ್‌, ಎಸ್‌.ಎಚ್‌.ನಂಜುಂಡಪ್ಪ ಮತ್ತು ಎಚ್‌.ಕೆ. ಸುರೇಶ್‌ ಕೋಲಾರ ಜಿಲ್ಲೆಯ ಪ್ರವಾಸಿ ಮಾರ್ಗದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲೂ ಆರ್‌.ಚಂದ್ರಶೇಖರ್‌ ದಕ್ಷಿಣ ಭಾರತ ಪ್ರವಾಸಿ ಮಾರ್ಗದರ್ಶಿಯಾಗಿ
ಗುರುತಿಸಿಕೊಂಡಿದ್ದು, ಇಡೀ ರಾಜ್ಯದಲ್ಲಿ ಪ್ರವಾಸಿ ಸಂಪನ್ಮೂಲ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಅಧಿಕೃತ ಮಾರ್ಗದರ್ಶಿ ಇವರೇ ಆಗಿರುತ್ತಾರೆ.

ಜಿಲ್ಲೆಯಲ್ಲಿ ಮಾರ್ಗದರ್ಶಿಗಳು ಎಷ್ಟು ಸಂಖ್ಯೆಯಲ್ಲಿರಬೇಕಿತ್ತು?:
ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಕನಿಷ್ಠ ಇಬ್ಬರಾ ದರೂ ಪ್ರವಾಸಿ ಮಾರ್ಗದರ್ಶಿಗಳು ಇರಬೇಕಿತ್ತು. ಪೂರ್ಣ ಪ್ರಮಾಣದಲ್ಲಿ ಅಂದರೆ, ಗರಿಷ್ಠ 40 ಮಂದಿ ಪ್ರವಾಸಿ ಮಾರ್ಗದರ್ಶಿಗಳಾಗಲು ಅವಕಾಶ ಇದೆ. ಸದ್ಯಕ್ಕೆ ಕೋಲಾರ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಿಸಲು ಪ್ರತಿನಿತ್ಯ ಕನಿಷ್ಠ 3 ಸಾವಿರ ಮಂದಿ ಆಗಮಿಸುತ್ತಿದ್ದಾರೆ. ಈ ಪೈಕಿ ಹೆಚ್ಚು ಮಂದಿ ಕೋಟಿಲಿಂಗೇಶ್ವರ ದೇವಾಲಯಕ್ಕೆ ಭೇಟಿ ಕೊಟ್ಟರೆ, ಬಹಳಷ್ಟು ಮಂದಿ ಕೋಲಾರ ಜಿಲ್ಲೆಯಲ್ಲಿ ಸಿಗುವ ವೈಶಿಷ್ಟ್ಯಪೂರ್ಣ ಮುಳಬಾಗಿಲು ದೋಸೆ, ಬಂಗಾರಪೇಟೆ
ಚಾಟ್ಸ್‌ ಹಾಗೂ ವೈವಿಧ್ಯಮಯ ಮಾಂಸಾಹಾರವನ್ನುಸೇವಿಸಲು ಆಗಮಿಸುತ್ತಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿಯೇ. ಕೋಲಾರ ಜಿಲ್ಲೆಗೆ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಹಾಗೂ ಮಾಹಾರಾಷ್ಟ್ರದಿಂದ ಹೆಚ್ಚು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ 

ಪ್ರವಾಸೋದ್ಯಮಕ್ಕೆ ಕೋಲಾರ ಜಿಲ್ಲೆಯಲ್ಲಿ ವಿಫುಲ ಅವಕಾಶವಿದೆ. ಹಾಗೆಯೇ ಪ್ರವಾಸೋದ್ಯಮ ವಿಸ್ತರಣೆಯಾದರೆ, ಪ್ರತಿ
ಪ್ರವಾಸಿ ತಾಣಕ್ಕೂ ಒಬ್ಬ ಪ್ರವಾಸಿ ಮಾರ್ಗದರ್ಶಿ ನೇಮಕಗೊಂಡು ಉದ್ಯೋಗಾವಕಾಶಗಳು ಹೆಚ್ಚುತ್ತದೆ. ಆದರೆ, ಸೌಲಭ್ಯ ಹಾಗೂ ಗೌರವ ಧನ ಕಡಿಮೆ ಎಂಬ ಕಾರಣಕ್ಕಾಗಿ ಮಾರ್ಗದ ರ್ಶಿಗಳಾಗಲು ಹೆಚ್ಚಿನ ಯುವ ಪೀಳಿಗೆ ಇಷ್ಟ ಪಡುತ್ತಿಲ್ಲ. ಸರ್ಕಾರ ಮತ್ತು ಜಿಲ್ಲಾಡಳಿತ  ಪ್ರವಾಸೋದ್ಯಮವನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿ ಪ್ರವಾಸಿ ಮಾರ್ಗದರ್ಶಿಗಳನ್ನು ನೇಮಕ ಮಾಡಿಕೊಂಡು ಅವರಿಗೆ ಸೌಲಭ್ಯ ಸಂಭಾವನೆ  ಯನ್ನು ಹೆಚ್ಚಿಸಲು ಮುಂದಾಗಬೇಕಿದೆ.

ರೇಟಿಂಗ್ಸ್‌ ಆಧಾರದ ಮೇಲೆ ಮಾರ್ಗದರ್ಶಿಗಳ ಸೇವೆ ವಿಸ್ತರಣೆ
ಪ್ರವಾಸಿ ಮಾರ್ಗದರ್ಶಿಗಳಿಗೆ ಆ ರಂಭದಲ್ಲಿ ಕೇವಲ 2 ಸಾವಿರ, ಆ ನಂತರ 3 ಸಾವಿರ ಈಗ 5 ಸಾವಿರ ರೂ . ಗೌರವಧನ ನೀಡು ತ್ತಾರೆ. ಈ ಬಜೆಟ್‌ನಲ್ಲಿ ಇದು 7 ಸಾವಿರಕ್ಕೇರಬ ಹುದು ಎಂಬ ನಿರೀಕ್ಷೆ ಇದೆ.

ಪ್ರತ್ಯೇಕ ಸಮವಸ್ತ್ರ, ಗುರುತಿನ ಚೀಟಿ, ಶೂ ಮ ತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇವರ ಮೊಬೈಲ್‌ ಸಂಖ್ಯೆಯನ್ನು ಪ್ರವಾಸೋದ್ಯಮ ಇ ಲಾಖೆ ವೆಬ್‌ ಸೈಟ್‌ನಲ್ಲಿ ಅಳವಡಿಸಲಾಗುತ್ತದೆ. ಪ್ರವಾಸಿಗರು ನೇರವಾಗಿ ಇವರನ್ನು ಸಂಪರ್ಕಿಸಿ ಮಾರ್ಗದರ್ಶಿ ಸೇವೆಯನ್ನು ಪಡೆದುಕೊಳ್ಳಬ ಹುದು. ಪ್ರವಾಸಿ ತಾಣಗಳು ಮಾತ್ರವಲ್ಲದೆ, ಕೈ ಗಾರಿಕೋದ್ಯಮ, ಫುಡ್‌ ಟೂರಿಸಂ, ರಿಯಲ್‌ ಎ ಸ್ಟೇಟ್‌ ಟೂರಿಸಂ ಇತ್ಯಾದಿಗಳ ಬಗ್ಗೆಯೂ ಇವ ರಿಗೆ ಮಾಹಿತಿ ಇರುತ್ತದೆ. ಸೇವೆ ಪಡೆದ ಪ್ರವಾಸಿ ಗರು ನೀಡುವ ವೆಬ್‌ ರೇಟಿಂಗ್ಸ್‌ ಆಧಾರದ ಮೇಲೆ ಇವರ ಸೇವೆ ವಿಸ್ತರಣೆಯಾಗುತ್ತದೆ. ಹಾಗೆಯೇ ಪ್ರ ವಾಸಿಗರು ನೀಡುವ ಸಂಭಾವನೆಯೂ ಹೆಚ್ಚಾ ಗುತ್ತದೆ. ಮಾ ರ್ಗದರ್ಶಿಗಳ ಆದಾಯವೂ ಹೆಚ್ಚುತ್ತದೆ.

ಜಿಲ್ಲೆಯಲ್ಲಿ ನಾನು ಸೇರಿದಂತೆ ಮೂವರು ಪ್ರ ವಾಸಿ ಮಾರ್ಗದರ್ಶಿಗಳಿದ್ದೇವೆ. ಹೊರ ಜಿಲ್ಲೆಗಳಲ್ಲಿ ಹೆಚ್ಚು ಅವಕಾಶ ಆದಾಯ
ಇದ್ದರೂ ತವರು ಕೋಲಾರ ಜಿಲ್ಲೆ ಮೇಲಿನ ಪ್ರೀತಿಯಿಂದ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಕೋಲಾರ ಜಿಲ್ಲೆಯ ಪ್ರವಾಸಿ ತಾಣಗಳಿಗೂ ಹೆ ಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಶ್ರಮಿಸು ತ್ತಿದ್ದೇವೆ.
●ಆರ್‌. ಚಂದ್ರಶೇಖರ್‌, ಜಿಲ್ಲಾ ಪ್ರವಾಸಿ
ಮಾರ್ಗದರ್ಶಿ, ರಾಜ್ಯ ಪ್ರವಾಸಿ ಸಂಪನ್ಮೂಲ ವ್ಯಕ್ತಿ ಕೋಲಾರ

■ ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

10-kaup

Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ

ex-pm

EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್‌ ಅಂತ್ಯಕ್ರಿಯೆ

9-shivamogga

Shivamogga: ಮುಂದುವರಿದ ಕರಡಿಗಳ ಹಾವಳಿ; ಸ್ಥಳೀಯರಲ್ಲಿ ತೀವ್ರ ಆತಂಕ

New Year:ಹೊಸ ವರುಷ-ಹೊಸ ಹರುಷ 2025:ಕಾಲಚಕ್ರ ಮತ್ತೆ ತಿರುಗಿದೆ…ಹೊಸತು ಕಾಯುತ್ತಿದೆ!

New Year:ಹೊಸ ವರುಷ-ಹೊಸ ಹರುಷ 2025:ಕಾಲಚಕ್ರ ಮತ್ತೆ ತಿರುಗಿದೆ…ಹೊಸತು ಕಾಯುತ್ತಿದೆ!

ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

INDvAUS: ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

10-kaup

Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ

3

Bantwal ತಾಲೂಕು ಕಚೇರಿ: ಪಾಳು ಬಿದ್ದಿದೆ ಜನರೇಟರ್‌!

2

Uppinangady: ಕಾಟಾಚಾರದ ಕಾಮಗಾರಿಗೆ ಸ್ಥಳೀಯರ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.