ಕುಮಟಾ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆ… ಕರಾವಳಿ ಕಾವಲು ಪಡೆಯ ಪೊಲೀಸರು ಅಲರ್ಟ್
Team Udayavani, Feb 22, 2024, 2:27 PM IST
ಮಂಗಳೂರು: ಭಾರತೀಯ ಜಲ ಪ್ರದೇಶದಲ್ಲಿ ಚೀನಾ ಬೋಟ್ ಪತ್ತೆಯಾದ ಮಾಹಿತಿ ಲಭಿಸಿದ್ದು, ಕರಾವಳಿ ಕಾವಲು ಪಡೆಯ ಪೊಲೀಸರು ಅಲರ್ಟ್ ಆಗಿದ್ದಾರೆ.
ಕುಮಟಾ ಬಳಿಯ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆಯಾಗಿದ್ದು, ಕಾರವಾರ ಸೀಬರ್ಡ್ ನೌಕಾನೆಲೆಯ ಬಗ್ಗೆ ಗೂಢಚಾರಿಕೆ ನಡೆಸುತ್ತಿರುವ ಅನುಮಾನ ವ್ಯಕ್ತವಾಗಿದೆ.
ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಪೊಲೀಸ್ ಪಡೆಯಿಂದ ತನಿಖೆ ನಡೆಯುತ್ತಿದ್ದು, ಕುಮಟಾದಿಂದ ತೆರಳಿದ್ದ ಬೋಟಿನಲ್ಲಿದ್ದ ಮೀನುಗಾರರಿಂದ ಚೀನಾ ಬೋಟ್ ಬಗೆಗಿನ ಮಾಹಿತಿ ಸಿಕ್ಕಿದೆ.
ಚೀನಾದ ಫುಝುವಾ ಬಂದರಿನಲ್ಲಿ ನೋಂದಣಿಯಾಗಿರುವ ಬೋಟ್ ಇದಾಗಿದ್ದು, ಕರಾವಳಿ ಪೊಲೀಸ್ ಪಡೆಯ ಕುಮಟಾ ಠಾಣೆ ಇನ್ಸ್ ಪೆಕ್ಟರ್ ವಿಕ್ಟರ್ ನೈಮನ್ ತನಿಖೆ ಕೈಗೊಂಡಿದ್ದಾರೆ.
ಇನ್ಸ್ ಪೆಕ್ಟರ್ ವಿಕ್ಟರ್ ನೈಮನ್ ನೇತೃತ್ವದ ಸಿ ಎಸ್ ಪಿ ಪೊಲೀಸರ ತಂಡ ಮೀನುಗಾರರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕುಮಟಾದಿಂದ ಹೊರಟ ಮೀನುಗಾರಿಕಾ ಬೋಟ್ ಸಿಬಂದಿಯೋರ್ವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ರಾಜ್ಯದ ಕರಾವಳಿಯ ಮೀನುಗಾರರು ಚೀನಾ ಬೋಟ್ ನ ವಿಡಿಯೋ ಸೆರೆಹಿಡಿದಿದ್ದು, ಭಾರತೀಯ ಸೇನೆ ಕಣ್ಣು ತಪ್ಪಿಸಿ ಚೀನಾ ಬೋಟ್ ಗಡಿ ಪ್ರವೇಶ ಮಾಡಿದ್ದು, ಗೂಢಚರ್ಯೆ ನಡೆಸುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಕೋಸ್ಟ್ ಗಾರ್ಡ್ ಹೈಎಲರ್ಟ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.