Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ
ದೃಶ್ಯ ವೀಕ್ಷಿಸಿದ ಸಾವಿರಾರು ಜನರು...!!
Team Udayavani, Feb 22, 2024, 6:41 PM IST
ಸಾಂದರ್ಭಿಕ ಚಿತ್ರ ಮಾತ್ರ
ಘಜ್ನಿ(ಅಫ್ಘಾನಿಸ್ಥಾನ): ತಾಲಿಬಾನ್ ಅಧಿಕಾರಿಗಳು ಗುರುವಾರ ಪೂರ್ವ ಅಫ್ಘಾನಿಸ್ಥಾನದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಇಬ್ಬರನ್ನು ಸಾರ್ವಜನಿಕವಾಗಿ ಗುಂಡಿನ ಮಳೆ ಸುರಿಸಿ ಹತ್ಯೆ ಗೈದಿದ್ದಾರೆ.
ತಾಲಿಬಾನ್ ಸುಪ್ರೀಂ ಲೀಡರ್ ಹಿಬತುಲ್ಲಾ ಅಖುಂದ್ಜಾದಾ ಸಹಿ ಮಾಡಿದ ಡೆತ್ ವಾರಂಟ್ ಅನ್ನು ಸುಪ್ರೀಂ ಕೋರ್ಟ್ ಅಧಿಕಾರಿ ಅತೀಕುಲ್ಲಾ ದರ್ವಿಶ್ ಗಟ್ಟಿಯಾಗಿ ಓದಿದ ನಂತರ ಘಜ್ನಿ ನಗರದಲ್ಲಿ ಇಬ್ಬರ ಮೇಲೆ ಅನೇಕ ಬಾರಿ ಗುಂಡಿನ ದಾಳಿ ನಡೆಸಿ ಹತ್ಯೆಗೈಯಲಾಗಿದೆ.
“ಇಬ್ಬರು ಕೊಲೆಯ ಅಪರಾಧಕ್ಕೆ ಶಿಕ್ಷೆಗೊಳಗಾದವರಾಗಿದ್ದು, ದೇಶದ ನ್ಯಾಯಾಲಯಗಳಲ್ಲಿ ಎರಡು ವರ್ಷಗಳ ವಿಚಾರಣೆಯ ನಂತರ, ಆದೇಶಕ್ಕೆ ಸಹಿ ಹಾಕಲಾಗಿದೆ” ಎಂದು ದರ್ವಿಶ್ ಹೇಳಿದ್ದಾರೆ. ಮರಣದಂಡನೆ ಶಿಕ್ಷೆಗೆ ಸಾಕ್ಷಿಯಾಗಲು ಸಾವಿರಾರು ಪುರುಷರು ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ಶಿಕ್ಷೆಗೊಳಗಾದ ಪುರುಷರ ಕುಟುಂಬ ಸದಸ್ಯರೂ ಹಾಜರಾಗಿ, ಕೊನೆಯ ಕ್ಷಣದಲ್ಲಿ ಶಿಕ್ಷೆ ಬದಲಾಯಿಸುತ್ತೀರಾ ಎಂದುಅಂಗಲಾಚಿದರೂ ಎರಡೂ ಪ್ರಕರಣಗಳಲ್ಲಿ ನಿರ್ಧಾರ ಬದಲಾಯಿಸಲು ತಾಲಿಬಾನ್ ನಿರಾಕರಿಸಿದೆ.
2021 ರಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಇಸ್ಲಾಂ ಧರ್ಮದ ಕಠಿಣ ವ್ಯಾಖ್ಯಾನವನ್ನು ವಿಧಿಸಿದೆ. “ಕಿಸಾಸ್” ಎಂದು ಕರೆಯಲ್ಪಡುವ “ಕಣ್ಣಿಗೆ ಕಣ್ಣು” ಶಿಕ್ಷೆಗಳನ್ನು ಒಳಗೊಂಡಂತೆ ಇಸ್ಲಾಮಿಕ್ ಕಾನೂನಿನ ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು 2022 ರಲ್ಲಿಅಖುಂದ್ಜಾದಾ ನ್ಯಾಯಾಧೀಶರಿಗೆ ಆದೇಶಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.