Rahul Gandhi ವಿವಾದ: ನಿಮ್ಮ ಚಾನೆಲ್ ಮಾಲಕ ದಲಿತನಾ?
ಪತ್ರಕರ್ತನ ಜಾತಿ ಪ್ರಶ್ನಿಸಿದ್ದಕ್ಕೆ ತೀವ್ರ ಆಕ್ರೋಶ
Team Udayavani, Feb 23, 2024, 6:20 AM IST
ಹೊಸದಿಲ್ಲಿ: ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರಕರ್ತನನ್ನು ಪ್ರಶ್ನಿಸಿದ ರೀತಿ ವಿವಾದ ಸೃಷ್ಟಿಸಿದೆ. ಟಿವಿ ವರದಿಗಾರರಲ್ಲಿ ರಾಹುಲ್, ನಿಮ್ಮ ಮಾಲಕ ದಲಿತನೇ ಎಂದು ಪ್ರಶ್ನಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ಯಾತ್ರೆ ವೇಳೆ ಇಂಡಿಯಾ ನ್ಯೂಸ್‌ನ ವರದಿಗಾರ ಹಾಗೂ ಮಾಲಕ ಶಿವ್ ಪ್ರಸಾದ್ ಯಾದವ್ ಅವರೊಂದಿಗೆ ಕೈ ಕಾರ್ಯಕರ್ತರು ಒರಟಾಗಿ ವರ್ತಿಸಿದ್ದ ರು. ಈ ವೇಳೆ ರಾಹುಲ್, “ನೀವು ಮಾಧ್ಯಮದವರೆ? ನಿಮ್ಮ ಹೆಸರೇನು? ನಿಮ್ಮ ಮಾಲಕನ ಹೆಸರೇನು? ಅವರು ಒಬಿಸಿಯೇ? ಅಲ್ಲ. ಅವರು ದಲಿತರೇ? ಅಲ್ಲ’ ಎಂದು ಪ್ರಶ್ನಿಸಿದ್ದರು. ಈ ವೀಡಿಯೋ ವೈರಲ್ ಆಗಿದ್ದು, ರಾಹುಲ್ ವಿರುದ್ಧ ಅಪಸ್ವರ ಎದ್ದಿದೆ. ಇತ್ತ ಕಾಂಗ್ರೆಸ್ ಮೀಡಿಯಾದಲ್ಲಿ ಮೀಸಲು ಕ್ಷೇತ್ರದ ಮಂದಿ ಎಷ್ಟಿದ್ದಾರೆ ಎಂದು ತಿಳಿಯಲು ಹೀಗೆ ಪ್ರಶ್ನಿಸಿದ್ದಾರೆ ಅಷ್ಟೇ ಎಂದು ಸಮಜಾಯಷಿ ನೀಡಿದೆ.
ಎಡಿಟರ್ಸ್ ಗಿಲ್ಡ್ ಕಳವಳ
ರಾಯ್‌ಬರೇಲಿ ನ್ಯಾಯ್ ಯಾತ್ರೆ ವೇಳೆ ಪತ್ರಕರ್ತನಿಗೆ ಜನ ಸಮೂಹ ತೊಂದರೆ ನೀಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದಿ ಎಡಿಟರ್ ಗಿಲ್ಡ್ ಆಫ್ ಇಂಡಿಯಾ, ಚುನಾವಣ ಸಮಯದಲ್ಲಿ ಉದ್ವಿಗ್ನತೆ ಹೆಚ್ಚಾಗ ದಂತೆ, ಯಾವುದೇ ವ್ಯಕ್ತಿಗೆ ಹಾನಿ ಯಾಗ ದಂತೆ ಎಲ್ಲ ರಾಜಕೀಯ ಪಕ್ಷ ಗಳು ಮತ್ತು ನಾಯಕರು ಎಚ್ಚರಿಕೆ ವಹಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.