Desi Swara: ಮಾತೃಭಾಷೆ ಎಂಬ ಮಮಕಾರ-ಮಾತೃಭಾಷೆಯನ್ನು ಬಳಸೋಣ; ಇತರರಿಗೂ ಕಲಿಸೋಣ
ಪೀಳಿಗೆಗಳ ನಡುವಿನ ಸಂಬಂಧವನ್ನು ಬಲಗೊಳಿಸುವುದೇ ಇದರ ಉದ್ದೇಶ
Team Udayavani, Feb 24, 2024, 1:20 PM IST
ಮಗು ಶಾಲೆಯನ್ನು ಆರಂಭಿಸುವುದು ಇಂಗ್ಲಿಷ್‌ನಲ್ಲಿ, ಮುಂದುವರೆಯುವುದು ಫ್ರೆಂಚ್‌ನಲ್ಲಿ, ಅನಂತರ ಉದ್ಯೋಗಕ್ಕಾಗಿ ಜರ್ಮನ್ ಭಾಷೆಯನ್ನು ಕಲಿತ ಉದಾಹರಣೆಗಳು ಬಹಳಷ್ಟಿವೆ. ಹಾಗಾದರೆ ಪರಭಾಷೆಯನ್ನು ಕಲಿಯುವುದು ಸೂಕ್ತವಲ್ಲವೇ? ಹಾಗೇನಿಲ್ಲ ಇಂದು ನಾವು ತಾಂತ್ರಿಕ ಯುಗದಲ್ಲಿ ಯಾವ ದೇಶದ ಯಾವ ಮೂಲೆಯಲ್ಲಿದ್ದು ಕೆಲಸ ಮಾಡಬೇಕಾಗುತ್ತದೆಯೋ ಅದೇ ರೀತಿ ಜೀವನ ಮಾಡಬೇಕಾಗುತ್ತದೆಯೋ ಗೊತ್ತಿಲ್ಲ. ಹಾಗಾಗಿ ಭಾಷೆಗಳು ಗೊತ್ತಿದ್ದಷ್ಟು ನಾವು ಯಾವುದೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಬಹುದು. ಆದರೆ ಮಾತೃಭಾಷೆಯನ್ನು ಮಾತ್ರ ಕಡೆಗಣಿಸಬಾರದು. ತಮ್ಮ ಮುಂದಿನ ಪೀಳಿಗೆಗೆ ಈ ಭಾಷೆ, ಸಂಸ್ಕೃತಿಯನ್ನು ಒಪ್ಪಿಸಲೇಬೇಕು.
ಮಾತೃಭೂಮಿ, ಮಾತೃಭಾಷೆ ಎಂದರೆ ರೋಮ ರೋಮದಲ್ಲೂ, ರಕ್ತದ ಪ್ರತೀ ಕಣಕಣದಲ್ಲೂ , ಪ್ರತೀ ಉಸಿರಿನಲ್ಲೂ ಅಪಾರವಾದ ಪ್ರೀತಿ, ಗೌರವ, ಭಕ್ತಿ ಮತ್ತು ಹೆಮ್ಮೆ ಸಮ್ಮಿಲನ ಎಂದು ಹೇಳಿದರೆ ತಪ್ಪಾಗಲಾರದು. ಯಾವುದೇ ರೀತಿಯ ಒಂದು ಸಂವಹನ ಯಶಸ್ವಿಯಾಗಬೇಕಾದರೆ ಅದು ಮಾತೃಭಾಷೆಯಲ್ಲಿ ಆದಾಗ ಮಾತ್ರ ಸಾಧ್ಯ. ಬೇರೆ ಯಾವುದೇ ಭಾಷೆಯಲ್ಲಿ ಸಂಪೂರ್ಣ ಹಿಡಿತವಿದೆ ಎಂದುಕೊಂಡರೂ ಒಂದಲ್ಲ ಒಂದು ನ್ಯೂನ್ಯತೆ ಕಂಡು ಬರುವ ಸಾಧ್ಯತೆ ಇದೆ. ಹಾಗಂತ ಮಾತೃಭಾಷೆಯಲ್ಲಿ ಸಂವಹನ ನಡೆದರೆ ತಪ್ಪುಗಳು ಆಗುವುದೇ ಇಲ್ಲ ಅಂತ ಹೇಳಲಾಗದು.
ಸಂವಹನ ಕ್ರಿಯೆಯಲ್ಲಿ ಹಾವ-ಭಾವ, ಧ್ವನಿಯಲ್ಲಿ ಏರಿಳಿತ, ಪದಗಳ ಉಪಯೋಗ ಇನ್ನೂ ಹಲವಾರು ಅಂಶಗಳು ಮುಖ್ಯವಾಗಿವೆ. ಒಂದಂತೂ ಸತ್ಯ ಇವೆಲ್ಲ ಅಂಶಗಳು ಮಾತೃಭಾಷೆಯಲ್ಲಿ ಎಷ್ಟು ಸರಿಯಾಗಿ ಬಳಸುತ್ತೇವೆಯೋ ಅಷ್ಟು ಸರಿಯಾಗಿ ಬೇರೆ ಭಾಷೆಯಲ್ಲಿ ಬಳಸಲಾಗುವುದಿಲ್ಲ, ಅದು ಸಾಧ್ಯವಾದರೂ ಕೂಡ ಬೇರೆ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಾಗ ಮಾತ್ರ.
ಭಾಷೆಯು ಕಲಿಯುವಿಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಶಿಕ್ಷಣದ ಯಶಸ್ಸು ಭಾಷೆಯನ್ನು ಅವಲಂಬಿಸಿದೆ. ಹಾಗಾಗಿ ಇಂದಿನ ದಿನಗಳಲ್ಲಿ ನಾವು ಅನೇಕ ಭಾಷೆಗಳ ಆಯ್ಕೆಯ ಪಟ್ಟಿಯನ್ನು ನೋಡಬಹುದಾಗಿದೆ. ಇದು ಶಾಲೆಯಿಂದಲೇ ಪ್ರಾರಂಭವಾಗುತ್ತದೆ. ತಮ್ಮ ತಮ್ಮ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಂಡು ಅದೇ ಭಾಷೆಯಲ್ಲಿ ಕಲಿಯುವ ಶಿಕ್ಷಣವನ್ನು ಪೂರೈಸುವ ಉದ್ದೇಶ ಯುನೆಸ್ಕೊ ಸಂಸ್ಥೆಯದ್ದಾಗಿದೆ.
ಈ ಜಗತ್ತಿನಲ್ಲಿ ಸರಿ ಸುಮಾರು 7,139 ಅಧಿಕೃತವಾಗಿ ಬಳಸಲ್ಪಡುವ ಭಾಷೆಗಳಿವೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಇತಿಹಾಸ ಇದೆ. ಹಾಗೆಯೇ ಆ ಭಾಷೆಯನ್ನು ಬಳಸಲ್ಪಡುವ, ಪಸರಿಸುವ ಜನರಿ¨ªಾರೆ. ಎಲ್ಲರಿಗೂ ಅವರವರ ಭಾಷೆಯ ಬಗ್ಗೆ ಪ್ರೀತಿ, ಮೋಹ, ಗೌರವ, ಹೆಮ್ಮೆ ಇದ್ದೇ ಇರುತ್ತದೆ. ಹಾಗಾಗಿ ಈ ಎಲ್ಲ ಭಾಷೆಗಳಿಗಾಗಿ ಅಂತಾರಾಷ್ಟ್ರೀಯ ಮಾತೃಭಾಷೆಯ ದಿನವನ್ನಾಗಿ ಆಚರಿಸುವ ಉದ್ದೇಶ ಮೂಡಿತು. ಹೀಗೆ ಈ ದಿನವನ್ನು ಪ್ರತೀ ವರ್ಷವೂ ಆಚರಿಸಲು ನಿರ್ಧರಿಸಲಾಯಿತು. ಇಂತಹ ಆಚರಣೆಯಿಂದ ಭಾಷೆಗಳ ಉದ್ಧಾರದೆಡೆಗೆ ಯೋಜನೆಗಳನ್ನು ಹಾಕಿಕೊಳ್ಳಲಾಯಿತು. ಪ್ರತೀ ವರ್ಷವೂ ಒಂದೊಂದು ವಿಷಯವನ್ನಿಟ್ಟುಕೊಂಡು ಪ್ರತಿಯೊಂದು ಭಾಷೆಯ ಉಳಿಯುವಿಕೆ ಹಾಗೂ ಬೆಳವಣಿಗೆಯ ಬಗ್ಗೆ ಹೆಚ್ಚು ಒತ್ತು ಕೊಡಲಾಯಿತು.
ಹೀಗೆ ಮೊಟ್ಟಮೊದಲು ಅಂತಾರಾಷ್ಟ್ರೀಯ ಮಾತೃಭಾಷೆಯ ದಿನವನ್ನು ಆಚರಿಸುವ ಯೋಚನೆಯನ್ನು ಬಾಂಗ್ಲಾದೇಶವು ಹರಿಬಿಟ್ಟಿತ್ತು. 1999ರ ಯುನೆಸ್ಕೋ ಅಧಿವೇಶನದಲ್ಲಿ ಈ ಯೋಚನೆಯನ್ನು ಅನುಮೋದಿಸಲಾಯಿತು. ಅನಂತರದ ವರ್ಷ ಅಂದರೆ 2000ದಲ್ಲಿ ವಿಶ್ವವಿಡೀ ಅಂತಾರಾಷ್ಟ್ರೀಯ ಮಾತೃಭಾಷೆಯ ದಿನವನ್ನು ಆಚರಿಸಲಾಯಿತು. ಈ ದಿನವನ್ನು ಪ್ರತೀ ವರ್ಷ ಫೆಬ್ರವರಿ 21ರಂದು ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು ಹಾಗೂ ಪ್ರತೀ ವರ್ಷ ಒಂದು ವಿಷಯವನ್ನಿಟ್ಟುಕೊಂಡು ಆಚರಿಸಲಾಯಿತು. ಈ ವರ್ಷದ ವಿಷಯ ಬಹುಭಾಷಾ ಶಿಕ್ಷಣ ಪದ್ಧತಿಯು ಅಂತರ್ ಪೀಳಿಗೆಗಳ ಕಲಿಕೆಯ ಸ್ತಂಭ ಎನ್ನುವುದಾಗಿದೆ. ಬಹುಭಾಷೆಗಳ ಕಲಿಕೆಗೆ ಒತ್ತು ಕೊಟ್ಟು ಒಂದು ಪೀಳಿಗೆಯಿಂದ ಮತ್ತೂಂದು ಪೀಳಿಗೆಗೆ ಹರಿಯುವ ಭಾಷೆ, ಸಂಸ್ಕೃತಿಯನ್ನು ಇಮ್ಮಡಿಗೊಳಿಸಿ ಪೀಳಿಗೆಗಳ ನಡುವಿನ ಸಂಬಂಧವನ್ನು ಬಲಗೊಳಿಸುವುದೇ ಇದರ ಉದ್ದೇಶವಾಗಿದೆ.
ಬಹುಭಾಷಾ ಪದ್ಧತಿ ಮತ್ತು ಬಹುಸಂಸ್ಕೃತಿಯ ಸಮಾಜವು ಉಳಿಯಬೇಕಾದರೆ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆಯು ಸಂಸ್ಕೃತಿಯ ಜ್ಞಾನವನ್ನು ಹಬ್ಬಿಸುವಲ್ಲಿ ಸಹಕಾರಿಯಾಗಿದೆ. ಇಂದು ಭಾಷಾ ವೈವಿಧ್ಯತೆಗೆ ಕುಂದು ಬಂದಿರುವುದಕ್ಕೆ ಕಾರಣ ಅನೇಕ ಭಾಷೆಗಳು ಕಣ್ಮರೆಯಾಗಿರುವುದಾಗಿದೆ.
ವಿಶ್ವದಾದ್ಯಂತ ಸುಮಾರು ಶೇ. 40 ಪ್ರತಿಶತ ಜನರು ತಮ್ಮ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಬಹುಭಾಷೆಗಳ ಬಗ್ಗೆ ಜಾಗೃತಿ, ಅನ್ವಯ ಮಾಡಿದಾಗ್ಯೂ ಕೂಡ ಈ ರೀತಿಯ ಸಮಸ್ಯೆಗಳು ಸಮಾಜವನ್ನು ಕಾಡುತ್ತಿವೆ.
ಯುನೆಸ್ಕೊ ಮಾತೃಭಾಷೆಯನ್ನು ಉಳಿಸುವ ಹಾಗೂ ಅದರಲ್ಲೇ ಶಿಕ್ಷಣ ಕೊಡಿಸುವುದಕ್ಕಾಗಿ ಹೋರಾಡುವಾಗ ಜನರು ಬೇರೆ ಭಾಷೆಯನ್ನು ಕಲಿತು ಅದರಲ್ಲಿ ಶಿಕ್ಷಣವನ್ನು ಪಡೆದು ತಮ್ಮ ಭಾಷೆಯನ್ನು ಮರೆತು ಬೇರೆ ಭಾಷೆಯಲ್ಲೇ ಮುಂದುವರೆಯುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆಯಲು ಅಥವಾ ಉದ್ಯೋಗ ಅರಸಲು ಅಲ್ಲಿಯ ಭಾಷೆಯನ್ನು ಕಲಿಯಲೇಬೇಕು ಹಾಗಾಗಿ ಜನರು ಬಹುಭಾಷಿಕರಾಗುತ್ತಿದ್ದಾರೆ.
ಮಗು ಶಾಲೆಯನ್ನು ಆರಂಭಿಸುವುದು ಇಂಗ್ಲಿಷ್‌ನಲ್ಲಿ, ಮುಂದುವರೆಯುವುದು ಫ್ರೆಂಚ್‌ನಲ್ಲಿ, ಅನಂತರ ಉದ್ಯೋಗಕ್ಕಾಗಿ ಜರ್ಮನ್ ಭಾಷೆಯನ್ನು ಕಲಿತ ಉದಾಹರಣೆಗಳು ಬಹಳಷ್ಟಿವೆ. ಹಾಗಾದರೆ ಪರಭಾಷೆಯನ್ನು ಕಲಿಯುವುದು ಸೂಕ್ತವಲ್ಲವೇ? ಹಾಗೇನಿಲ್ಲ ಇಂದು ನಾವು ತಾಂತ್ರಿಕ ಯುಗದಲ್ಲಿ ಯಾವ ದೇಶದ ಯಾವ ಮೂಲೆಯಲ್ಲಿದ್ದು ಕೆಲಸ ಮಾಡಬೇಕಾಗುತ್ತದೆಯೋ ಅದೇ ರೀತಿ ಜೀವನ ಮಾಡಬೇಕಾಗುತ್ತದೆಯೋ ಗೊತ್ತಿಲ್ಲ. ಹಾಗಾಗಿ ಭಾಷೆಗಳು ಗೊತ್ತಿದ್ದಷ್ಟು ನಾವು ಯಾವುದೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಬಹುದು.
ಆದರೆ ಮಾತೃಭಾಷೆಯನ್ನು ಮಾತ್ರ ಕಡೆಗಣಿಸಬಾರದು. ತಮ್ಮ ಮುಂದಿನ ಪೀಳಿಗೆಗೆ ಈ ಭಾಷೆ, ಸಂಸ್ಕೃತಿಯನ್ನು ಒಪ್ಪಿಸಲೇಬೇಕು. ನಾವೆಲ್ಲ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಹಾಗೆ ವಿದೇಶಗಳಲ್ಲೂ ನಮ್ಮ ಮಾತೃಭಾಷೆ ಕಲಿಸುವ ವ್ಯವಸ್ಥೆಯಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ಕನ್ನಡಿಗರು ತಮ್ಮ ಹೆಜ್ಜೆಯ ಗುರುತನ್ನು ಮಾಡಿದ್ದಾರೆ. ಅದೇ ರೀತಿ ಕನ್ನಡದ ಕಂಪನ್ನೂ ಪಸರಿಸಿದ್ದಾರೆ. ಸಮಾನ ಮನಸ್ಕರು ಸೇರಿ ಕನ್ನಡ ಶಾಲೆಯನ್ನು ತೆರೆಯುವುದು, ಮಕ್ಕಳಿಗೆ ಕನ್ನಡ ಕಲಿಸುವುದು, ಕನ್ನಡ ಲೇಖಕರ ಗುಂಪು, ಕನ್ನಡ ಸಂಘಗಳು, ಕನ್ನಡ ಚಲನಚಿತ್ರಗಳ ಬಿಡುಗಡೆ ಹೀಗೆ ಹತ್ತು ಹಲವಾರು ರೀತಿಯಿಂದ ಕನ್ನಡದಕಂಪು ಎಲ್ಲೆಡೆ ಪಸರುತ್ತಿದೆ.
ನಾವೆಲ್ಲರೂ ಸೇರಿ ನಮ್ಮ ಮಾತೃಭಾಷೆಯನ್ನು ಉಳಿಸೋಣ, ಹಾಗೆಯೇ ಬೆಳೆಸೋಣ. ಪರಭಾಷೆಗಳಿಗೂ ಗೌರವ ಸಲ್ಲಿಸೋಣ. ಆವಶ್ಯಕತೆಯಿದ್ದಲ್ಲಿ ಅವರ ಭಾಷೆಯನ್ನು ನಾವೂ ಕಲಿಯೋಣ ಮತ್ತು ಅವರಿಗೂ ನಮ್ಮ ಭಾಷೆ ಕಲಿಸೋಣ. ಮಾತೃಭಾಷೆಯ ಮಮಕಾರವೆಂದೂ ತಪ್ಪದು. ಹಾಗೆಯೇ ನಮ್ಮಿಂದ ಪರಭಾಷೆಗಳಿಗೂ ಗೌರವ ತಪ್ಪದು. ನಾವೆಲ್ಲ ಸಹೋದರ ಸಹೋದರಿಯರಂತೆ ನಾಡು, ನುಡಿ ,ಸಂಸ್ಕೃತಿಯನ್ನು ಹಬ್ಬಿಸುವಲ್ಲಿ ಹಾಗೂ ಇತರರ ಸಂಸ್ಕೃತಿಗೆ ಧಕ್ಕೆ ಬಾರದ ಹಾಗೆ ನೋಡಿಕೊಳ್ಳುವುದರಲ್ಲಿ ನಿಪುಣರಾಗಿದ್ದೇವೆ. ಇನ್ನು ಇದನ್ನೆಲಾ ಮುಂದುವರೆಸುವುದು ಮಾತ್ರ ನಮ್ಮ ಧ್ಯೇಯವಾಗಬೇಕು. ಈ ಅಂತಾರಾಷ್ಟ್ರೀಯ ಮಾತೃಭಾಷೆಯ ದಿನದ ಉದ್ದೇಶದಂತೆ ಹಿಂದಿನ ಪೀಳಿಗೆ ಹಾಗೂ ಮುಂದಿನ ಪೀಳಿಗೆ ನಡುವಿನ ಸಂಬಂಧವನ್ನು ಗಟ್ಟಿಗೊಳಿಸೋಣ.
*ಜಯಾ ಛಬ್ಬೀ, ಮಸ್ಕತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.