ಸ್ನಾನದ ವಿಡಿಯೋ, ಖಾಸಗಿ ಫೋಟೋ ಲೀಕ್.. ನಟಿ ತ್ರಿಶಾ ಸುತ್ತ ಸಾಗಿದ ವಿವಾದ ಒಂದೆರೆಡಲ್ಲ..
Team Udayavani, Feb 24, 2024, 4:26 PM IST
ಬಣ್ಣದ ಲೋಕದಲ್ಲಿ ನಟ – ನಟಿಯರು ಎಷ್ಟು ಖ್ಯಾತರಾಗಿರುತ್ತಾರೋ ಅದರಾಚೆ ಒಂದಷ್ಟು ವಿವಾದಗಳಿಂದಲೂ ಸುದ್ದಿಯಾಗುತ್ತಾರೆ. ಸೆಲೆಬ್ರಿಟಿಗಳ ವಿವಾದಗಳು ಹೊಸತೇನಲ್ಲ. ಇಂದು ದಕ್ಷಿಣ ಸಿನಿರಂಗದಲ್ಲಿ ಸಾಕಷ್ಟು ಹೆಸರುಗಳಿಸಿರುವ ನಟಿ ತ್ರಿಶಾ ಕೃಷ್ಣನ್ ಕಳೆದ ಕೆಲ ಸಮಯದಿಂದ ಸಿನಿಮಾ ಬಿಟ್ಟು ಅನ್ಯ ವಿಚಾರಗಳಿಂದಲೇ ಸುದ್ದಿಯಲ್ಲಿದ್ದಾರೆ.
ರಾಜಕಾರಣಿಯೊಬ್ಬರು ಟೀಕಿಸುವ ಭರದಲ್ಲಿ ನಟಿ ತ್ರಿಷಾ ಅವರ ಹೆಸರನ್ನು ಎಳೆದುಕೊಂಡು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗೆ ಹಿರಿಯ ನಟ ಮನ್ಸೂರ್ ಆಲಿಖಾನ್ ಅವರು ತ್ರಿಷಾ ಅವರ ಬಗ್ಗೆ ಹೇಳಿದ ಅಸಭ್ಯ ಮಾತಿನ ಬಳಿಕ ಎವಿ ರಾಜು ಅವರ ಹೇಳಿಕೆ ಕೂಡ ತ್ರಿಷಾ ಅವರಿಗೆ ಕೆಟ್ಟ ರೀತಿಯ ಹೆಸರು ತಂದಿದೆ.
ನಟಿ ತ್ರಿಷಾ ಅವರು ಈ ರೀತಿಯ ವಿವಾದಗಳಿಂದ ಸುದ್ದಿಯಾಗಿರುವುದು ಹೊಸತೇನಲ್ಲ. ಹಾಗಾದರೆ ಬನ್ನಿ ತ್ರಿಷಾ ಅವರ ಸುತ್ತ ಹುಟ್ಟಿದ ವಿವಾದಗಳತ್ತ ಒಂದು ನೋಟ ಹಾಕಿಬರೋಣ..
ತ್ರಿಶಾ ಮತ್ತು ರಾಣಾ ದಗ್ಗುಬಾಟಿ: ನಟಿ ತ್ರಿಷಾ ಹಾಗೂ ರಾಣಾ ದಗ್ಗುಬಾಟಿ ಒಂದು ಕಾಲದಲ್ಲಿ ಆತ್ಮೀಯವಾಗಿದ್ದವರು. ಇವರಿಬ್ಬರ ಆತ್ಮೀಯತೆ ಪ್ರೀತಿಗೆ ತಿರುಗಿತ್ತು. ಪರಸ್ಪರ ಪ್ರೀತಿಯಲ್ಲಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಫೋಟೋ, ಸಾರ್ವಜನಿಕವಾಗಿ ಜೊತೆಯಾಗಿ ಕಾಣಿಸಿಕೊಂಡರೂ ಹಾಗೂ ಒಟ್ಟಾಗಿ ಸುತ್ತಾಡಿದ್ದರೂ, ಎಲ್ಲೂ ಕೂಡ ಬಹಿರಂಗವಾಗಿ ಸಂಬಂಧದ ಬಗ್ಗೆ ತ್ರಿಷಾ ಹಾಗೂ ರಾಣಾ ಮಾತನಾಡಿರಲಿಲ್ಲ. ಆದರೆ ಕೆಲ ಸಮಯದ ಇಬ್ಬರ ನಡುವೆ ಬಿರುಕು ಉಂಟಾಗಿ ಪರಸ್ಪರ ದೂರವಾದರು. ರಾಣಾ ಆಗಸ್ಟ್ 8, 2020 ರಂದು ಮಿಹೀಕಾ ಬಜಾಜ್ ಅವರನ್ನು ವಿವಾಹವಾಗುವ ಮೂಲಕ ತ್ರಿಷಾ ಜೊತೆಗಿನ ಸಂಬಂಧ ಕೊನೆಯಾಗಿತ್ತು.
ತ್ರಿಶಾ ಮತ್ತು ದಳಪತಿ ವಿಜಯ್ : ತ್ರಿಶಾ ಹಾಗೂ ದಳಪತಿ ವಿಜಯ್ ಅವರ ಜೋಡಿಯನ್ನು ಪ್ರೇಕ್ಷಕರು 2005 ರಲ್ಲಿ ಬಂದ ʼಗಿಲ್ಲಿʼ ಸಿನಿಮಾದಲ್ಲಿ ನೋಡಿ ಮೆಚ್ಚಿದ್ದರು. ಸಿನಿಮಾದ ಬಳಿಕ ತ್ರಿಶಾ ಹಾಗೂ ದಳಪತಿ ಅವರ ನಡುವೆ ಏನೋ ನಡೆಯುತ್ತಿದೆ ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದು ದಳಪತಿ ವಿಜಯ್ ಹಾಗೂ ಸಂಗೀತಾ ಸೋರ್ನಲಿಂಗಂ ಅವರ ಸಂಬಂಧದ ಮೇಲೆ ಪರಿಣಾಮ ಬೀರಲು ಶುರುವಾಗಿತ್ತು. ಆದರೆ ಆ ಬಳಿಕ ತ್ರಿಶಾ ಈ ಸುದ್ದಿಗೆ ಅರ್ಥವಿಲ್ಲ. ಇದು ವದಂತಿ ಅಷ್ಟೇ, ವಿಜಯ್ ಹಾಗೂ ನಾನು ಉತ್ತಮ ಸ್ನೇಹಿತರು ಅಷ್ಟೇ ಎನ್ನುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದರು.
ತ್ರಿಶಾ ಮತ್ತು ಧನುಷ್: ನಟಿ ತ್ರಿಶಾ ಹಾಗೂ ಧನುಷ್ ಅವರರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಮಾತುಗಳು ಅಂದು ಕಾಲಿವುಡ್ ನಲ್ಲಿ ಹರಿದಾಡಿತ್ತು. ಈ ಸಂಬಂಧ ಇಬ್ಬರು ಆತ್ಮೀಯವಾಗಿರುವ ಕೆಲ ಖಾಸಗಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಧನುಷ್ ಹಾಗೂ ಐಶ್ವರ್ಯಾ ಅವರ ಸಂಬಂಧದ ಮೇಲೂ ಪರಿಣಾಮ ಬೀರಿತ್ತು.
ಪೇಟಾ ಬೆಂಬಲಿಸಿ, ಕೆಂಗಣ್ಣಿಗೆ ಗುರಿಯಾಗಿದ್ದ ತ್ರಿಶಾ: ಆ ಸಮಯದಲ್ಲಿ ನಟಿ ತ್ರಿಶಾ ಅವರು ದಕ್ಷಿಣ ಭಾರತದಲ್ಲಿ ಪೇಟಾ ಸಂಸ್ಥೆಯ ಬ್ರಾಂಡ್ ರಾಯಭಾರಿ ಆಗಿದ್ದರು. ಅದೇ ಸಮಯದಲ್ಲಿ ಜಲ್ಲಿಕಟ್ಟು ಸ್ಪರ್ಧೆಗೆ ಅವಕಾಶ ಕೋರಿ ಭಾರೀ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ತ್ರಿಶಾ ಅವರು ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು. ಪರೋಕ್ಷವಾಗಿ ಜಲ್ಲಿಕಟ್ಟು ವಿರೋಧಿಸುವ ಟ್ವೀಟ್ ಇದಾಗಿತ್ತು. ಇದರಿಂದ ಜನ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ತ್ರಿಶಾ ಕ್ಷಮೆಯಾಚಿಸಿದ್ದರು.
ಮುರಿದು ಬಿದ್ದ ಮದುವೆ: ಇನ್ನು ವಿವಾಹದ ವಿಚಾರದಲ್ಲೂ ತ್ರಿಶಾ ಸುದ್ದಿಯಾಗಿದ್ದರು. ಅವರು ಉದ್ಯಮಿ ವರುಣ್ ಮಣಿಯನ್ ಎಂಬವರ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಇದಾದ ಕೆಲ ಸಮಯದಲ್ಲೇ ಅವರು ಮದುವೆ ಆಗಲು ನಿರಾಕರಿಸಿದ್ದರು. ಈ ವಿಚಾರ ಕೂಡ ಅಂದು ವಿವಾದಕ್ಕೆ ಕಾರಣವಾಗಿತ್ತು.
ಸ್ನಾನ ಮಾಡುವ ವಿಡಿಯೋ ವೈರಲ್.. ತ್ರಿಶಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿತ್ತು. ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಪ್ರೇಕ್ಷಕರ ಮನಗೆದ್ದಿದ್ದರು. ಅಂದು ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬರು ಸ್ನಾನ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದು ಮಾರ್ಫ್ ಮಾಡಿರುವ ಫೇಕ್ ವಿಡಿಯೋವೆಂದು ತ್ರಿಶಾ ಸ್ಪಷ್ಟನೆ ನೀಡಿದ್ದರು.
ವಿವಾದಕ್ಕೆ ಗುರಿಯಾದ ಹಿರಿಯ ನಟ: ʼಲಿಯೋʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಹಿರಿಯ ನಟ ಮನ್ಸೂರ್ ಆಲಿಖಾನ್ ಅವರು ಸುದ್ದಿಗೋಷ್ಟಿಯೊಂದರಲ್ಲಿ ತ್ರಿಶಾ ಅವರ ಪಾತ್ರದ ಬಗ್ಗೆ ಹೇಳುತ್ತಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.
ತನಗೆ ʼಲಿಯೋʼ ಸಿನಿಮಾದಲ್ಲಿ ತ್ರಿಶಾ ಜೊತೆ ರೇಪ್ ಸೀನ್ ಮಾಡಲು ಸಿಗಲಿಲ್ಲ ಎನ್ನುವ ಮೂಲಕ ದೊಡ್ಡ ವಿವಾದಕ್ಕೆ ಕಾರಣವಾಗಿದ್ದರು. ಈ ಹೇಳಿಕೆಯ ಪರಿಣಾಮ ಕಲಾವಿದರ ಸಂಘದಿಂದ ಮನ್ಸೂರ್ ಆಲಿಖಾನ್ ಕೆಲ ಸಮಯ ಬ್ಯಾನ್ ಆಗಿದ್ದರು. ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು.
ರೆಸಾರ್ಟ್ ಹೇಳಿಕೆ: ತ್ರಿಶಾ ಅವರ ಸುತ್ತ ಇತ್ತೀಚೆಗೆ ಸಾಗಿದ ವಿವಾದ ಇದು. ಎಐಎಡಿಎಂಕೆ ಮಾಜಿ ಸದಸ್ಯ ಟೀಕಿಸುವ ಭರದಲ್ಲಿ ತ್ರಿಶಾ ಅವರ ಹೆಸರನ್ನು ಎಳೆದು ತಂದಿದ್ದರು. ತ್ರಿಶಾ ಅವರನ್ನು ಶಾಸಕರ ಕೋರಿಕೆಯ ಮೇರೆಗೆ ರೆಸಾರ್ಟ್ ಗೆ ಕರೆಸಿಕೊಳ್ಳಲಾಗಿತ್ತು. ಇದಕ್ಕಾಗಿ ತ್ರಿಶಾ ಅವರಿಗೆ 25 ಲಕ್ಷ ಕೊಟ್ಟು ರೆಸಾರ್ಟ್ ಗೆ ಕರೆದುಕೊಂಡು ಬರಲಾಗಿತ್ತು ಎನ್ನುವ ಹೇಳಿಕೆಯನ್ನು ನೀಡಿ ಭಾರೀ ವಿವಾದಕ್ಕೆ ಒಳಗಾಗಿದ್ದರು.
ಈ ಬಗ್ಗೆ ನಟಿ ತ್ರಿಶಾ ಪ್ರಚಾರಗಿಟ್ಟಿಸಿಕೊಳ್ಳಲು ಹಾಗೂ ಎಲ್ಲರ ಗಮನ ಸೆಳೆಯಲು ಜನ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ. ಇದನ್ನು ಪದೇ ಪದೇ ನೋಡುವುದು ಅಸಹ್ಯಕರವಾಗಿದೆ. ಇವರ ಹೇಳಿಕೆ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು. ನನ್ನ ಲೀಗಲ್ ಟೀಮ್ ಇದನ್ನು ನೋಡಿಕೊಳ್ಳುತ್ತದೆ ಎಂದು ತ್ರಿಶಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು, ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.