Missing; ಶಿರ್ವ: ತಾಯಿ-ಮಗು ನಾಪತ್ತೆ
ಈ ಹಿಂದೆಯೂ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು...
Team Udayavani, Feb 24, 2024, 8:33 PM IST
ಶಿರ್ವ : ಇಲ್ಲಿನ ಪಂಜಿಮಾರು ಕೋಡುಗುಡ್ಡೆ ಶಾಲೆಯ ಬಳಿಯ ನಿವಾಸಿ ಶಕೀಲ್ ಅವರ ಪತ್ನಿ ಸಾಜಿದಾ ಬಾನು (35) ತನ್ನ ಎರಡೂವರೆ ವರ್ಷದ ಪುತ್ರಿ ಮುಹಿಜ ಬಾನುವಿನೊಂದಿಗೆ ಫೆ. 22 ರಂದು ಬೆಳಗ್ಗೆ 10 ಗಂಟೆಗೆ ಮಣಿಪಾಲದ ಈಶ್ವರನಗರದಲ್ಲಿರುವ ಶಕೀಲ್ ಅವರ ಅಕ್ಕ ಸಿಮ್ರಾನ್ ಅವರ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಶಕೀಲ್ ಫೆ. 21ರಂದು ತನ್ನ ಪತ್ನಿ ಮತ್ತು ಮಗುವನ್ನು ಅಕ್ಕ ಸಿಮ್ರಾನ್ ಅವರ ಮಣಿಪಾಲದ ಈಶ್ವರನಗರದಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದರು. ಫೆ. 22 ರಂದು ಬೆಳಗ್ಗೆ ಶಿರ್ವದ ಮನೆಗೆ ವಾಪಾಸು ಹೊರಡುವಾಗ ,ಸಾಜಿದಾ ಬಾನು ತನ್ನನ್ನು ಬಿಟ್ಟುಬಿಡಿ,ತನ್ನಷ್ಟಕ್ಕೆ ತಾನು ಎಲ್ಲಾದರೂ ಕೆಲಸ ಮಾಡಿಕೊಂಡು ಇರುತ್ತೇನೆ . ನೀವು ಮಸೀದಿಗೆ ಬಂದು ವಿಚ್ಛೇದನ ನೀಡಿ ಎಂದು ಗಂಡನಲ್ಲಿ ತಿಳಿಸಿದ್ದು, ಹೋಗುವಾಗ ಬ್ಯಾಗಿನಲ್ಲಿ ಮಗುವಿನ ಬಟ್ಟೆಯನ್ನು ತೆಗೆದುಕೊಂಡು ಹೋಗಿದ್ದಾರೆ.
ಈಕೆ ಈ ಹಿಂದೆಯೂ ಹಲವಾರು ಬಾರಿ ಮನೆಯಿಂದ ಹೇಳದೆ ಹೋಗುತ್ತಿದ್ದು ಬಳಿಕ ವಾಪಾಸು ಬರುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಪಡುಬಿದ್ರಿ ಠಾಣೆಯಲ್ಲಿ 2 ಬಾರಿ ಈಕೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಳಿಕ ಪತ್ತೆಯಾಗಿದ್ದರು.ಸಾಜಿದಾ ಬಾನು ಮಗುವಿನೊಂದಿಗೆ ಮಣಿಪಾಲದ ಅಕ್ಕನ ಮನೆಯಿಂದ ಹೋದವರು ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದೇ ಇದ್ದು ಪತಿ ಶಕೀಲ್ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.