3 ತಿಂಗಳಲ್ಲಿ ಮಸೂದೆ ಅಂಗೀಕರಿಸಿ ಅರ್ಚಕರಿಗೆ ಸಹಾಯ; ಡಿಸಿಎಂ ಡಿ.ಕೆ.ಶಿ.
ಬಿಜೆಪಿಯವರು ಧರ್ಮ- ದೇಗುಲಗಳ ವಿರೋಧಿಗಳು ಎಂಬುದು ಸಾಬೀತು
Team Udayavani, Feb 24, 2024, 11:12 PM IST
ಶಿವಮೊಗ್ಗ: ಅರ್ಚಕರಿಗೆ ಒಳಿತು ಮಾಡಲು ಸರಕಾರ ಮುಂದಾಗಿತ್ತು. ಅದಕ್ಕೆ ಬಿಜೆಪಿ ಮತ್ತು ಜೆಡಿಎಸ್ ವಿರೋಧಿಸಿತು. ಆದರೆ ಈ ಸಂಬಂಧದ ಮಸೂದೆಯನ್ನು ಮುಂದಿನ ದಿನಗಳಲ್ಲಿ ಅಂಗೀಕರಿಸುವುದು ಖಚಿತ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯಗಳಿಗೆ ಸಹಾಯ ಮಾಡುವ ದೂರಾಲೋಚನೆ ಯಿಂದ ಹೊಸ ಮಸೂದೆಯನ್ನು ಮಂಡಿಸಿದ್ದೆವು. ಆದರೆ ವಿಪಕ್ಷದ ವಿರೋಧದಿಂದ ಅಂಗೀಕಾರ ಆಗಿಲ್ಲ. ಇನ್ನು ಮೂರು ತಿಂಗಳಲ್ಲಿ ನಾವು ವಿಧಾನಸಭೆಯಲ್ಲಿ ಬಹುಮತ ಪಡೆಯುತ್ತೇವೆ. ಆಗ ಈ ಮಸೂದೆ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಅರ್ಚಕರ ಪ್ರಭಾವದಿಂದ ನಾವು ಶಿಲೆಯಲ್ಲೂ ಶಿವನನ್ನು ಕಾಣು ತ್ತೇವೆ. ಹೀಗಾಗಿ ಈ ಮಸೂದೆ ಮೂಲಕ ದೊಡ್ಡ ದೇವಾಲಯಗಳ ಆದಾಯದಲ್ಲಿ ಶೇ.10ರಷ್ಟನ್ನು ತೆಗೆದುಕೊಂಡು ಅದನ್ನು ಅರ್ಚಕರ ವೇತನ, ವಿಮೆ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಮುಂದಾಗಿದ್ದೆವು. ದೇವಾಲಯ, ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ಹಾಗೂ ಜೆಡಿಎಸ್‌ನವರು ಮಸೂದೆಯನ್ನು ಸೋಲಿಸಿ ತಾವು ದೇವಾಲಯಗಳ ವಿರೋಧಿಗಳು ಎಂದು ಸಾಬೀತು ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಸೇರಲು ಮುಕ್ತ ಆಹ್ವಾನ
ಇಡೀ ರಾಜ್ಯದಲ್ಲಿ ಪಕ್ಷದ ಸಿದ್ಧಾಂತ ಒಪ್ಪಿ ಯಾರಾದರೂ ಬರಬಹುದು ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರಲು ಬಹಿರಂಗ ಆಹ್ವಾನ ನೀಡಿದರು.
ದೇವರ ಹುಂಡಿಯ ನಯಾಪೈಸೆಯನ್ನೂ
ಸರಕಾರ ಪಡೆಯದು: ಎಚ್.ಕೆ. ಪಾಟೀಲ್
ಬಾಗಲಕೋಟೆ: ಧಾರ್ಮಿಕ ದತ್ತಿ¤ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಬಿಜೆಪಿಯವರು ಅರ್ಥ ಮಾಡಿಕೊಂಡಿಲ್ಲ. ಈ ಕಾನೂನಿನಿಂದ ದೇವರ ಹುಂಡಿಯ ನಯಾಪೈಸೆಯನ್ನೂ ಸರಕಾರ ಪಡೆಯದು. ಅದಕ್ಕೆ ಅವಕಾಶವೂ ಇಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಬಾದಾಮಿಯ ಹೂಲಗೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆ ಮಸೂದೆ ಹಿಂದೂ ಗುಡಿಗಳಿಗೆ ಮಾರಕವಾಗಿಲ್ಲ. ಈಗಾಗಲೇ ಇದ್ದ ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ. ಸರಿಯಾಗಿ ತಿಳಿದುಕೊಳ್ಳದೆ ಅನಾವಶ್ಯಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ನಾವು ದೇವರ ಹುಂಡಿಗೆ ಕೈ ಹಾಕುವವರಲ್ಲ. ಇಟ್ಟಿಗೆ ಕೊಟ್ಟು ರೊಕ್ಕಾ ಕೇಳುವವರೂ ಅಲ್ಲ. ಒಂದು ನಯಾಪೈಸೆ ಹುಂಡಿ ಹಣವನ್ನೂ ಸರಕಾರ ಪಡೆಯದು. ಹುಂಡಿ ದುಡ್ಡು ಸರಕಾರದ ಯಾವ ಖಾತೆಗೂ ಜಮೆ ಆಗೋದಿಲ್ಲ. ಅದು ಆಯಾ ದೇವಾಲಯದ ಖಾತೆಯಲ್ಲೇ ಇರುತ್ತದೆ. ಇದರ ಅರ್ಥ ವಿಜಯೇಂದ್ರ ಅವರಿಗೆ ಹೇಳಬೇಕಾ, ಕೋಟ ಶ್ರೀನಿವಾಸ ಪೂಜಾರಿಗೆ ಹೇಳಬೇಕಾ, ಅಥವಾ ಅಶೋಕ್‌ಗೆ ಹೇಳಬೇಕಾ ಎಂದು ಪ್ರಶ್ನಿಸಿದರು.
ಧಾರ್ಮಿಕ ಕಾನೂನು ತಿದ್ದುಪಡಿ ಮಾಡಿದ್ದೇ ಬಿಎಸ್‌ವೈ
ಬಾಗಲಕೋಟೆ: ಧಾರ್ಮಿಕ ದತ್ತಿ ಕಾನೂನಿಗೆ ತಿದ್ದುಪಡಿ ತಂದಿದ್ದೇ ಯಡಿಯೂರಪ್ಪ. ಇದು ವಿಜಯೇಂದ್ರರಿಗೆ ಗೊತ್ತಿರಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಬಾದಾಮಿ ತಾಲೂಕಿನ ಹೂಲಗೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 2011ರಲ್ಲಿ ಬೇರೆ ಧಾರ್ಮಿಕ ಸಂಸ್ಥೆಗಳಿಗೆ ಹಣ ಕೊಡಬಹುದು ಎಂಬುದನ್ನು ಸೆಕ್ಷನ್ 19ರಲ್ಲಿ ನಿಯಮ ತಂದಿದ್ದರು. ಅದನ್ನು ಕೇವಲ ಸಿ ದರ್ಜೆ ದೇವಾಲಯಗಳಿಗೆ ಕೊಡಬೇಕೆಂದು ನಿಯಮ ತಂದಿದ್ದೇವೆ ಎಂದರು.
ಒಂದು ಸಾವಿರ ಸಿ ದರ್ಜೆ ದೇವಸ್ಥಾನಗಳಿಗೆ 25 ಕೋಟಿ ರೂ. ಬಿಡುಗಡೆ ಮಾಡುತ್ತೇವೆ. 7 ಕೋಟಿ ರೂ. ವೆಚ್ಚದಲ್ಲಿ 40 ಸಾವಿರ ಅರ್ಚಕರಿಗೆ 5 ಲಕ್ಷ ರೂ.ವರೆಗೆ ವಿಮೆ ಮಾಡಿಸುತ್ತೇವೆ. ಅರ್ಚಕರ ಮಕ್ಕಳ ಶಿಕ್ಷಣಕ್ಕೆ 5 ಕೋಟಿ ರೂ. ವಿದ್ಯಾರ್ಥಿ ವೇತನ ಕೊಡುತ್ತೇವೆ. ಅರ್ಚಕರ ಸಂಘದವರು, ಮನೆ ಕಟ್ಟಲು ಸಹಾಯ ಮಾಡಿ ಎಂದು ಹೇಳಿದ್ದರು. ಈ ವರ್ಷ ಅದಕ್ಕಾಗಿ 15 ಕೋಟಿ ರೂ.ಇಟ್ಟಿದ್ದೇವೆ ಎಂದರು.
ದತ್ತಿ ಕಾಯಿದೆ ಬಂದಿದ್ದು 1997ರಲ್ಲಿ. 2003ರಲ್ಲಿ ಈ ಕಾನೂನು ಜಾರಿ ಯಾಗಿದೆ. 2011ರಲ್ಲಿ ಈ ಕಾಯಿದೆಯಡಿ ದುಡ್ಡು ಕೊಟ್ಟಿದ್ದೇ ಯಡಿಯೂರಪ್ಪನವರು. ಸೆಂಟ್ರಲ್ ಕಾಮನ್ ಪೂಲ್ ಫಂಡ್‌ಗೆ ಶೇ.5ರಷ್ಟಿತ್ತು. ಯಡಿಯೂರಪ್ಪ ತಿದ್ದುಪಡಿ ತಂದು 5 ಲಕ್ಷದಿಂದ 10 ಲಕ್ಷ ರೂ. ಆದಾಯವಿರುವ ದೇವಸ್ಥಾನಗಳಿಗೆ ಶೇ.5 ಟೂಲ್ ಕೊಂಡುಕೊಳ್ಳಬೇಕೆಂದು ಹೇಳಿದ್ದರು. 10 ಲಕ್ಷಕ್ಕಿಂತ ಹೆಚ್ಚು ಆದಾಯವಿರುವ ದೇವಸ್ಥಾನಗಳಿಗೆ ಶೇ.10 ಟೂಲ್ ಮಾಡಿದ್ದರು. ವಿಧಾನಸಭೆಯಲ್ಲಿ ಬಿಜೆಪಿಯವರೇ ಇದನ್ನು ಸ್ವಾಗತಿಸಿ, ಸಲಹೆಯೂ ಕೊಟ್ಟಿದ್ದರು.
ವಿಜಯೇಂದ್ರ ಅವರು ಟ್ವೀಟ್ ಮಾಡಿದ ಮಾಡಿದ ಮೇಲೆ ಚರ್ಚೆ ಶುರುವಾಗಿದೆ ಎಂದು ಹೇಳಿದರು.
ಹಿಂದೂ ಧಾರ್ಮಿಕ ದತ್ತಿ ಕಾಯಿದೆ ಬೇರೆ, ಮುಸ್ಲಿಮರಿಗೆ ಬೇರೆಯೇ ಕಾನೂನು ಇದೆ. ದೇವಸ್ಥಾನಗಳ ಹಣ ಮುಸ್ಲಿಮರಿಗೆ ಹೋಗಲ್ಲ. 34 ಸಾವಿರಕ್ಕೂ ಅಧಿಕ ದೇವಸ್ಥಾನಗಳಿಂದ ಬರುವ ಹಣದಲ್ಲಿ ನಯಾ ಪೈಸೆ ಕೂಡ ಇನ್ನೊಂದು ದೇವಸ್ಥಾನಕ್ಕೆ ಕೊಡಲು ಆಗಲ್ಲ. ಬೇರೆ ಧರ್ಮ ಬಿಡಿ, ಒಂದು ದೇವಾಲಯದಿಂದ ಇನ್ನೊಂದು ದೇವಾಲಯಕ್ಕೂ ಕೊಡಲು ಬರಲ್ಲ. ಸರಕಾರಕ್ಕೂ ಈ ದೇವಾಲಯಗಳ ಹಣ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರಕಾರದ ಬೊಕ್ಕಸ ಖಾಲಿಯಾಗಿದ್ದು, ದೇವಸ್ಥಾನಗಳ ಹುಂಡಿಗೆ ಕೈ ಹಾಕಿದ್ದೇವೆ ಎಂಬ ವಿಜಯೇಂದ್ರ ಆರೋಪ ಸಂಪೂರ್ಣ ಸುಳ್ಳು. ಈ ಹಿಂದೆ ಸರಕಾರದ ಹುಂಡಿ ತುಂಬಿತ್ತಲ್ಲ, ಆಗ ದೇವಸ್ಥಾನಗಳಿಗೆ ಯಾಕೆ ಹಣ ಕೊಡಲಿಲ್ಲ? ಅರ್ಚಕರು-ನೌಕರರು ಮನೆ ಕಟ್ಟಲು, ಅವರ ಮಕ್ಕಳ ಶಿಕ್ಷಣಕ್ಕೆ ಯಾಕೆ ಸಹಾಯ ಮಾಡಲಿಲ್ಲ? ಸಿ ದರ್ಜೆಯ ದೇವಸ್ಥಾನಗಳಿಗೆ ಬಿಜೆಪಿಯವರು ಯಾಕೆ ಸಹಾಯ ಮಾಡಲಿಲ್ಲ?
– ರಾಮಲಿಂಗಾ ರೆಡ್ಡಿ, ಸಚಿವ
ಏನು ಮಾಡಲು ಸಾಧ್ಯ: ಸಿಎಂ
ಹಾಸನ: ಹೆಚ್ಚು ಆದಾಯ ಸಂಗ್ರಹ ವಾಗುವ ಹಿಂದೂ ದೇವಾಲಯಗಳ ಆದಾಯದ ಸ್ವಲ್ಪ ಪಾಲನ್ನು ಕಡಿಮೆ ಆದಾಯ ಇರುವ ದೇಗುಲಗಳಿಗೆ ಹಂಚಿಕೆ ಮಾಡಲು ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಮುಂದಾಗಿತ್ತು. ಆದರೆ ಇದಕ್ಕೆ ವಿಪಕ್ಷದವರು ವಿರೋಧಿಸುತ್ತಿದ್ದಾರೆ ಎಂದರೆ ಏನು ಮಾಡಲು ಸಾಧ್ಯ ಎಂದು ಸಿಎಂಸಿದ್ದರಾಮಯ್ಯ ಅವರು ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಹೇಳಿದರು.
ಹಿಂದೂ ದೇಗುಲಗಳ ಆದಾಯವನ್ನು ಸರಕಾರ ಲೂಟಿ ಮಾಡಲು ಹೊರಟಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಲೂಟಿ ಮಾಡಿದ್ದರಿಂದಲೇ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರು ತಿರಸ್ಕರಿಸಿ ವಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಿಸಿದ್ದಾರೆ ಎಂದು ತಿರುಗೇಟು ನೀಡಿದರು.
ದೇಗುಲದ ಹುಂಡಿಗೆ ಕೈಹಾಕಿದ
ಜಾತ್ಯತೀತ ಸರಕಾರ: ಸಿ.ಟಿ. ರವಿ
ಚಿಕ್ಕಮಗಳೂರು: ಜಾತ್ಯತೀತ ಎನ್ನುವ ಕಾಂಗ್ರೆಸ್ ಅಪ್ಪಟ ಜಾತಿವಾದಿ. ಇವರ ಜಾತ್ಯತೀತತೆ ಬರೀ ಢೋಂಗಿ. ಕಾಂಗ್ರೆಸ್ ಮೊದಲಿನಿಂದಲೂ ಹೆಚ್ಚು ಕೋಮುವಾದಿ ಮತ್ತು ಕ್ರಿಮಿನಲ್ ಪಾರ್ಟಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.
ಜಾತ್ಯತೀತ ಎನ್ನುವ ಸರಕಾರ ದೇವಸ್ಥಾನ ಹುಂಡಿಗೆ ಯಾಕೆ ಕೈಹಾಕಿದೆ? ಇವರು ನಿಜವಾದ ಜಾತ್ಯತೀತರಾಗಿದ್ದರೆ ಮಸೀದಿ ಹುಂಡಿಯಲ್ಲಿ ಹತ್ತು ಪರ್ಸೆಂಟ್, ಚರ್ಚ್ ಹುಂಡಿಯಲ್ಲೂ ಹತ್ತು ಪರ್ಸೆಂಟ್ ಅನ್ನಬೇಕಿತ್ತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.